Breaking News

ಎಂಇಎಸ್‌ ಪುಂಡಾಟ, ಸಂಘಟನೆ ನಿಷೇಧದ ಬಗ್ಗೆ ʼಸಿಎಂ ಬೊಮ್ಮಾಯಿʼ ಹೇಳಿದ್ದೇನು ಗೊತ್ತಾ? ಇಲ್ಲಿದೆ ಮಾಹಿತಿ..!

Spread the love

ಬೆಳಗಾವಿ : ಬೆಳಗಾವಿಯಲ್ಲಿ ಎಂಇಎಸ್‌ ಪುಂಡಾಟ ಮೇರೆ ಮೀರುತ್ತಿದ್ದು, ಸಂಘಟನೆ ನಿಷೇಧಿಸುವಂತೆ ಕನ್ನಡ ಸಂಘಟನೆಗಳು ಸೇರಿ ಹಲವು ಪಕ್ಷಗಳು ಸರ್ಕಾರವನ್ನ ಒತ್ತಾಯಿಸಿವೆ. ಇನ್ನು ಅನೇಕ ಕನ್ನಡ ಸಂಘಟನೆಗಳು, ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ, ಇದೇ ಡಿಸೆಂಬರ್‌ 31ರಂದು ಕರ್ನಾಟಕ ಬಂದ್‌ ಘೋಷಿಸಿವೆ.

ಸಧ್ಯ ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ್ದು, ಸ್ನೇಹಕ್ಕೆ ಬದ್ಧ, ಸಮರಕ್ಕೆ ಸಿದ್ಧ ಎನ್ನುವ ಮೂಲಕ ಎಂಇಎಸ್‌ ಪುಂಡರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ‘ಸೂರ್ಯಚಂದ್ರರಿವವರೆಗೂ ಬೆಳಗಾವಿ ನಮ್ಮದೇ ಆಗಿರುತ್ತೆ. ಬೆಳಗಾವಿಯಲ್ಲಿ ಎಂದೆಂದಿಗೂ ಕನ್ನಡಿಗನೇ ಸಾರ್ವಭೌಮನಾಗಿರತ್ತಾನೆ. ಯಾಕಂದ್ರೆ, ಬೆಳಗಾವಿ ಕರ್ನಾಟಕದ ಮತ್ತೊಂದು ಶಕ್ತಿಕೇಂದ್ರ. ಹಾಗಾಗಿನೇ ಇಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ’ ಎಂದರು.

ಇನ್ನು‌ ಈ ವೇಳೆ ಎಂಇಎಸ್ ಪುಂಡರಿಗೆ ಖಡಕ್‌ ಎಚ್ಚರಿಕೆ ನೀಡಿದ ಸಿಎಂ,’ ನಾವು ಕನ್ನಡಿಗರು ಸ್ನೇಹಕ್ಕೆ ಬದ್ಧ, ಸಮರಕ್ಕೆ ಸಿದ್ಧ. ಯಾವುದೇ ಕಾರಣಕ್ಕೂ ಕರ್ನಾಟಕದ ಒಂದಿಂಚೂ ಗಡಿಭೂಮಿ ಬಿಟ್ಟುಕೊಡುವುದಿಲ್ಲ. ಇನ್ನು ಗಡಿ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರನ್ನ ರಕ್ಷಿಸಲು ಸರ್ಕಾರ ಬದ್ಧವಾಗಿದೆ’ ಎಂದರು.

ಇನ್ನು ಮೂರ್ತಿ ಭಂಗ, ನಾಡ ಧ್ವಜ, ಬಸವಣ್ಣನವರ ಮೂರ್ತಿಗೆ ಅಪಮಾನ ಮಾಡಿದವರನ್ನ ಈಗಾಗ್ಲೇ ಬಂಧಿಸಲಾಗಿದೆ. ಅವ್ರಿಗೆ ತಕ್ಕ ಶಿಕ್ಷೆ ಆಗುತ್ತೆ. ಇನ್ನು ನಾನು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುತ್ತೇನೆ. ಎಂಇಎಸ್‌ ಅಟ್ಟಹಾಸ ಅಡಗಿಸಲು ಸರ್ಕಾರದಿಂದ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇನ್ನು ಪುಂಡರ ಮೇಲೆ ದೇಶದ್ರೋಹದ ಕೇಸ್‌ ದಾಖಲಾಗುವುದು. ಯಾಕಂದ್ರೆ, ದಿಟ್ಟ ನಿಲುವು ತೆಗೆದುಕೊಂಡಾಗ ಮಾತ್ರ ಇಂತಹ ಕೃತ್ಯ ನಿಲ್ಲಿಸಲು ಸಾಧ್ಯ ಎಂದರು.

ಸರ್ಕಾರ ಕರ್ನಾಟಕದ ಹಿತಾಸಕ್ತಿಗೆ ಎಂದಿಗೂ ಬದ್ಧವಾಗಿರುತ್ತೆ. ತಂಟೆಕೋರರಿಗೆ ತಕ್ಕ ಶಿಕ್ಷೆ ಆಗುತ್ತೆ. ಈಗಾಗಲೇ ಅವ್ರನ್ನ ಬಂಧಿಸಲಾಗಿದೆ. ಎಂಇಎಸ್‌ ಬ್ಯಾನ್‌ ಮಾಡುವಂತೆ ಹಲವು ಸಂಘಟನೆಗಳು, ವಿರೋಧ ಪಕ್ಷಗಳು ಸಲಹೆ ನೀಡಿವೆ. ಈ ಬಗ್ಗೆ ಕಾನೂನು ನಿಯಮಗಳ ಬಗ್ಗೆ ಪರಿಶೀಲಿಸುತ್ತೇವೆ. ಇನ್ನೂ ಎಂಇಎಸ್‌ ನಿಯಂತ್ರಿಸಲು ಏನೆಲ್ಲಾ ಮಾಡ್ಬೇಕೋ ಅದನ್ನ ಮಾಡ್ತೀವಿ’ ಎಂದರು.

ಮೂರ್ತಿ ಭಂಗ, ಕನ್ನಡ ಧ್ವಜ ಸುಟ್ಟಿರುವುದು, ಬಸವಣ್ಣನ ಮೂರ್ತಿಗೆ ಅಪಮಾನ ಮಾಡಿರುವುದನ್ನ ದೇಶದ್ರೋಹ ಎಂದು ಪರಿಗಣಿಸಿದ್ದು, ಅವ್ರ ಮೇಲೆ ದೇಶದ್ರೋಹದ ಕೇಸ್‌ ಮತ್ತು ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಇನ್ನು ಈ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ರು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ