Breaking News

ಣ್ಣಿನ ವಾಹನ ಅಂತ ಬೋರ್ಡ್ ಹಾಕಿ, ಗಂಧದ ತುಂಡುಗಳನ್ನ ಸಾಗಾಟ ಮಾಡಲು ಹೋಗಿ ತಗಲಾಕಿಕೊಂಡಿದ್ದಾನೆ.

Spread the love

ಬೆಳಗಾವಿ: ಇತ್ತೀಚೆಗೆ ಈ ಸಿನಿಮಾಗಳಲ್ಲಿನ ದೃಶ್ಯಗಳನ್ನ ಕಳ್ಳರು ತುಂಬಾ ಚೆನ್ನಾಗಿಯೆ ಬಳಸಿಕೊಳ್ಳುತ್ತಿದ್ದಾರೆ. ಅಪರಾಧ ಮಾಡಲು ಸುಲಭ ದಾರಿ ಹಿಡಿಯಲು ಹೋಗಿ ತಗಲಾಕಿಕೊಳ್ಳುತ್ತಿದ್ದಾರೆ.

ಅಂಥದ್ದೇ ಘಟನೆಯೊಂದು ಮೀರಜ್ ನಲ್ಲಿ ವರದಿಯಾಗಿದೆ.

ಇತ್ತೀಚೆಗೆ ರಿಲೀಸ್ ಆದ ಪುಷ್ಪ ಸಿನಿಮಾವನ್ನ ಎಲ್ರೂ ನೋಡಿಯೇ ಇರ್ತೀರಾ. ಅದರಲ್ಲಿ ಅಲ್ಲು ಅರ್ಜುನ್ ಗಂಧದ ತುಂಡುಗಳನ್ನ ಗೊತ್ತಾಗದ ರೀತಿಯಲ್ಲಿ ಸಾಗಿಸ್ತಾರೆ. ಹಾಲಿನ ಟ್ಯಾಂಕ್ ನಲ್ಲಿ ಗಂಧ ಸಾಗಾಟ ಮಾಡಲಾಗುತ್ತೆ. ಖತರ್ನಾಕ್ ಖದೀಮ ಇದನ್ನೇ ಸ್ಪೂರ್ತಿಯಾಗಿ ಪಡೆದು, ಹಣ್ಣಿನ ವಾಹನ ಅಂತ ಬೋರ್ಡ್ ಹಾಕಿ, ಗಂಧದ ತುಂಡುಗಳನ್ನ ಸಾಗಾಟ ಮಾಡಲು ಹೋಗಿ ತಗಲಾಕಿಕೊಂಡಿದ್ದಾನೆ.

ಬೆಂಗಳೂರಿನ ಆನೇಕಲ್ ಮೂಲದ ಯಾಸೀನ್ ಇನಾಯತ್ ಈ ರೀತಿ ಮಾಡಲು ಹೋಗಿ ಮಹಾರಾಷ್ಟ್ರದ ಮೀರಜ್ ನಲ್ಲಿ ಸಿಕ್ಕಿಬಿದ್ದಿದ್ದಾನೆ. ಕೋವಿಡ್ ತುರ್ತು ಸೇವೆಗೆ ಹಣ್ಣು ಮಾರಾಟದ ವಾಹನ ಎಂದು ಬೋರ್ಡ್ ಹಾಕಿಕೊಂಡು ಆತ ಓಡಾಡುತ್ತಿದ್ದನಂತೆ. ಈ ಬಗ್ಗೆ ಮಾಹಿತಿ ಮೇರೆಗೆ ದಾಳಿ ಮಾಡಿ ಆತನನ್ನ ಎಡೆಮುರಿ ಕಟ್ಟಿದ್ದಾರೆ. 2 ಕೋಟಿ 45 ಲಕ್ಷ ಮೊತ್ತದ ರಕ್ತ ಚಂದನ ಜೊತೆಗೆ ಒಂದು ವಾಹನ ವಶ ಪಡಿಸಿಕೊಳ್ಳಲಾಗಿದೆ.


Spread the love

About Laxminews 24x7

Check Also

ಪ್ರಧಾನಿ ಮೋದಿ ಒಂದು ದಿನ ತಮ್ಮ ಕೃತ್ಯಗಳಿಗೆ ಪಶ್ಚಾತ್ತಾಪ ಪಡುತ್ತಾರೆ: ಮಲ್ಲಿಕಾರ್ಜುನ ಖರ್ಗೆ

Spread the loveಕಲಬುರಗಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುವಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ