ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್ನಲ್ಲಿ ಮಹತ್ವದ ವಿಚಾರಣೆ ನಡೆಯಿತು. ವಿಚಾರಣೆ ನಡೆಸಿದ ಕೋರ್ಟ್ ಸೋಮವಾರ ಸಂಪೂರ್ಣ ಮಾಹಿತಿ ಆಧರಿಸಿ ಆದೇಶ ನೀಡುವುದಾಗಿ ತಿಳಿಸಿ ತೀರ್ಪನ್ನ ಕಾಯ್ದಿರಿಸಿದೆ.
ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಹೈಕೋರ್ಟ್ ರಿಜಿಸ್ಟರ್ ಜನರಲ್ ನೇಮಿಸಿ ಆದೇಶ ಹೊರಡಿಸಿದೆ.
ಸದ್ಯಕ್ಕೆ ಯಾವುದೇ ಕ್ರಮ ಬೇಡ
ರಿಜಿಸ್ಟರ್ ಜನರಲ್ ಆಫ್ ಪಂಜಾಬ್ & ಹರಿಯಾಣ ಹೈಕೋರ್ಟ್ ನೇಮಕ ಮಾಡಿ ಆದೇಶ ಹೊರಡಿಸಿದೆ. ಇವರಿಗೆ ಮಾಹಿತಿ ನೀಡಲು ಇಬ್ಬರು ನೋಡಲ್ ಅಧಿಕಾರಿಗಳ ನೇಮಕ ಮಾಡಿದೆ. ಚಂಡೀಗಢ ಪೊಲೀಸ್ ಡಿಜಿ, ಎನ್ಐಎ ಅಧಿಕಾರಿಗಳ ನೇಮಕ ಮಾಡಿದೆ. ಮಾತ್ರವಲ್ಲ ಸದ್ಯಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಪಂಜಾಬ್ ಸರ್ಕಾರ, ಕೇಂದ್ರ ಇಲಾಖೆಗಳಿಗೆ ಸುಪ್ರೀಂ ಸೂಚನೆ ನೀಡಿದೆ. ಸೋಮವಾರ ಸಂಪೂರ್ಣ ಮಾಹಿತಿ ಆಧರಿಸಿ ಮುಂದಿನ ಆದೇಶ ನೀಡೋದಾಗಿ ಕೋರ್ಟ್ ಹೇಳಿದೆ.
ಟ್ರಾವೆಲ್ ಮಾಹಿತಿ ದಾಖಲಿಸಿ