ಬೆಂಗಳೂರು: ಇತ್ತೀಚೆಗೆ ಹೊಸೂರು ರೋಡ್ ನ ಹೊಸ ರೋಡ್ ಜಂಕ್ಷನ್ ನಲ್ಲಿ ಅರ್ಚನಾ ರೆಡ್ಡಿ ಎಂಬ ಶ್ರೀಮಂತೆಯನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದ ಈ ಮರ್ಡರ್ ಕೇಸ್ ನಲ್ಲಿ ಪೊಲೀಸರು ಒಟ್ಟು 7 ಜನರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ.
ಕೊಲೆಯಾದ ಅರ್ಚನಾ ರೆಡ್ಡಿಗೆ ಕೊಲೆಗೆ ಕಾರಣವಾಗಿದ್ದೇ ಆಕೆಯ ಬಳಿ ಇದ್ದ ಕೋಟ್ಯಂತರ ರೂ. ಆಸ್ತಿ. ಆಕೆ ಕೋಟ್ಯಂತರ ರೂ. ಬ್ಯಾಂಕ್ ಬ್ಯಾಲೆನ್ಸ್, ಐಷಾರಾಮಿ ಬಂಗಲೆ, ಐಷಾರಾಮಿ ಕಾರು, ಲಕ್ಷುರಿ ಲೈಫ್ ಲೀಡ್ ಮಾಡುತ್ತಿದ್ದಳು, ಚನ್ನಪಟ್ಟಣದಲ್ಲಿ 10 ಎಕರೆ ಜಮೀನು, HSR ಲೇಔಟ್ ನಲ್ಲಿ ಬಂಗಲೆ ಸೇರಿ ಒಟ್ಟು 40-50 ಕೋಟಿ ರೂ. ಒಡತಿಯಾಗಿದ್ದಳು ಅರ್ಚನಾ ರೆಡ್ಡಿ.
ಅರ್ಚನಾ ರೆಡ್ಡಿ ಉದ್ಯಮಿ ಅರವಿಂದ್ ರೆಡ್ಡಿಯನ್ನ ಮದುವೆ ಆಗಿದ್ದರು. ದಂಪತಿಗೆ ತ್ರಿವೇದ್ ಎಂಬ ಪುತ್ರ ಮತ್ತು ಯುವಿಕಾ ಎಂಬ ಮಗಳಿದ್ದಾರೆ. 5 ವರ್ಷದ ಹಿಂದೆ ಅರ್ಚನಾ ರೆಡ್ಡಿ ಪತಿಯಿಂದ ಡೈವೋರ್ಸ್ ಪಡೆದಿದ್ದರು. ಈ ವೇಳೆ ಅರ್ಚನಾ ರೆಡ್ಡಿಗೆ ಕೋಟ್ಯಂತರ ರೂ. ಜೀವನಾಂಶ ಪಡೆದಿದ್ದರು. ಜೀವನಾಂಶವಾಗಿ ಬಂದ ಹಣ ಮತ್ತು ತನ್ನ ಬಳಿ ಇದ್ದ ಹಣದಿಂದ ಅರ್ಚನಾ ರಿಯಲ್ ಎಸ್ಟೇಟ್ ಬ್ಯುನಿನೆಸ್ ಮಾಡುತ್ತಿದ್ದರು. ಡಿವೋರ್ಸ್ ಅರ್ಚನಾ ರೋಹಿತ್ ಎಂಬಾತನನ್ನು 2 ನೇ ಮದುವೆಯಾಗಿದ್ದಳು. ಆದರೆ ಮದುವೆಯಾದ ಎರಡೇ ವರ್ಷಕ್ಕೆ ತನ್ನ ಲೈಫ್ ಸ್ಟೈಲ್ಗೆ ಅಡ್ಜಸ್ಟ್ ಆಗಲಿಲ್ಲ ಎಂದು ರೋಹಿತ್ ಗೆ ಡಿವೋರ್ಸ್ ನೀಡಿದ್ದಳು.
ಅದಾದ ಬಳಿಕ ಜಿಮ್ ಟ್ರೈನರ್ ನವೀನ್ ಜೊತೆ ಅರ್ಚನಾ ರೆಡ್ಡಿ ಸ್ನೇಹ ಬೆಳೆದಿತ್ತು. ಬಳಿಕ ನವೀನ್ ಜೊತೆಗಿನ ಸ್ನೇಹ ಪ್ರೀತಿಗೆ ತಿರುಗಿ ಅವರಿಬ್ಬರೂ ಲೀವ್ ಇನ್ ರಿಲೇಷನ್ ಷಿಪ್ ನಲ್ಲಿದ್ದರು. ಅರ್ಚನಾ ಜೊತೆ ಸ್ನೇಹ ಬೆಳೆದ ಮೇಲೆ ನವೀನ್ಗೆ ಲಕ್ ಚೇಂಜ್ ಆಗಿತ್ತು, ಬೈಕ್ನಲ್ಲಿ ಓಡಾಡ್ತಿದ್ದವನು, ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದ. ಜೇಬಲ್ಲಿ ಕಾಸಿಲ್ಲದವನಿಗೆ, ಲಕ್ಷ ಲಕ್ಷ ಹಣ ಸುಲಭವಾಗಿ ಸಿಗ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಈತ ಸಣ್ಣ ಪುಟ್ಟ ವಿಚಾರಕ್ಕೆ ಅರ್ಚನಾ ರೆಡ್ಡಿ ಜೊತೆ ಕಿರಿಕ್ ಶುರು ಮಾಡಿದ್ದ. ಈ ಹಿನ್ನೆಲೆಯಲ್ಲಿ ಅರ್ಚನಾ ರೆಡ್ಡಿ-ನವೀನ್ ಲೀವ್ ಇನ್ ರಿಲೇಷನ್ ಷಿಪ್ ಗೆ ಬಿತ್ತು ಬ್ರೇಕ್ ಬಿದ್ದಿತ್ತು.
ಆದರೆ ಅರ್ಚನಾ ರೆಡ್ಡಿ ಜೊತೆ ಬ್ರೇಕಪ್ ಆದಮೇಲೆ ಆತ ಅರ್ಚನಾ ಮಗಳು ಯುವಿಕಾ ಮೇಲೆ ಕಣ್ಣು ಹಾಕಿದ್ದ. ಯುವಿಕಾ ರೆಡ್ಡಿ ಜೊತೆ ನವೀನ್ ಓಡಾಡಲು ಪ್ರಾರಂಭಿಸಿದ್ದ. ಈ ವಿಚಾರ ತಿಳಿದ ಕೂಡಲೇ ಕೆಂಡಾಮಂಡಲವಾದ ಅರ್ಚನಾ ರೆಡ್ಡಿ ತನ್ನ ಮಗಳನ್ನು ಸೇಫ್ ಮಾಡಲು ರೆಡಿಯಾಗಿದ್ದಳು. ಇದೇ ವೇಳೆ ಆಕೆ ತನಗೆ ಪರಿಚಯವಿದ್ದ ರೌಡಿಗಳ ಜೊತೆ ಮಾತುಕತೆ ನಡೆಸಿ ಮಗಳ ವಿಚಾರಕ್ಕೆ ಬರದಂತೆ ನವೀನ್ ಗೆ ಧಮ್ಕಿ ಹಾಕಿಸಿ ವಾರ್ನಿಂಗ್ ನೀಡಿದ್ದಳು. ಆದರೂ ನವೀನ್ ಕದ್ದುಮುಚ್ಚಿ ಯುವಿಕಾ ಜೊತೆ ಓಡಾಡುತ್ತಿದ್ದ. ಇದೇ ವೇಳೆ ಆತ ಯುವಿಕಾ ಜೊತೆಯಲ್ಲೇ ಅರ್ಚನಾ ಕೊಲೆಗೆ ಸ್ಕೆಚ್ ಹಾಕಿದ್ದ, ಅರ್ಚನಾ ಕೊಲೆಯಾದ್ರೆ ಆಸ್ತಿ ನಮ್ಮದಾಗುತ್ತೆ ಎಂದು ಪ್ಲಾನ್ ಮಾಡಿದ್ದ.
ನವೀನ್ ಕಾಟ ಕಡಿಮೆ ಹೆಚ್ಚಾದಾಗ ಅರ್ಚನಾ ಆತನ ವಿರುದ್ಧ ಜಿಗಣಿ ಠಾಣೆಯಲ್ಲಿ ದೂರು ನೀಡಿದ್ದಳು. ಪೊಲೀಸರು ನವೀನ್ ನನ್ನು ಸ್ಟೇಷನ್ ಗೆ ಕರೆಸಿ ವಾರ್ನ್ ಮಾಡಿದ್ದರು. ವಾರ್ನಿಂಗ್ ಕೊಟ್ಟ ಮರು ದಿನವೇ ಯುವಿಕಾ ಜೊತೆ ನವೀನ್ ಎಸ್ಕೇಪ್ ಆಗಿದ್ದ. ಎಸ್ಕೇಪ್ ಆದ ನಂತರ ಅರ್ಚನಾ ಮರ್ಡರ್ ಪ್ಲಾನ್ ರೆಡಿ ಆಗಿತ್ತು. ಅರ್ಚನಾ ಕೊಲೆಗೆ ಸಾಥ್ ನೀಡುವಂತೆ ತನ್ನ ಸ್ನೇಹಿತರಾದ ಸಂತೋಷ್, ಅನೂಪ್, ಆನಂದ್, ನರೇಂದ್ರ, ದೀಪು ನೆರವು ಕೇಳಿದ್ದ. ಜೊತೆಗೆ ಯುವಿಕಾ ಕೊಲೆ ಸ್ಕೆಚ್ ಗೆ ಸಾಥ್ ನೀಡಿದ್ದಳು
ಡಿ.27ರಂದು ಅರ್ಚನಾ ತಮ್ಮ ಮಗ ತ್ರಿವೇದ್ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ, ನವೀನ್ ಮತ್ತು ಆತನ ತಂಡ ನಡು ರಸ್ತೆಯಲ್ಲೇ ಕಾರು ಅಡ್ಡಗಟ್ಟಿ ಆಕೆಯನ್ನು ಕೊಚ್ಚಿ ಕೊಲೆ ಮಾಡಿದ್ದರು. ತ್ರಿವೇದ್ ಮುಂದೆಯೇ ಅವರು ಅರ್ಚನಾಳನ್ನು ಕೊಲೆ ಮಾಡಿದ್ದರು. ತನಿಖೆ ಪ್ರಾರಂಭಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅರ್ಚನಾ ರೆಡ್ಡಿ ಮಗಳು ಯುವಿಕಾ ರೆಡ್ಡಿ, ನವೀನ್, ಸಂತೋಷ್, ಅನೂಪ್, ಆನಂದ್, ನರೇಂದ್ರ, ದೀಪು ಎಂಬುವವರನ್ನು ಅರೆಸ್ಟ್ ಮಾಡಿದ್ದಾರೆ.