ವೀಕೆಂಡ್ ಕಫ್ರ್ಯೂಗೆ ಎರಡನೇ ದಿನವೂ ಬೆಳಗಾವಿಯಲ್ಲಿ ಜನ ಡೋಂಟ್ ಕೇರ್ ಎಂದಿದ್ದಾರೆ. ಬೆಳಗಾವಿಯ ಜೈ ಕಿಸಾನ್ ವೋಲ್‍ಸೇಲ್ ತರಕಾರಿ ಖಾಸಗಿ ಮಾರುಕಟ್ಟೆಯಲ್ಲಿ ಜನಜಾತ್ರೆ ಕಂಡು ಬಂದಿದೆ.
ಇತ್ತಿಚೆಗೆ ಉದ್ಘಾಟನೆಗೊಂಡಿರುವ ಬೆಳಗಾವಿ ಹೊರವಲಯದ ಗಾಂಧಿನಗರದ ಬಳಿಯ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲೇ ಇರುವ ಜೈ ಕಿಸಾನ್ ವೋಲ್‍ಸೇಲ್ ತರಕಾರಿ ಖಾಸಗಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ. ಮಹಾರಾಷ್ಟ್ರ, ಗೋವಾದಿಂದ ನಿತ್ಯ ನೂರಾರು ವ್ಯಾಪಾರಿಗಳು ಆಗಮಿಸುತ್ತಿದ್ದಾರೆ.
ಇನ್ನು ಬೆಳಗಾವಿ ಸೇರಿ ನೆರೆಯ ಜಿಲ್ಲೆಯ ಹಳ್ಳಿಗಳಿಂದಲೂ ನಿತ್ಯ ನೂರಾರು ರೈತರು ಆಗಮಿಸುತ್ತಿದ್ದಾರೆ. ಬೆಳಗಾವಿಯಲ್ಲಿ ದಿನೇದಿನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಕೂಡ ಜನ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಕೋವಿಡ್ ರೂಲ್ಸನ್ನು ಗಾಳಿಗೆ ತೂರುತ್ತಿದ್ದಾರೆ. ಇ
ನ್ನು ಜನರನ್ನು ಎಚ್ಚರಿಸಿ ಜಾಗೃತಿಗೊಳಿಸಿ ಮಾಸ್ಕ್ ಡ್ರೈವ್ ಮಾಡಬೇಕಿದ್ದ ಮಹಾನಗರ ಪಾಲಿಕೆ ಮಾರ್ಷಲ್‍ಗಳು ಮಾಯವಾಗಿದ್ದು ಸಧ್ಯ ತೀವ್ರ ಟೀಕೆಗೆ ಗುರಿಯಾಗಿದೆ.