ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಇಂದು ವಿಧಾನಸಭೆಯಲ್ಲಿ ಧ್ವನಿ ಮತದ ಮೂಲದ ಅಂಗೀಕಾರವಾಗಿದೆ. ಈ ನಡುವೆ ಕಳೆದ ಎರಡು ದಿನದಿಂದ ಸದನದಲ್ಲಿ ಪರ ಮತ್ತು ವಿರೋಧವಾಗಿ ಮಸೂದೆ ಪರ ಕಾವೇರಿದ ಮಾತಿನ ಚಕಮಕಿ ಕೂಡೆ ನಡೆಯಿತು.
ಹಾಗಾದ್ರೇ ಮತಾಂತರ ನಿಷೇಧ ಕಾಯ್ದೆಯಲ್ಲಿ ಇರೋದು ಏನು ಅನ್ನುವುದನ್ನು ನೋಡುವುದಾದ್ರೆ ಅದರ ಬಗ್ಗೆ ಇಲ್ಲಿದೆ ಮಾಹಿತಿ
ರಾಜ್ಯದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣೆಗಾಗಿ ಮತ್ತು ತಪ್ಪು ನಿರೂಪಣೆ, ಬಲವಂತ, ಅನುಚಿತ ಪ್ರಭಾವ, ಒತ್ತಾಯ, ಆಮಿಷದ ಮೂಲಕ ಅಥವಾ ಯಾವುದೇ ವಂಚನೆಯ ವಿಧಾನಗಳ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನು ಬಾಹಿರ ಮತಾಂತರ ಮಾಡುವುದನ್ನು ನಿಷೇಧಿಸುವುದಕ್ಕಾಗಿ ಜಾರಿಗೊಳಿಸುತ್ತಿರುವಂತ ವಿಧೇಯಕವೇ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2021 ಆಗಿದೆ.
ಈ ಕಾಯಿದೆಯನುಸಾರ ಆಮಿಷದ ಆಸೆಯಿಂದ ಅಂದ್ರೇ ಹಣ, ವಸ್ತು ರೂಪದಲ್ಲಿ ನೀಡೋದಾಗಿ ಮತಾಂತರಿಸಿದ್ರೂ ಅದು ಅಪರಾಧ ಆಗಲಿದೆ. ಅಲ್ಲದೇ ಮದುವೆಯಾಗೋದಾಗಿ ವಾಗ್ದಾನ ಮಾಡೋದು, ನಿಮಗೆ ಒಳ್ಳೆಯ ಜೀವನ ನೀಡುತ್ತೇವೆ. ಒಂದು ಧರ್ಮವನ್ನು ಮತ್ತೊಂದು ಧರ್ಮಕ್ಕೆ ಹೋಲಿಕೆ ಮಾಡಿ ಧಕ್ಕೆ ಮಾಡಿ ಮನವೊಲಿಸೋದು ಅಪರಾಧವಾಗಲಿದೆ. ಇನ್ನೂ ಯಾರೇ ವ್ಯಕ್ತಿಯನ್ನು ಶಾರೀರಕ ಹಾನಿ ಉಂಟು ಮಾಡುವ, ಬೆದರಿಕೆ ಒಡ್ಡುವ, ಮಾನಸಿಕ ಒತ್ತಡ, ದೈಹಿಕ ಬಲಪ್ರಯೋಗ ಬಳಸಿ, ಆತನ ಇಚ್ಛೆಗೆ ವಿರುದ್ಧವಾಗಿ ಮತಾಂತರಿಸೋದು ಒತ್ತಾಯಪೂರ್ವಕವಾದಂತ ಮತಾಂತರ ಆಗಲಿದೆ.
ಇದಷ್ಟೇ ಅಲ್ಲದೇ ಮತಾಂತರಗೊಳ್ಳಲಿರುವಂತ ವ್ಯಕ್ತಿಯು 2 ತಿಂಗಳ ಮೊದಲೇ ಸಕ್ಷಮ ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಮತಾಂತರ ಪ್ರಕ್ರಿಯೆಯನ್ನು ಯಾವುದೇ ಬಲವಂತವಾಗಿ ನಡೆಸುವಂತಿಲ್ಲ ಎಂಬುದಾಗಿ ಕಟ್ಟು ನಿಟ್ಟಿನ ಷರತ್ತು ವಿಧಿಸಲಾಗಿದೆ. ಹಾಗಾದ್ರೇ.. ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವಂತ ಮತಾಂತರ ನಿಷೇಧ ಕಾಯ್ದೆಯಲ್ಲಿ ಏನೆಲ್ಲಾ ಅಂಶಗಳಿವೆ ಎನ್ನುವ ಬಗ್ಗೆ ಆ ಕರಡು ಪ್ರತಿಯಲ್ಲಿನ ಮಾಹಿತಿಯನ್ನೇ ಈ ಕೆಳಗಿದೆ ಓದಿ..