Breaking News

ʼUPSC ಸಂಯೋಜಿತ ವೈದ್ಯಕೀಯ ಸೇವೆʼಗಳ ಪರೀಕ್ಷೆ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್‌ ನೋಡಿ |

Spread the love

ಕೇಂದ್ರ ಲೋಕಸೇವಾ ಆಯೋಗ (UPSC) ಕಂಬೈನ್ಡ್ ಮೆಡಿಕಲ್ ಸರ್ವೀಸಸ್ ಪರೀಕ್ಷೆ ಫಲಿತಾಂಶ(Combined Medical Services Examination 2021) ಘೋಷಿಸಿದೆ. ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್ ಸೈಟ್(official website) upsc.gov.in ನಲ್ಲಿ ತಮ್ಮ ಫಲಿತಾಂಶವನ್ನ ಪರಿಶೀಲಿಸಬಹುದು.

ಅಂದ್ಹಾಗೆ, ಈ ಪರೀಕ್ಷೆಯನ್ನ 21 ನವೆಂಬರ್ 2021ರಂದು ನಡೆಸಲಾಗಿತ್ತು.

ಲಿಖಿತ ಪರೀಕ್ಷೆಯನ್ನ ಎರಡು ಶಿಫ್ಟ್‌ನಲ್ಲಿ ಅಂದ್ರೆ ಮೊದಲ ಶಿಫ್ಟ್ʼನಲ್ಲಿ, ಪರೀಕ್ಷೆ ಬೆಳಿಗ್ಗೆ 9:30 ರಿಂದ 11:30 ರವರೆಗೆ ನಡೆಯಿತು. ಎರಡನೇ ಪಾಳಿಯಲ್ಲಿ ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ಪರೀಕ್ಷೆ ನಡೆಯಿತು.

ಕಂಬೈನ್ಡ್ ಮೆಡಿಕಲ್ ಸರ್ವೀಸಸ್ ಪರೀಕ್ಷೆ ಅರ್ಜಿ ಪ್ರಕ್ರಿಯೆ 2021 5ನೇ ಮೇ 2021ರಿಂದ ಪ್ರಾರಂಭಿಸಲಾಯಿತು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನ 25 ಮೇ 2021 ಎಂದು ನಿಗದಿಪಡಿಸಲಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ʼನಲ್ಲಿ ನೀಡಲಾದ ಸೂಚನೆಯನ್ನು ನೋಡಬಹುದು.

ಈ ರೀತಿ ಫಲಿತಾಂಶ ಪರಿಶೀಲಿಸಿ..!
1. ಮೊದಲನೆಯದಾಗಿ, ಅಭ್ಯರ್ಥಿಗಳು upsc.gov.in ಅಧಿಕೃತ ವೆಬ್ ಸೈಟ್ʼಗೆ ತೆರಳಿ.
2. ಮುಖಪುಟದಲ್ಲಿ ನೀಡಲಾದ ಲಿಖಿತ ಫಲಿತಾಂಶಗಳ ವಿಭಾಗವನ್ನು .
3. ಈಗ ಪರೀಕ್ಷೆ ಲಿಖಿತ ಫಲಿತಾಂಶಗಳ ಲಿಂಕ್ .
4. ಕಂಬೈನ್ಡ್ ಮೆಡಿಕಲ್ ಸರ್ವೀಸಸ್ ಎಕ್ಸಾಮಿನೇಷನ್, 2021ರ ಲಿಂಕ್ ಅನ್ನು ಇಲ್ಲಿ .
5. ಫಲಿತಾಂಶ ನಿಮ್ಮ ಪರದೆಯಲ್ಲಿ ಕಾಣಿಸಿಕೊಳ್ಳುತ್ತದೆ.
6. ಈಗ ರೋಲ್ ಸಂಖ್ಯೆಯ ಸಹಾಯದಿಂದ ಫಲಿತಾಂಶವನ್ನ ಪರಿಶೀಲಿಸಿ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ