ಬೆಳಗಾವಿ : ಕಳ್ಳತನದಲ್ಲಿ ಈ ಬಾಲಕ ದೊಡ್ಡವರನ್ನೂ ಮೀರಿಸಿದ್ದಾನೆ. ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿ ಹಾಡುಹಗಲೇ ಮಾಲೀಕರ ಕಣ್ಣಿಗೆ ಮಣ್ಣೆರಚಿದ ಬಾಲಕ, ಹಣ ಕದ್ದು ಪರಾರಿಯಾಗಿದ್ದಾನೆ.
ಯಾರಿಗೂ ಗೊತ್ತಾಗದಂತೆ ನುಸುಳಾಡಿ ಹಣ ಪೀಕಿರುವ ಬಾಲಕ ನೋಡ ನೋಡುತ್ತಿದ್ದಂತೆಯೇ ಹಣದ ಪೆಟ್ಟಿಗೆಯಲ್ಲಿದ್ದ 9000 ಸಾವಿರ ರೂ. ಕದ್ದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಗೋಕಾಕ್ ನಗರದ ದುರ್ಗಾ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ.
ಬಾಲಕನ ಕಳ್ಳತನದ ಕೃತ್ಯ ಹೋಟೆಲ್ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೋಟೆಲ್ ಸಿಬ್ಬಂದಿ ಜತೆಗೆ ಪೊಲೀಸರು ಕೂಡ ಶಾಕ್ ಆಗಿದ್ದಾರೆ. ಗೋಕಾಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Laxmi News 24×7