ಕನ್ನಡದ ಖ್ಯಾತ ನಟರು ಸೇರಿದಂತೆ ಹಲವಾರು ತಾರೆಯರು, ನಿರ್ದೇಶರು ಹಾಗೂ ನಿರ್ಮಾಪಕರು 2021ರಲ್ಲಿ ಮರೆಯಾಗಿ ಹೋಗಿದ್ದಾರೆ. ಇವರ ಸಾವು 2021 ಕನ್ನಡ ಚಿತ್ರರಂಗಕ್ಕೆ ದುರಂತ ವರ್ಷ ಅಂದ್ರೆ ತಪ್ಪಿಲ್ಲ.
3/ 14
ಕೋಟಿ ನಿರ್ಮಾಪಕ ಅಂತಾ ಕರೆಸಿಕೊಂಡಿದ್ದ ರಾಮು ಅವರ ನಿಧನ ಕನ್ನಡ ಚಿತ್ರರಂಗಕ್ಕೆ ದೊಡ್ಡ ಪೆಟ್ಟು. ಸಿಂಹದ ಮರಿ, ಲಾಕಪ್ ಡೆತ್, ಸರ್ಕಲ್ ಇನ್ಸ್‌ಪೆಕ್ಟರ್, ಚಾಮುಂಡಿ, ಬಾವ ಬಾಮೈದ ಹೀಗೆ 35ಕ್ಕೂ ಹೆಚ್ಚು ಸಿನಿಮಾಗಳನ್ನ ನಿರ್ಮಾಣ ಮಾಡಿ ಹಾಗೂ ವಿತರಣೆಯನ್ನ ಮಾಡಿದ್ದ ಕೋಟಿ ರಾಮು ಏ. 26ರಂದು ಕೊರೊನಾಗೆ ಬಲಿಯಾದರು
4/ 14
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ವಿತರಕರಾಗಿದ್ದ ಕೆ.ಸಿ.ಎನ್ ಚಂದ್ರಶೇಖರ್, ಬಹು ಅಂಗಾಂಗ ವೈಫಲ್ಯದಿಂದ, ಜೂನ್ 14ರಂದು ನಿಧನರಾದರು. ಹುಲಿ ಹಾಲಿನ ಮೇವು, ಬಬ್ರುವಾಹನ ಸೇರಿ ಅನೇಕ ಚಿತ್ರಗಳನ್ನ ಅವರು ನಿರ್ಮಾಣ ಮಾಡಿ ಗಮನ ಸೆಳೆದಿದ್ದರು.
5/ 14
ಕವಿರತ್ನ ಕಾಳಿದಾಸ, ಅಂಜದ ಗಂಡು, ಶಬರಿಮಲೆ ಶ್ರೀ ಸ್ವಾಮಿ ಅಯ್ಯಪ್ಪ ಹೀಗೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ, ಹಿರಿಯ ನಿರ್ದೇಶಕ ರೇಣುಕಾ ಶರ್ಮಾ ಅವರ ಸಾವು ಕೂಡ ದೊಡ್ಡ ನೋವು ತಂದಿತು. ನ್ಯೂಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಕೊರೊನಾ ಮಹಾಮಾರಿಗೆ ಮೇ 5ರಂದು ಬಲಿಯಾರಾದರು
“ನಾನು ಅವನಲ್ಲ ಅವಳು” ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ವಿಜಯ್ ವಿಶಿಷ್ಟ ಪಾತ್ರಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದರು. ಸ್ನೇಹಿತನ ಜೊತೆ ಬೈಕ್ನಲ್ಲಿ ಹೋಗುವಾಗ ಅಪಘಾತಕ್ಕೀಡಾಗಿ ಮೆದುಳಿಗೆ ಪೆಟ್ಟು ಬಿದ್ದ ಕಾರಣ ಜೂನ್ 15ರಂದು ನಿಧನರಾದರು. ನಾತಿಚರಾಮಿ, ತೆಲೆದಂಡ, 6ನೇ ಮೈಲಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದರು.
ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಖಳನಾಯಕನಾಗಿ ಮಿಂಚಿದ ನಟ ಸತ್ಯಜಿತ್ ಅವರ ಸಾವು ಕೂಡ ಮರೆಯಲು ಸಾಧ್ಯವಿಲ್ಲ. ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆ ಅಭಿನಯಿಸಿದ್ದ ಸತ್ಯಜಿತ್, ಅಕ್ಟೋಬರ್ 10, 2021 ರಂದು ವಯೋಸಹಜ ಕಾಯಿಲೆಯಿಂದ ನಿಧನರಾದರು.
ಹಿರಿಯ ನಟ ಶಿವರಾಮ್ ಇಹಲೋಕ ತ್ಯಜಿಸಿದರು. ಕನ್ನಡ ಚಿತ್ರರಂಗದಲ್ಲಿ ಆರು ದಶಕಗಳಿಗೂ ಹೆಚ್ಚು ಕಾಲ ನಟಿಸಿದ್ದ ಶಿವರಾಮ್ 2021 ಡಿಸೆಂಬರ್ 4 ರಂದು ಮನೆಯಲ್ಲಿ ಜಾರಿಬಿದ್ದು, ಮೆದುಳಿನ ರಕ್ತಸ್ರಾವದಿಂದ ನಿಧನರಾದರು.
ಪಾಪ್ ಕಾರ್ನ್ ಮಂಕಿ ಟೈಗರ್, ಬ್ಯಾಡ್ ಮ್ಯಾನರ್ಸ್, ಪೆಟ್ರೋಮ್ಯಾಕ್ಸ್ ಚಿತ್ರಗಳ ಸಹ ನಿರ್ಮಾಪಕ ರಾಜಶೇಖರ್ ಕೂಡ ಕೊರೊನಾಗೆ ಉಸಿರು ಚೆಲ್ಲಿದ್ದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಏ. 30ರಂದು ಮನೆಯಲ್ಲೇ ಉಸಿರಾಟದ ತೊಂದರೆ ಆದ ಕಾರಣ ರಾಜಶೇಖರ್ ಹೃದಯಾಘಾತದಿಂದ ಮೃತಪಟ್ಟರು.
ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಾಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು ಸಿದ್ದಲಿಂಗಯ್ಯ. ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿ ಜನಪ್ರಿಯರಾಗಿದ್ದ ಸಿದ್ದಲಿಂಗಯ್ಯ ಜೂ. 11ರಂದು ವಿಧಿವಶರಾದರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದ ಅವರು, ಅಧ್ಯಾಪನ – ಬರವಣಿಗೆಗಳಲ್ಲಿ ತೊಡಗಿಸಿಕೊಂಡು ಕನ್ನಡ ನಾಡಿಗೆ ಚಿರಪರಿಚಿತರಾಗಿದ್ದರು.
‘ಅಭಿನಯ ಶಾರದೆ’ ಜಯಂತಿ ಜುಲೈ 26ರಂದು ವಿಧಿವಶವರಾದರು. ಅವರು ಕನ್ನಡದ ಸುಮಾರು 190 ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.
ತಿಪಟೂರು ರಘು (83) ಸಹ 2021ರಲ್ಲೇ ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗದ ಮತ್ತೊಬ್ಬ ಹಿರಿಯ ನಿರ್ದೇಶಕರು. ಅವರು ಹಲವು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆಯಿಂದಾಗಿ ನಿಧನರಾದರು. ಕೆಂಪು ಹೋರಿ, ಸ್ವರ್ಣ ಮಹಲ್ ರಹಸ್ಯ, ನಾಗ ಕಾಳ ಭೈರವ, ಬೆಂಕಿ ಬಿರುಗಾಳಿ, ಬೆಟ್ಟದ ಹುಲಿ, ವೀಣೆ ಸೇರಿದಂತೆ 16ಕ್ಕೂ ಹೆಚ್ಚು ಸಿನಿಮಾಗಳನ್ನ ತಿಪಟೂರು ರಘು ನಿರ್ದೇಶನ ಮಾಡಿದ್ದಾರೆ.
13/ 14
250ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಶಂಖನಾದ ಅರವಿಂದ್ ಕೊರೊನಾಗೆ ಬಲಿಯಾಗಿದ್ದು ಮಗದೊಂದು ದುರಂತ. ಪುನೀತ್ ರಾಜ್‍ಕುಮಾರ್ ಬಾಲ್ಯದಲ್ಲಿ ನಟಿಸಿದ್ದ ಬೆಟ್ಟದ ಹೂವು ಚಿತ್ರದಲ್ಲಿ ಶಂಖನಾದ ಅರವಿಂದ್ ಅದ್ಭುತ ಅಭಿನಯ ಮಾಡಿದ್ದರು
14/ 14
ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೇ ಇಡೀ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಆಘಾತ ಉಂಟು ಮಾಡಿದ ಸುದ್ದಿ ಅಂದ್ರೆ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣ. ಅ. 29 ರಂದು ಹೃದಯಾಘಾತದಿಂದ ವಿಧಿವಶರಾದರು. ಅವರ ಸಾವು ಇಡೀ ಚಿತ್ರರಂಗಕ್ಕೆ ದೊಡ್ಡ ಪೆಟ್ಟಾಗಿ ಕಾಡಿಸತೊಡಗಿದೆ. ಅಪ್ಪು ಸಾವು 2021ನೇ ವರ್ಷ ಕನ್ನಡ ಚಿತ್ರರಂಗಕ್ಕೆ ಕರಾಳ ವರ್ಷ ಅಂದ್ರೆ ತಪ್ಪಿಲ್ಲ.