Breaking News

ವಿಶ್ವದಾಖಲೆ ಬರೆದ ಹುಬ್ಬಳ್ಳಿ ಹುಡುಗಿ

Spread the love

ಹುಬ್ಬಳ್ಳಿ: ಸಾಮಾನ್ಯವಾಗಿ ದೊಡ್ಡ – ದೊಡ್ಡ ಬಾರ್​ಗಳಲ್ಲಿ ಬಾರ್​ಟೆಂಡರ್​ಗಳನ್ನು ನೀವು ನೋಡಿರ್ತೀರಾ.

ಅದರಲ್ಲಿ ಬಾರ್​ಟೆಂಡರ್​ಗಳು ಬಾಟಲಿ ತಿರುಗಿಸುವುದನ್ನು ನೋಡಿಯೇ ಹೌ ಹಾರಿರುತ್ತೇವೆ. ಅಂಥದ್ದರಲ್ಲಿ ಇಲ್ಲೋರ್ವ ಯುವತಿ ಗ್ರಾಮೀಣ ಪ್ರದೇಶದಿಂದ ಬಂದು ಬಾರ್​ಟೆಂಡರ್​ನಲ್ಲಿ ಇದೀಗ ವಿಶ್ವ ದಾಖಲೆ ಬರೆದಿದ್ದಾರೆ.

 ವಿಶ್ವದಾಖಲೆ ಬರೆದ ಹಳ್ಳಿ ಹುಡುಗಿಹೌದು. ಹೀಗೆ ಗಿರ ಗಿರ ಎಂದು ಬಾಟಲಿಗಳಲ್ಲಿ ತಿರುಗಿಸುತ್ತ ನೋಡುಗರನ್ನು ಅಚ್ಚರಿಗೆ ಒಳಪಡಿಸುವ ಇವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ಕವಿತಾ ಮೇದಾರ. ಹೀಗೆ ಇವರ ಈ ಕಲೆಗೆ ಜಗ್ಲಿಂಗ್ ಮತ್ತು ಫೆರಿಂಗ್ ಅಂತ ಹೆಸರು.

ವಿಶ್ವದಾಖಲೆ ಬರೆದ ಹಳ್ಳಿ ಹುಡುಗಿ ಕವಿತಾ ಮೇದಾರಸಾಮಾನ್ಯವಾಗಿ ಸಿನಿಮಾಗಳಲ್ಲಿ ಅಥವಾ ದೊಡ್ಡ – ದೊಡ್ಡ ಪಬ್, ಬಾರ್​ಗಳಲ್ಲಿ ಈ ರೀತಿಯಾಗಿ ಹುಡುಗರು ತಿರುಗಿಸುವುದನ್ನ ನೀವು ನೋಡಿರ್ತೀರಾ. ಆದರೆ ಇದನ್ನು ಈ ಯುವತಿ ಕಲಿತಿದ್ದು,‌ ಇದರಲ್ಲಿಯೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್​ನಲ್ಲಿ ಸಾಧನೆ ಮಾಡಿದ್ದಾರೆ. ಅಲ್ಲದೇ ಭಾರತದಲ್ಲಿಯೇ ಜಗಲಿಂಗ್ ಅಂಡ್​​ ಫೇರಿಂಗ್​ನಲ್ಲಿ ದಾಖಲೆ ಬರೆದ ಮೊದಲ ಮಹಿಳೆ ಎಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ.

ಇನ್ನ ಇದನ್ನೆಲ್ಲ ಕಲಿಬೇಕು ಅಂತ ಸುಮ್ಮನೆ ಮಾತಲ್ಲಿ ಹೇಳುವುದ ಅಸಾಧ್ಯ. ನೋಡೋಕೆ ಎಷ್ಟು ರೋಮಾಂಚನವಾಗಿರುತ್ತದೆಯೋ ಇದನ್ನು ಕಲಿಯೋದು ಅಷ್ಟೇ ಟಫ್ ಕೂಡ. ಲಾಕ್​ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡ ಕವಿತಾ ಪುಣೆಯಲ್ಲಿ ಟ್ರೈನಿಂಗ್ ಪಡೆದು ಸದ್ಯ ವಿಶ್ವ ಬುಕ್ ಆಫ್ ರೆಕಾರ್ಡ್​ನಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ.

 ವಿಶ್ವದಾಖಲೆ ಬರೆದ ಹಳ್ಳಿ ಹುಡುಗಿಸ್ವಿಟ್ಜರ್ಲ್ಯಾಂಡ್​​ನಲ್ಲಿ ನಡೆಯುವ ಸ್ಪರ್ಧೆಗೆ ಈಗಾಗಲೇ ಕವಿತಾ ಆಯ್ಕೆಯಾಗಿದ್ದರು. ಆದರೆ ಹಣದ ತೊಂದರೆ ಆಗಿತ್ತು. ಅದೃಷ್ಟವಶಾತ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ತಂಡ ಭಾರತಕ್ಕೆ ಬಂದು ಸ್ಪರ್ಧೆ ಏರ್ಪಡಿಸಿ ಮಹಿಳೆಯ ದಾಖಲೆಗೆ‌ ಮುನ್ನುಡಿ ಬರೆದಿದ್ದಾರೆ. ಇವಳ ಸಾಧನೆ ಭಾರತ ಮಾತ್ರವಲ್ಲದೇ ಜಗತ್ತಿನ ಪ್ರಶಂಸೆಗೆ ಪಾತ್ರವಾಗುವಂತೆ ಮಾಡಿದೆ.

 ವಿಶ್ವದಾಖಲೆ ಬರೆದ ಹಳ್ಳಿ ಹುಡುಗಿಮಹಿಳೆ ಅಂದರೇ ಮನೆಯ ಕೆಲಸಕ್ಕೆ ಮಾತ್ರ ಸೀಮಿತವಾಗದೇ ಹೊಸ ಸಾಧನೆ ಮಾಡಬೇಕು ಎಂಬುವುದನ್ನು ‌ಕವಿತಾ ತೋರಿಸಿಕೊಟ್ಟಿದ್ದಾರೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ