Breaking News

ಪಾನ್ ಕಾರ್ಡ್‌ದಾರರೇ ಎಚ್ಚರ.! ಈ ತಪ್ಪು ಮಾಡಿದರೆ ಬೀಳುತ್ತೆ 10,000 ರೂ. ದಂಡ

Spread the love

ಯಾವುದೇ ಹಣಕಾಸಿನ ವ್ಯವಹಾರ ಮಾಡಲು ಮುಖ್ಯವಾಗಿ ಬೇಕಾಗಿರುವ ದಾಖಲೆಯಾದ ಶಾಶ್ವತ ಖಾತೆ ಸಂಖ್ಯೆ (ಪಾನ್) ತೆರಿಗೆ ರಿಟರ್ನ್ಸ್ ಸಲ್ಲಿಸುವ ವೇಳೆಯೂ ಬೇಕಾಗುತ್ತದೆ. 10-ಅಂಕಿಯ ಈ ಸಂಖ್ಯೆಯನ್ನು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಕೊಡಮಾಡುತ್ತದೆ.

ನಿಮ್ಮ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವ ವೇಳೆ ನಿಮ್ಮ ಪಾನ್‌-ಆಧಾರ್‌ ಲಿಂಕಿಂಗ್ ಮಾಡಿರಬೇಕಾಗುತ್ತದೆ.

ದಿನವೊಂದರಲ್ಲಿ 50,000 ರೂ. ಮೀರಿದ ಮೌಲ್ಯದ ಬ್ಯಾಂಕ್ ಡ್ರಾಪ್ಟ್‌ಗಳು, ಪಾವತಿ ಆದೇಶಗಳು ಅಥವಾ ಚೆಕ್‌ಗಳ ವಿಲೇವಾರಿ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಗೆ ಪಾನ್ ಕಾರ್ಡ್‌ಗಳು ಬೇಕಾಗುತ್ತವೆ.

ತನಿಖೆ ವೇಳೆ ನಿಮ್ಮಲ್ಲಿ ಎರಡು ಪಾನ್ ಕಾರ್ಡ್‌ಗಳು ಇರುವುದು ಸಾಬೀತಾದಲ್ಲಿ ನಿಮಗೆ 10,000 ರೂ.ಗಳವರೆಗೂ ದಂಡ ವಿಧಿಸುವ ಸಾಧ್ಯತೆ ಇರುತ್ತದೆ. ಇದರೊಂದಿಗ ನಿಮ್ಮ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸುವ ಸಾಧ್ಯತೆಯೂ ಇಲ್ಲದಿಲ್ಲ. ಇದನ್ನು ತಪ್ಪಿಸಲು ನೀವೇನಾದರೂ ಎರಡು ಪಾನ್ ಕಾರ್ಡ್ ಹೊಂದಿದ್ದಲ್ಲಿ, ಎರಡನೆಯದ್ದನ್ನು ಮೊದಲು ತೆಗೆದುಕೊಂಡು ಹೋಗಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿಬಿಡಿ. ಆದಾಯ ತೆರಿಗೆ ಕಾನೂನು, 1961ರ ಅಡಿ ಇದಕ್ಕೆ ಅವಕಾಶವೂ ಇದೆ.

ಆದಾಯ ತೆರಿಗೆ ಪೋರ್ಟಲ್‌ಗೆ ಭೇಟಿ ಕೊಟ್ಟು, “Request for New PAN Card or/and Change or Correction in PAN Data” ಮೇಲೆ ಕ್ಲಿಕ್ ಮಾಡಿ, ಅರ್ಜಿ ತುಂಬಿ ನಿಮ್ಮ ಪಾನ್ ಅನ್ನು ಸಲ್ಲಿಸಿ. ಬಳಿಕ ಇದನ್ನು ಎನ್‌ಎಸ್‌ಡಿಎಲ್‌ ಲೊಕೇಶನ್‌ಗೆ ಇ-ಮೇಲ್ ಮಾಡಿ.


Spread the love

About Laxminews 24x7

Check Also

ರಾಜ್ಯದಲ್ಲಿ ಸೆ.22ರಿಂದ ಜಾತಿ ಗಣತಿ; ನಿಮ್ಮ ಸಮೀಕ್ಷೆಯ ಕಾರ್ಯವಿಧಾನ ಹೀಗಿರಲಿದೆ

Spread the loveರಾಜ್ಯದಲ್ಲಿ ಸೆ.22ರಿಂದ ಜಾತಿ ಗಣತಿ; ನಿಮ್ಮ ಸಮೀಕ್ಷೆಯ ಕಾರ್ಯವಿಧಾನ ಹೀಗಿರಲಿದೆ ಬೆಂಗಳೂರು: ರಾಜ್ಯದಲ್ಲಿ ಸೆಪ್ಟಂಬರ್​ 22ರಿಂದ ಸಾಮಾಜಿಕ, ಶೈಕ್ಷಣಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ