Breaking News

ಗಡಿಯಲ್ಲಿ ಚೆಕ್​ಪೋಸ್ಟ್ ಸಿಬ್ಬಂದಿ ಆರ್​ಟಿಪಿಸಿಆರ್ ವರದಿ ಕೇಳುತ್ತಾರೆ, ವರದಿ ಇಲ್ಲದಿದ್ದರೆ ಲಂಚ ನೀಡಬೇಕಾಗುತ್ತದೆ.?

Spread the love

ಬೆಳಗಾವಿ :ರಾಜ್ಯದಲ್ಲಿ ಕರೊನಾ ಪ್ರಕರಣ ತಗ್ಗುತ್ತಿರುವ ಕಾರಣಕ್ಕೆ ರಾತ್ರಿ ಕರ್ಫ್ಯೂ ಸೇರಿ ಅನೇಕ ನಿರ್ಬಂಧಗಳನ್ನು ಸಡಿಲಿಸಿರುವ ರಾಜ್ಯ ಸರ್ಕಾರ, ಗಡಿ ಪ್ರದೇಶದಲ್ಲಿ ಸಂಚರಿಸುವ ವಾಹನ ಸವಾರರ ಜೀವನವನ್ನು ಮಾತ್ರ ನರಕವನ್ನಾಗಿಸಿದೆ.

ಯಾವುದೇ ರ್ತಾಕ ಆಧಾರವಿಲ್ಲದೆ ಅವೈಜ್ಞಾನಿಕವಾಗಿ ವಿಧಿಸಿರುವ ನಿರ್ಬಂಧಗಳಿಂದ ಆರ್​ಟಿಪಿಸಿಆರ್ ಕಡ್ಡಾಯ ಪ್ರಮಾಣ ಪತ್ರವನ್ನೇ ನೆಪವಾಗಿಸಿಕೊಂಡು ವಾಹನ ಸವಾರರಿಂದ ರಾಜಾರೋಷವಾಗಿ ಹಣ ಸುಲಿಗೆ ಮಾಡಲಾಗುತ್ತಿದೆ. ಚೆಕ್​ಪೋಸ್ಟ್ ಸಿಬ್ಬಂದಿಗೆ ಲಂಚ ನೀಡುವುದರಿಂದ ತಪ್ಪಿಸಿಕೊಳ್ಳಲು ಅನೇಕರು ನಕಲಿ ಆರ್​ಟಿಪಿಸಿಆರ್ ವರದಿಗಳ ಮೊರೆ ಹೋಗಿದ್ದಾರೆ. ಇದರಿಂದ ಕರೊನಾ ನಿರ್ಬಂಧ ಮತ್ತಷ್ಟು ಗೊಂದಲ, ಭ್ರಷ್ಟಾಚಾರ, ಕಿರಿಕಿರಿಗೆ ಎಡೆಮಾಡಿಕೊಟ್ಟಿದೆ.

ವಿಶ್ವಾದ್ಯಂತ ಮಾನ್ಯತೆ ಪಡೆದಿರುವ ಕೋವಿಡ್ ಲಸಿಕೆಗೂ ಮಾನ್ಯತೆ ನೀಡದ ಈ ನಿರ್ಬಂಧಗಳಿಂದ ಅನೇಕ ವಿದ್ಯಾರ್ಥಿಗಳು, ಪ್ರವಾಸಿಗರು, ವ್ಯಾಪಾರಿಗಳು, ಕೂಲಿಕಾರ್ವಿುಕರು ತೊಂದರೆಗೆ ಒಳಗಾಗುತ್ತಿದ್ದಾರೆ ಎಂಬ ವಿಚಾರ ಗಡಿ ಪ್ರದೇಶಗಳಲ್ಲಿ ಭಾನುವಾರ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್​ನಿಂದ ಬಯಲಾಗಿದೆ. 2022ರ ಜನವರಿ ಮೊದಲ ವಾರದಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಸುತ್ತೋಲೆಗಳ ಅನ್ವಯ, ಮಹಾರಾಷ್ಟ್ರ, ಕೇರಳ ಗೋವಾದಿಂದ ಆಗಮಿಸುವವರು 72 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ಆರ್​ಟಿಪಿಸಿಆರ್ ಪ್ರಮಾಣಪತ್ರ ಹೊಂದಬೇಕು.

ಈ ಆದೇಶ ಹೊರಬಿದ್ದ ದಿನದಿಂದಲೇ ಗಡಿಯಲ್ಲಿ ಗೊಂದಲ ಹಾಗೂ ಭ್ರಷ್ಟಾಚಾರ ಆರಂಭವಾಗಿದೆ. ಆರ್​ಟಿಟಿಪಿಸಿಆರ್ ವರದಿ ಹೊಂದಿರಬೇಕೆಂಬ ಅವೈಜ್ಞಾನಿಕ ನಿಯಮದಿಂದಾಗಿ ಚೆಕ್​ಪೋಸ್ಟ್​ಗಳಲ್ಲಿ ನಿತ್ಯ ಪ್ರಯಾಣಿಕರು ಹಾಗೂ ಪೊಲೀಸರ ವಾಗ್ವಾದ ಸಾಮಾನ್ಯವಾಗಿದೆ.

ನಕಲಿ ದಂಧೆ: ಗಡಿಯಲ್ಲಿ ಚೆಕ್​ಪೋಸ್ಟ್ ಸಿಬ್ಬಂದಿ ಆರ್​ಟಿಪಿಸಿಆರ್ ವರದಿ ಕೇಳುತ್ತಾರೆ, ವರದಿ ಇಲ್ಲದಿದ್ದರೆ ಲಂಚ ನೀಡಬೇಕಾಗುತ್ತದೆ. ಹೀಗಾಗಿ ಅನೇಕರು ನಕಲಿ ಆರ್​ಟಿಪಿಸಿಆರ್ ವರದಿ ಮೊರೆ ಹೋಗುತ್ತಿರುವ ಪ್ರಕರಣ ಮಹಾರಾಷ್ಟ್ರದ ಕೊಗನೊಳ್ಳಿ, ಕೇರಳ ಗಡಿಯಲ್ಲಿರುವ ಮೂಲೆಹೊಳೆ ಚೆಕ್​ಪೋಸ್ಟ್​ಗಳಲ್ಲಿ ಕಂಡುಬಂದಿದೆ. ಗಡಿಯಲ್ಲಿ ಪ್ರಯಾಣಿಕ ವಾಹನಗಳು ಹೆಚ್ಚಾಗಿ ರಾತ್ರಿ ವೇಳೆ ಹಾಗೂ ಬೆಳಗಿನ ಜಾವ ಸಂಚರಿಸುತ್ತವೆ


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ