ಮೈಸೂರು: ಸಿದ್ದರಾಮಯ್ಯ ನೀವೊಬ್ಬರೇ ಗಂಡಸರಾ? ನಿಮ್ಮನ್ನು ಯಾವ ಪ್ರಮುಖ ನಾಯಕರು ಅಂತ ಕರೆಯುತ್ತಿದ್ದಾರೆ, ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾರ ಅಂತ ಬಿಜೆಪಿ ಹೆಚ್.ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾತನಾಡಿದ್ದಾರೆ, ಇದೇ ವೇಳೆ ಅವರು ಮಾತನಾಡಿ, ಸಿದ್ದರಾಮಯ್ಯ ಕಾಂಗ್ರೆಸ್ ಮುಗಿಸಿ ಹೊರಡುತ್ತಾರೆ ಅಂತ ಹೇಳಿದರು.
ಅವರ ಬೆಂಬಗಲಿಗರು ಮಾತ್ರ ಅವರನ್ನು ನಾಯಕರು ಕರೆಯುತ್ತಿದ್ದಾರೆ ಅಂತ ಹೇಳಿದರು.
ಇನ್ನೂ ಗ್ಯಾಸ್ ಲೈನ್ ಗೆ ಸಂಬಂಧಪಟ್ಟಂತೆ ಮಾತನಾಡಿ, ಇದು ಕೇಂದ್ರ ಸರ್ಕಾರ ಯೋಜನೆಯಾಗಿದ್ದು, ಅದಕ್ಕೆ ಶಾಸಕರು ಯಾಕೆ ವಿರೋಧ ಮಾಡುತ್ತಿದ್ದಾರೆ ಅಂತ ಪ್ರಶ್ನೆ ಮಾಡಿದರು. ಜನ ಹಿತಕ್ಕಾಗಿ ಕೇಂದ್ರ ಸರ್ಕಾರದ ಈ ಯೋಜನೆಯನ್ನು ಮೈಸೂರಿನಲ್ಲಿ ಜಾರಿಗೊಳಿಸಬೇಕು ಅಂತ ಹೇಳಿದರು. ಇನ್ನೂ ಗುಂಡಿ ಬೀಳುವ ಕಾರಣಕ್ಕೆ ಇದನ್ನು ವಿರೋಧಿಸುವುದು ಸಲ್ಲದು ಅಂತ ಹೇಳಿದರು. ಈ ಹಿಂದೆ ಕೂಡ ನಗರದಲ್ಲಿ ಗುಂಡಿ ತೆಗೆದು ಇಲ್ವಾ ಅಂತ ಶಾಸಕ ನಾಗೇಂದ್ರರನ್ನು ಪ್ರಶ್ನೆ ಮಾಡಿದರು. ಈ ಯೋಜನೆ ಜಾರಿಗೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕು ಅಂಥ ಹೇಳಿದರು.