ಕೌಟುಂಬಿಕ ಕಲಹ ಸಂಬಂಧ ವಿಚಾರಣೆಗೆಂದು ಭಾನುವಾರ ರಾತ್ರಿ ಪೊಲೀಸ್ ಠಾನೆಗೆ ತೆರಳಿದ್ದ ವ್ಯಕ್ತಿ ನಿಗೂಢವಾಗಿ ಶವವಾಗಿ ಪತ್ತೆಯಾದ ಘಟನೆ ತಾಲೂಕಿನ ಮಾಯಕೊಂಡ ಗ್ರಾಮದಲ್ಲಿ ನಡೆದಿದೆ. ಇದು ಲಾಕ್‌ಅಪ್ ಡೆತ್ ಎಂದು ಆರೋಪಿಸಿ ಮೃತನ ಬಂಧುಗಳು ಗ್ರಾಮಸ್ಥರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ತಾಲೂಕಿನ ವಿಠಲಾಪುರ ಗ್ರಾಮದ ಮರುಳಸಿದ್ದಪ್ಪ ಮೃತ ವ್ಯಕ್ತಿ. ಈತ 27 ವರ್ಷದ ಹಿಂದೆ ವೃಂದಮ್ಮ ಎಂಬುವವರ ಜೊತೆಗೆ ಮದುವೆಯಾಗಿದ್ದ.
ಮರುಳಸಿದ್ದಪ್ಪನಿಗೆ 24 ವರ್ಷದ ಮಗಳಿದ್ದಾಳೆ. ಹೀಗಿದ್ದು 18 ವರ್ಷದ ಯುವತಿಯನ್ನು ತನ್ನ ಪತಿ ಮದುವೆಯಾಗಲಿದ್ದಾರೆಂಬ ಮಾಹಿತಿ ಇದ್ದು ನ್ಯಾಯ ದೊರಕಿಸಿಕೊಡಬೇಕು ಎಂದು ತ್ನಿಮಾಯಕೊಂಢ ಠಾಣೆಗೆ ದೂರು ನೀಡಿದ್ದರು. ಮಗಳ ವಯಸ್ಸಿಗಿಂತ ಚಿಕ್ಕ ವಯಸ್ಸಿನ ಯುವತಿಯೊಂದಿಗೆ ಮದುವೆಯಾಗಲು ಹೊರಟ ಪತಿಗೆ ಬುದ್ದಿ ಹೇಳಿ ತನ್ನ ಸಂಸಾರ ಸರಿ ಮಾಡಲು ದೂರು ನೀಡಿದ್ದರು.
ವಿಚಾರಣೆಗೆ ಠಾಣೆಗೆ ಕರೆಸಿ ಆತನನ್ನು ಅಲ್ಲಿ ಉಳಿಸಿಕೊಳ್ಳಲಾಗಿತ್ತು. ಆದರೆ ರಾತ್ರಿ ಏನಾಗಿದೆ ಎಂದು ತಿಳಿಯಲಿಲ್ಲ.ಬೆಳಗ್ಗೆ ಮರುಳಸಿ ದ್ದಪ್ಪನ ಶವ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದೆ. ಕುಟುಂಬಸ್ಥರು ಇದು ಲಾಕಪ್ ಡೆತ್ ಎಂದು ಆರೊಪಿಸಿ ಪೊಲೀಸ್ ಠಾಣೆ ಬಲಿ ಜಮಾಯಿಸಿ ಪ್ರತಿಭಟಿಸಿದರು. ಈ ಸಂಬಂಧ ವಿಚಾರಣೆ ನಡೆಸಲಾಗುಚುದು ಎಂದು ಎಸ್ ಪಿ ಹನುಮಂತರಾಯಪ್ಪ ಭರವಸೆ ನೀಡಿದರು.