Breaking News

ಹಿಂದೆ ಬ್ರಿಟಿಷರು ಮಾಡುತ್ತಿದ್ದ ಕೆಲಸವನ್ನು ಈಗ ಕಾಂಗ್ರೆಸ್ ಮಾಡ್ತಿದೆ: ಧನಂಜಯ್ ಜಾದವ್

Spread the love

ಬೆಳಗಾವಿ: ಹಿಂದೆ ಬ್ರಿಟಿಷರು ಮಾಡುತ್ತಿದ್ದ ಕೆಲಸವನ್ನು, ಇಂದು ಕಾಂಗ್ರೆಸ್ ಪಕ್ಷದವರು ಮಾಡ್ತಿದ್ದಾರೆ ಎಂದು ಬಿಜೆಪಿ ಮುಖಂಡ ಧನಂಜಯ್ ಜಾದವ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಹಿಂದೂಪರ ಕಾರ್ಯಕರ್ತರ ಸ್ನೇಹಮಿಲನ ಮತ್ತು ಸ್ನೇಹ ಭೋಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಧನಂಜಯ್ ಜಾದವ್ ಅವರು, ಮೊದಲು ಬ್ರಿಟಿಷರು ಜಾತಿ ಮಧ್ಯೆ ಭಾಷೆ ತಂದು ಜಗಳ ಹಚ್ಚುತ್ತಿದ್ರು. ಈಗ ಆ ಕೆಲಸ ಕಾಂಗ್ರೆಸ್ ಪಕ್ಷದವರು ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

ಎಲ್ಲಿ ಧ್ವಜ ಹಚ್ಚಿದ್ರೆ ಬೆಂಕಿ ಹೊತ್ತುತ್ತೆ, ಯಾವ ಮೂರ್ತಿ ಇಟ್ರೆ ಬೆಂಕಿ ಹೊತ್ತುತ್ತೆ ಅನ್ನೋದು ಕಾಂಗ್ರೆಸ್ ಅವರಿಗೆ ಚೆನ್ನಾಗಿ ಗೊತ್ತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಶಿವಸೇನೆ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿತು. ಬೆಂಗಳೂರಲ್ಲಿ ಜಮೀರ್ ಅಹ್ಮದ್ ಬಲಗೈ ಬಂಟ ನವೀನ್ ಗೌಡ ಛತ್ರಪತಿ ಶಿವಾಜಿ ಮಹಾರಾಜರ್ ಮೂರ್ತಿಗೆ ಕಪ್ಪು ಮಸಿ ಬಳಿದ ಎಂದು ವಿವರಿಸಿದರು.


ಮಹಾರಾಷ್ಟ್ರದಲ್ಲಿ ಕರ್ನಾಟಕ ಧ್ವಜ ಸುಟ್ಟವರು ಕಾಂಗ್ರೆಸ್ ಪಕ್ಷದವರು ಎಂದು ವಾಗ್ದಾಳಿ ಮಾಡಿದ ಅವರು, ಕೆಲ ರಾಜಕಾರಿಣಿಗಳು ಇದನ್ನ ತಮ್ಮ ಸ್ವಾರ್ಥಕ್ಕೆ ಬಳಸಿ ಕೊಂಡು ಕನ್ನಡ ಹಾಗೂ ಮರಾಠಿ ಭಾಷೆ ಮಧ್ಯೆ ಜಗಳ ಹಚ್ಚಿದ್ದಾರೆ. ಇವರಿಗೆ ನಾಚಿಕೆ ಬರಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 


Spread the love

About Laxminews 24x7

Check Also

ವಾಯವ್ಯ ಸಾರಿಗೆಯ ಪ್ರತಿಷ್ಠಿತ ಸಾರಿಗೆ ಬಸ್​ಗಳ ಪ್ರಯಾಣ ದರ ಇಳಿಕೆ..!

Spread the loveಹುಬ್ಬಳ್ಳಿ: ದೂರ ಮಾರ್ಗಗಳಲ್ಲಿ ಪ್ರಯಾಣ ಮಾಡುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಯಾಣಿಕರ ದಟ್ಟಣೆ ಕಡಿಮೆ ಇರುವ ಆಯ್ದ ಕೆಲವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ