Breaking News

ಶಿಕ್ಷಕಿ ಜತೆ 10ನೇ ಕ್ಲಾಸ್‌ ಹುಡುಗನ ಲವ್ವಿ-ಡವ್ವಿ! ಓಡಿಹೋಗಿ ಮದ್ವೆ

Spread the love

ಚೆನ್ನೈ: ಗುರು-ಶಿಷ್ಯರದ್ದು ಪವಿತ್ರ ಸಂಬಂಧ ಎನ್ನುತ್ತಾರೆ. ಅದಕ್ಕಾಗಿಯೇ ಗುರುವನ್ನು ಬಹಳ ಎತ್ತರದ ಸ್ಥಾನದಲ್ಲಿ ಇಟ್ಟಿರುವ ಸಮಾಜ ನಮ್ಮದು. ಆದರೆ ಈ ಸಂಬಂಧಕ್ಕೆ ಕಳಂಕ ತರುವ ಘಟನೆಯೊಂದು ತಮಿಳುನಾಡಿನ ಅರಿಯಾಲೂರು ಜಿಲ್ಲೆಯಲ್ಲಿ ನಡೆದಿದೆ.

ಪ್ರೇಮ ಕುರುಡು ಎನ್ನುವಂತೆ 10ನೇ ವಿದ್ಯಾರ್ಥಿಯೊಂದಿಗೆ ಅದೇ ಕ್ಲಾಸ್‌ನ ಟೀಚರ್‌ಗೆ ಲವ್‌ ಆಗಿರುವ ಅಚ್ಚರಿಯ ಘಟನೆ ಇದು. ಇಬ್ಬರಿಗೂ ಪರಸ್ಪರ ಪ್ರೀತಿಯುಂಟಾಗಿ ಮದುವೆಯೂ ಆಗಿ ಪೇಚಿಗೆ ಸಿಲುಕಿದ್ದಾರೆ.

ಇಲ್ಲಿಯ ವಿಕ್ರಮಂಗಲಂ ಪ್ರೌಢಶಾಲೆಯಲ್ಲಿ ಶಿಕ್ಷಕಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. 10ನೇ ಕ್ಲಾಸ್‌ನಲ್ಲಿ ಓದುತ್ತಿರುವ ಹುಡುಗನೊಬ್ಬನ ಮೇಲೆ ಈ ಶಿಕ್ಷಕಿಗೆ ಪ್ರೀತಿಯುಂಟಾಗಿದೆ. ಅದನ್ನು ಆಕೆ ಬಾಲಕನಲ್ಲಿ ನಿವೇದನೆ ಮಾಡಿಕೊಂಡಾಗ, ಆತನಿಗೂ ಶಿಕ್ಷಕಿ ಮೇಲೆ ಪ್ರೀತಿಯಾಗಿರುವುದಾಗಿ ಹೇಳಿದ್ದಾನೆ. ಹೀಗೆ ಇಬ್ಬರೂ ಕದ್ದುಮುಚ್ಚಿ ಭೇಟಿಯಾಗುತ್ತ ತಮ್ಮ ಕೆಲಸ ಮುಂದುವರೆಸಿದ್ದರು.

ಕೊನೆಗೂ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಮಜವರಾಯನಲ್ಲೂರು ಗ್ರಾಮದ 17 ವರ್ಷದ ಈ ಬಾಲಕ ತಮ್ಮ ಪ್ರೀತಿಯ ವಿಷಯವನ್ನು ಹಾಗೂ ಶಿಕ್ಷಕಿಯನ್ನು ಮದುವೆಯಾಗುವ ಬಗ್ಗೆ ಪಾಲಕರ ಬಳಿಯೂ ಮಾತನಾಡಿದ್ದಾನೆ. ಆದರೆ ಅವರು ನಿರಾಕರಿಸಿದ್ದಾರೆ. ಕೊನೆಗೆ ಇಬ್ಬರೂ ಓಡಿಹೋಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.

ಮದುವೆಯ ವಿಷಯ ತಿಳಿಯುತ್ತಲೇ ಬಾಲಕನ ಪಾಲಕರು ಕಂಪ್ಲೇಂಟ್‌ ಕೊಟ್ಟಿದ್ದಾರೆ. ಈ ಜೋಡಿಯನ್ನು ಬೆನ್ನತ್ತಿ ಹೋದ ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ. ಪೊಲೀಸರು ತಮ್ಮನ್ನು ಹುಡುಕಿ ಬರುವ ವಿಷಯ ತಿಳಿಯುತ್ತಲೇ ಇವರಿಬ್ಬರೂ ಆತ್ಮಹತ್ಯೆಯೂ ಯತ್ನಿಸಿದ್ದು, ಇವರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ. ಈ ನಡುವೆ ಬಾಲಕ ಅಪ್ರಾಪ್ತನಾಗಿರುವ ಕಾರಣ, ಶಿಕ್ಷಕಿ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ದೂರು ದಾಖಲು ಮಾಡಲಾಗಿದೆ. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.


Spread the love

About Laxminews 24x7

Check Also

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ ‌ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘ ಪ್ರತಿಭಟನೆ

Spread the loveಬೆಳಗಾವಿ ;ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ