Breaking News

ಏಯ್​ ಗಂಡಸ್ತತನ ತೋರ್ಸು ಬಾ.. ಎನ್ನುತ್ತಲೇ ಕಿತ್ತಾಡಿದ ಸಂಸದ-ಸಚಿವ: ರಾಮನಗರದಲ್ಲಿ ಸಿಎಂ ಎದುರೇ ಹೈಡ್ರಾಮ

Spread the love

ರಾಮನಗರ: ಸಿಎಂ ಕಾರ್ಯಕ್ರಮದಲ್ಲಿ ಹೈಡ್ರಾಮ ನಡೆದಿದ್ದು, ವೇದಿಕೆ ಮೇಲೆಯೇ ಸಂಸದ ಡಿ.ಕೆ.ಸುರೇಶ್​ ಧರಣಿಗೆ ಕುಳಿತ ಪ್ರಸಂಗ ಸೋಮವಾರ ನಡೆದಿದೆ. ಇಡೀ ಕಾರ್ಯಕ್ರಮ ವಾದ-ವಿವಾದ, ಆರೋಪ-ಪ್ರತ್ಯಾರೋಪದ ಗೂಡಾಗಿ ಪರಿಣಮಿಸಿತ್ತು. ನಾನಾ? ನೀನಾ?

ಎಂಬಂತೆ ಕಾಂಗ್ರೆಸ್​-ಬಿಜೆಪಿ ನಡುವೆ ಮಾತಿನ ಸಮರವೇ ನಡೆದಿದೆ.

ಜ.9ರಿಂದ ಮೇಕೆದಾಟು ಪಾದಯಾತ್ರೆ ನಡೆಸಲು ಕಾಂಗ್ರೆಸ್​ ಸಜ್ಜಾಗಿದೆ. ಈ ಹೋರಾಟಕ್ಕೂ ಮುನ್ನವೇ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಮತ್ತು ಶಂಕು ಸ್ಥಾಪನೆ ಮಾಡಲು ಸಿಎಂ ಬಸವರಾಜು ಬೊಮ್ಮಾಯಿ ಅವರು ರಾಮನಗರ ಜಿಲ್ಲಾ ಪ್ರವಾಸಕ್ಕೆ ಸೋಮವಾರ ಬೆಳಗ್ಗೆ ಆಗಮಿಸಿದ್ದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇದಿಕೆಗೆ ಸಿಎಂ ಬರುತ್ತಿದಂತೆ ದಲಿತ ಮುಖಂಡರು ಕಪ್ಪು ಪಟ್ಟಿ ಪ್ರದರ್ಶಿಸಿ, ಅಂಬೇಡ್ಕರ್ ಪುತ್ಥಳಿಗೆ ಸಂಸದ ಡಿ.ಕೆ.ಸುರೇಶ್ ಅವರಿಂದ ಪುಷ್ಪಾರ್ಚನೆ ಮಾಡಿಸಿಲ್ಲ ಎಂದು ದಿಕ್ಕಾರ ಕೂಗಿದರು. ಪೊಲೀಸರ ಮಾತಿಗೂ ದಲಿತ ಸಂಘಟನೆಗಳ ಮುಖಂಡರು ಬಗ್ಗಲಿಲ್ಲ. ವೇದಿಕೆ ಮೇಲೆಯೇ ದಲಿತ ಸಂಘಟನೆ ಮುಖಂಡ ರಾಂಪುರ ನಾಗೇಶ್ ಹೈಡ್ರಾಮಾ ಮಾಡಿದರು. ಕೂಡಲೇ ದಲಿತ ಸಂಘಟನೆ ಮುಖಂಡರನ್ನು ಪೋಲಿಸರು ವೇದಿಕಿಯಿಂದ ಹೊರ ಕರೆತಂದರು. ಅತ್ತ ಡಿಕೆ ಸುರೇಶ್​​, ಯಾರೂ ಕೂಡ ಸಭೆಗೆ ಅಗೌರವ ತರಬೇಡಿ. ನಿಮ್ಮ ನೋವನ್ನು ಮುಖ್ಯಮಂತ್ರಿಗಳಿಗೆ ತಿಳಿಸುತ್ತೇನೆ. ಇದು ಕಾಂಗ್ರೆಸ್ ಕಾರ್ಯಕ್ರಮ ಅಲ್ಲ, ಗೊಂದಲ ಸೃಷ್ಟಿ ಬೇಡ ಅಂತಾ ಮನವಿ ವೇದಿಕೆಯಲ್ಲೇ ನಿಂತು ಮನವಿ ಮಾಡಿದರು.

ಅತ್ತ ಮಾತು ಆರಂಭಿಸಿದ ಸಚಿವ ಅಶ್ವತ್ಥ ನಾರಾಯಣ್​, ‘ಅಭಿವೃದ್ಧಿ ಯಾರೂ ಮಾಡಿಲ್ಲ. ನಮ್ಮ ಬಿಜೆಪಿ ಪಕ್ಷ ಮಾತ್ರ ಮಾಡಿರುವುದು. ನಾವು ಯಾರ ಜಮೀನಿಗೂ ಕೈ ಹಾಕಿಲ್ಲ. ಯಾಕೆ ಕೂಗಾಡ್ತೀರಾ? ಯಾವಾನೋ ಅವನು ಗಂಡಸ್ಸು? ನಮಗೆ ಅಧಿಕಾರ ಬೇಕಿಲ್ಲ. ಜಿಲ್ಲೆಗೆ ವಂಚನೆ ಮಾಡೋರು ನಾವಲ್ಲ‌. ನಾವು ಬೇರೆಯವರ ಆಸ್ತಿಗೆ ಕೈ ಹಾಕಿಲ್ಲ’ ಎನ್ನುತ್ತಿದ್ದಂತೆಯೇ ಗರಂ ಆದ ಸಂಸದ ಡಿ.ಕೆ.ಸುರೇಶ್​, ‘ಏನ್ ಅಭಿವೃದ್ಧಿ ಮಾಡಿದ್ದೀಯಾ?’ ಅಂತ ಜೋರಾಗಿಯೇ ಗದರಿದರು. ಡಿ.ಕೆ‌.ಸುರೇಶ್​ಗೆ ಮಾತಿಗೆ ಸಾಥ್ ಕೊಟ್ಟ ಎಂಎಲ್‌ಸಿ ರವಿ, ಮೈಕ್ ಅನ್ನು ಎಸೆದರು. ವೇದಿಕೆಯಲ್ಲೇ ಧರಣಿಗೆ ಕುಳಿತ ಸಂಸದ ಸುರೇಶ್ ಮತ್ತು ರವಿ, ‘ಏ ಗಂಡಸ್ತತನ ತೋರಿಸಲಿ ಅವನು’ ಎಂದು ಕೂಗಾಡಿದರು.


Spread the love

About Laxminews 24x7

Check Also

ಸುವರ್ಣಸೌಧದ ಎದುರಿನ ಪ್ರಮುಖ ಸರ್ವಿಸ್ ರಸ್ತೆ ಯಲ್ಲಿ ಘನತ್ಯಾಜ್ಯ ವಸ್ತುಗಳ ಸಾಮ್ರಾಜ್ಯ

Spread the love ಗ್ರಾಮ ಪಂಚಾಯತಿಯ ನಿರ್ಲಕ್ಷ ಹಲಗಾ ಗ್ರಾಮದ ಸರ್ವಿಸ್ ರಸ್ತೆಯಲ್ಲಿ ಘನತ್ಯಾಜ್ಯ ವಸ್ತುಗಳ ಸಾಮ್ರಾಜ್ಯ…… ಹಲಗಾ ಗ್ರಾಮದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ