ಬಾಗಲಕೋಟೆ : ಜಿಲ್ಲೆಯ ವಿವಿಧೆಡೆ ಕಲ್ಲು ಗಣಿಗಾರಿಕೆಗೆ ಪೂರೈಸಲು ಬಳಸುವ ಭಾರಿ ಸ್ಪೋಟಕ ವಸ್ತುಗಳನ್ನು ತಾಲೂಕಿನ ಹೊನ್ನಾಕಟ್ಟಿಯ ತೋಟದ ಮನೆಯ ಶೆಡ್ ವೊಂದರಲ್ಲಿ ಸಂಗ್ರಹಿಸಿಟ್ಟಿದ್ದು, ಗುರುವಾರ ಪೊಲೀಸರು ಹಠಾತ್ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಸಂಗಮ ಕ್ರಾಸ್ ಬಳಿಯ ಹೊನ್ನಾಕಟ್ಟಿ ಗ್ರಾಮದ ಗುರುನಾಥ ಹಾದಿಮನಿ ಎಂಬುವವರ ತೋಟದ ಮನೆಯ ಶೆಡ್‌ನಲ್ಲಿ ಈ ಭಾರಿ ಸ್ಪೋಟಕ ವಸ್ತುಗಳು ಪತ್ತೆಯಾಗಿದ್ದು, ಮಂಜುನಾಥ ಕಂಕಣಮೇಲಿ, ವಿಜಯ ನಾರಾ ಎಂಬುವವರು ಈ ಅಕ್ರಮ ಸ್ಟೋಟಕ ವಸ್ತುಗಳನ್ನು ಸಂಗ್ರಹಿಸಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ.
1.50 ಕೆ.ಜಿ. ಸೋಡಿಯಂ ನೈಟ್ರೇಟ್, 50 ಕೆ.ಜಿ. ಚಾರಕೋಲ್ ಪೌಡರ್ ಸೇರಿದಂತೆ 250 ಕೆ.ಜಿ. ಲಘು ಸ್ಪೋಟಕ ವಸ್ತುಗಳು, 250 ಕೆ.ಜಿ. ಕಚ್ಚಾ ಸ್ಪೋಟಕ ವಸ್ತುಗಳಾದ ಗಂಧಕ, ಸಲ್ಪರ್ ಮುಂತಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.