ಲಂಡನ್‌ನಿಂದ ಮಾವನ ಅಂತ್ಯಕ್ರಿಯೆಗಾಗಿ ಭಾರತಕ್ಕೆ ಬಂದ ವ್ಯಕ್ತಿ ಮತ್ತು ಆತನ ಪತ್ನಿಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಪಾಸಿಟಿವ್ ರಿಸಲ್ಟ್ ಬಂದಿದ್ದು, ಇವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಹಾಗಾಗಿ ಈ ಜೋಡಿ ಅಂತ್ಯಕ್ರಿಯೆಗೆ ಹೋಗುವುದು ತಪ್ಪಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿರುವ ವ್ಯಕ್ತಿ, ಕೋವಿಡ್ ಟೆಸ್ಟ್ ಅನ್ನೋದು ಹಗರಣವಾಗಿ ಬಿಟ್ಟಿದೆ ಎಂದು ಆರೋಪಿಸಿದ್ದಾರೆ.
ಮನೋಜ್ ಲಾಡ್ವಾ ಎಂಬವರ ಪತ್ನಿಯ ತಂದೆಯ ಅಂತ್ಯಕ್ರಿಯೆಯ ಸಲುವಾಗಿ ಲಂಡನ್‌ನಿಂದ ಮುಂಬೈಗೆ ಬಂದಿದ್ದರು. ಈ ವೇಳೆ ನಡೆದ ಕೋವಿಡ್ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದಿದ್ದು, ಇದರಿಂದ ಗಂಡ ಹೆಂಡತಿ ಕಂಗಾಲಾಗಿದ್ದಾರೆ. ಯಾವ ಕೆಲಸಕ್ಕಾಗಿ ಭಾರತಕ್ಕೆ ಬಂದಿದ್ದರೋ, ಆ ಕೆಲಸ ಆಗದೇ ಉಳಿದಿದೆ. ಈ ಕಾರಣಕ್ಕೆ ಸಿಟ್ಟಾದ ಮನೋಜ್ ಈ ವಿರುದ್ಧ ವೀಡಿಯೋ ಮಾಡಿ, ಸೋಶಿಯಲ್ ಮೀಡಿಯಾದಲ್‌ಲಿ ಹರಿಬಿಟ್ಟಿದ್ದಾರೆ.
https://www.facebook.com/manoj.ladwa/videos/624803575333861
ನಾವೆಲ್ಲ ವಿಮಾನ ಹತ್ತುವುದಕ್ಕಿಂತ ಮುಂಚೆಯೇ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬಂದಿದ್ದೇವೆ. ಆದ್ರೆ ಇಲ್ಲಿ ಮುಂಬೈ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ಗೆ ಬಂದು ಇಳಿದ ಬಳಿಕ ನಮ್ಮಲ್ಲಿ ಹಲವರಿಗೆ ಕೋವಿಡ್ ಪಾಸಿಟಿವ್ ಇದೆ ಎಂದು ತೋರಿಸುತ್ತಿದ್ದಾರೆ. ಮತ್ತು ನಮಗೆ ಕೊರೊನಾದ ಯಾವ ಲಕ್ಷಣವೂ ಇಲ್ಲ. ಇದು ಪಕ್ಕಾ ಸ್ಕ್ಯಾಮ್ ಆಗಿದೆ. ಈ ಬಗ್ಗೆ ನಾವೆಲ್ಲ ಧ್ವನಿ ಎತ್ತಬೇಕು. ಇಂಥ ಹಗರಣಗಳನ್ನ ನಿಲ್ಲಿಸಬೇಕು. ನಿಮ್ಮ ಸಹಾಯ ನಮಗೆ ಬೇಕಾಗಿದೆ. ನಾನು ಬೇರೆ ಆಸ್ಪತ್ರೆಗೆ ಹೋಗಿ ಕೋವಿಡ್ ಟೆಸ್ಟ್ ಮಾಡಿಸಿ, ರಿಪೋರ್ಟ್ ತರುತ್ತೇನೆ, ನನಗೆ ಅವಕಾಶ ಕೊಡಿ ಅಂದ್ರೂ ಇಲ್ಲಿ ಅವಕಾಶ ಕೊಡುತ್ತಿಲ್ಲ. ನಮ್ಮನ್ನು ಕ್ವಾರಂಟೈನ್ ಕೇಂದ್ರದಲ್ಲಿರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಇನ್ನು ಮುಂಬೈ ಇಂಟರ್‌ನ್ಯಾಶನಲ್ ಏರ್ಪೋರ್ಟ್‌ನಲ್ಲಿ ಕೋವಿಡ್ ಟೆಸ್ಟ್ ಮಾಡಿಸಿ, 8 ತಾಸು ಏರ್ಪೋರ್ಟ್‌ನಲ್ಲೇ ಕಾಯಬೇಕು. ಆಗ ರಿಸಲ್ಟ್ ಸಿಗುತ್ತದೆ . ಇದಕ್ಕೆ 500 ರೂಪಾಯಿ ಚಾರ್ಜ್ ಮಾಡುತ್ತಾರೆ. ಇನ್ನು ರ್ಯಾಪಿಡ್ ಕೋವಿಡ್ ಟೆಸ್ಟ್ ಕೂಡಾ ಇದೆ. ಇದಕ್ಕೆ 1,975 ರೂಪಾಯಿ ಚಾರ್ಜ್ ಮಾಡುತ್ತಾರೆ. ಇದರ ರಿಸಲ್ಟ್ ಬೇಗ ಸಿಗುತ್ತದೆ.