ಬೆಂಗಳೂರು: ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಆರು ವರ್ಷದ ಬಾಲಕಿ ಟಿಪ್ಪರ್ ಹರಿದು ಮೃತಪಟ್ಟಿರುವ ಘಟನೆ ಕುಮಾರಸ್ವಾಮಿ ಪೊಲೀಸ್ ಠಾಣೆಯ ಕೋಣನಕುಂಟೆ ಕ್ರಾಸ್ ಬಳಿ ಸಂಭವಿಸಿತು.
ಖಾಸಗಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಸಮನ್ವಿ(6) ಮೃತಪಟ್ಟ ಬಾಲಕಿ. ಅಪಘಾತ ವೇಳೆ ಗಾಯಗೊಂಡಿರುವ ತಾಯಿ ಅಮೃತಾ ನಾಯ್ಡು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಮ್ಮನೊಂದಿಗೆ ಸಮನ್ವಿ
ಅಮೃತಾ ನಾಯ್ಡು ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಗುರುವಾರ ಸಂಜೆ ಕೋಣನಕುಂಟೆ ರಸ್ತೆಯಿಂದ ವಾಜರಹಳ್ಳಿ ಕಡೆಗೆ ತೆರಳುತ್ತಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆ ಬಿದ್ದ ಸಮನ್ವಿ ಮೇಲೆ ಟಿಪ್ಪರ್ ಹರಿದು ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಬಾಲಕಿಯು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋದಲ್ಲಿ ಸ್ಪರ್ಧಿಯಾಗಿ ಮಿಂಚಿದ್ದರು ಎಂದು ತಿಳಿದು ಬಂದಿದೆ.
ಮೊದಲನೆ ಮಗು ಏಳು ತಿಂಗಳಿಗೆ ತೀರಿಕೊಂಡಿತು ಎಂದು ನಮ್ಮಮ್ಮ ಸೂಪರ್ ಸ್ಟಾರ್ ವೇದಿಕೇಲಿ ಹೇಳಿಕೊಂಡಿದ್ದರು.
ಎರಡನೇ ಮಗು ಆರು ವರ್ಷದ ಸಮನ್ವಿ
ಈಗ ಅಪಘಾತದಲ್ಲಿ ನಿಧನ.
ಮೂರನೇ ಮಗುವಿನ ನಿರೀಕ್ಷೆಯಲ್ಲಿ ಆ ತಾಯಿ ಈಗ ನಾಲಕ್ಕೂ ತಿಂಗಳ ಗರ್ಭಿಣಿ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವಾಗ್ ಹೇಳಿ ದೇವರು ಇದಾನೊ ಇಲ್ವೋ ಅನ್ನೋ ಪ್ರಶ್ನೆ ಮೂಡಲ್ವ? ದೇವರನ್ನ ಬೈಬೇಕು ಅನ್ಸಲ್ವ?
ಕೊನೆಪಕ್ಷ ದೇವರಲ್ಲಿ ಕೇಳ್ಕೊಳೋದು ಇಷ್ಟೇ,
ಆ ತಾಯಿಗೆ ಈ ಘಟನೆಯನ್ನು ಜೀರ್ಣಿಸಿಕೊಳ್ಳುವ ಶಕ್ತಿ ಮತ್ತು ಆರೋಗ್ಯದಿಂದ ಮನೆಗೆ ಬರುವಹಾಗೆ ಮಾಡಲಿ.
ಗರ್ಭದಲ್ಲಿರುವ ಮಗುವಿಗೆ ಏನು ತೊಂದರೆಯಾಗದೆ ಹೆರಿಗೆಯಾಗಿ ತಾಯಿ ಮತ್ತು ಮಗುವಿನ ಭವಿಷ್ಯ ಉಜ್ವಲವಾಗಿರುವಂತೆ ನೋಡಿಕೊಳ್ಳಲಿ.
ಜೀವನದಲ್ಲಿ ಮತ್ತೆ ಮಂದಹಾಸ ಮೂಡಲಿ.
ಹೋಗಿ ಬಾ ಪುಟ್ಟ.🙏