Breaking News

ಮತ್ತೆ ಲಾಕ್​ಡೌನ್​ ಮಾಡುವ ದಿನ ಸಮೀಪಿಸುತ್ತಿದೆ, ಅಂತಿಮ ನಿರ್ಧಾರ ಸಿಎಂ ಕೈಯಲ್ಲಿ

Spread the love

ಮುಂಬೈ, ಜನವರಿ 1: ದೇಶದ ಒಂದೊಂದೇ ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಇದರ ಜೊತೆಗೆ ಓಮಿಕ್ರಾನ್ ರೂಪಾಂತರಿ ವೈರಸ್ ಭೀತಿಯೂ ಕಾಡುತ್ತಿದೆ.

ಸದ್ಯ ಮಹಾರಾಷ್ಟ್ರ, ಕೇರಳ ಮತ್ತು ದೆಹಲಿಗಳಲ್ಲಿ ಕೊರೊನಾ ಸೋಂಕು ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಮತ್ತೆ ಮೊದಲಿನಂತೆ ನಿರ್ಬಂಧ ವಿಧಿಸಲಾಗುತ್ತಿದೆ.

ಈ ನಡುವೆ ಮಹಾರಾಷ್ಟ್ರ ಸಚಿವರೊಬ್ಬರು ಮತ್ತೊಮ್ಮೆ ಲಾಕ್​ಡೌನ್ ಮಾಡುವ ಸೂಚನೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಹಾರಾಷ್ಟ್ರ ಸಚಿವ ವಿಜಯ್ ವಡೆತ್ತಿವಾರ್, ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಮಿತಿಮೀರುತ್ತಿದೆ. ಮತ್ತೆ ಲಾಕ್‌ಡೌನ್​ ಹೇರುವ ಕಾಲ ಸಮೀಪಿಸುತ್ತಿದೆ. ಆದರೆ ಈ ಬಗ್ಗೆ ಅಂತಿಮವಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರೇ ನಿರ್ಣಯ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕಳೆದ 11 ದಿನಗಳಿಂದಲೂ ಕೊವಿಡ್-​ 19 ಸೋಂಕಿತರ ಸಂಖ್ಯೆ ಏರುತ್ತಿದೆ. ದಿನದಲ್ಲಿ ದಾಖಲಾಗುವ ಪ್ರಕರಣ​ಗಳು ಹೆಚ್ಚುತ್ತಿವೆ. ಕೆಲವೇ ದಿನಗಳ ಹಿಂದೆ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮುಂಬೈನಲ್ಲಿ ಜನವರಿ 7ರವರೆಗೂ ಸೆಕ್ಷನ್​ 144 ಜಾರಿಯಲ್ಲಿದೆ.

ಇನ್ನು ಮಹಾರಾಷ್ಟ್ರದಾದ್ಯಂತ ಯಾವುದೇ ಸಾಮಾಜಿಕ, ರಾಜಕೀಯ, ಧಾರ್ಮಿಕ ಸಮಾರಂಭ ನಡೆಸಿದರೂ 50 ಜನ ಮಾತ್ರ ಸೇರಬಹುದು. ಅಂತ್ಯಸಂಸ್ಕಾರದಲ್ಲಿ ಗರಿಷ್ಠ 20 ಜನ ಪಾಲ್ಗೊಳ್ಳಬಹುದು ಎಂದು ನಿರ್ಬಂಧ ವಿಧಿಸಲಾಗಿದೆ.

ಹೊಸವರ್ಷದ ಮುನ್ನಾದಿನವೇ ಮುಂಬೈ ಪೊಲೀಸ್ ಆಯುಕ್ತರು ಸೆಕ್ಷನ್​ 144 ಹೇರಿದ್ದಾರೆ. ಕಡಲತೀರಗಳು, ತೆರೆದ ಮೈದಾನಗಳು, ಉದ್ಯಾನಗಳು ಮತ್ತು ಅಂಥ ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಜನರು ಮುಂಜಾನೆ 5ರಿಂದ ಸಂಜೆ 5ರವರೆಗೆ ಭೇಟಿ ನೀಡುವುದನ್ನು ನಿರ್ಬಂಧಿಸಿದ್ದಾರೆ. ಈ ಆದೇಶ ಜನವರಿ 15ರವರೆಗೂ ಇರಲಿದೆ.

ಮಹಾರಾಷ್ಟ್ರದಲ್ಲಿ ಶುಕ್ರವಾರ ಒಂದೇ ದಿನ 8067 ಕೊರೊನಾ ಸೋಂಕು ಪ್ರರಕರಣ​ಗಳು ದಾಖಲಾಗಿವೆ. ಗುರುವಾರ 2699 ಪ್ರಕರಣಗಳು ದಾಖಲಾಗಿದ್ದವು. ಒಂದೇ ದಿನದಲ್ಲಿ 600ರಷ್ಟು ಹೆಚ್ಚಳಗೊಂಡಿದ್ದು, ಸಹಜವಾಗಿಯೇ ಆತಂಕ ಮೂಡಿಸಿದೆ.


Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳಿಗೆ ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ಮರುನಾಮಕರಣ

Spread the loveಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 17ನೇ ರಾಜ್ಯ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ