ಕಾಂಗ್ರೆಸ ಪಕ್ಷದಲ್ಲಿ ವ್ಯಕ್ತಿಗಳು ಬರ್ತಾರೆ ವ್ಯಕ್ತಿಗಳು ಹೋಗ್ತಾರೆ. ಕಾಂಗ್ರೆಸ ಪಕ್ಷದಲ್ಲಿ ವ್ಯಕ್ತಿಗಳು ಅಲ್ಲ ಪಕ್ಷ ದೊಡ್ಡದು. ಗೋಕಾಕ ಕಾಂಗ್ರೆಸ್ ಪಕ್ಷದ ತವರು ಮನೆ ಎನ್ನುವ ಮೂಲಕ ಪರೋಕ್ಷವಾಗಿ ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟರು.
ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಅಧಿಕೃತವಾಗಿ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು ಅಶೋಕ ಪೂಜಾರಿ ಕುಟುಂಬ ಒಟ್ಟು ಆರು ಬಾರಿ ಸ್ಪರ್ಧೆ ಮಾಡಿ ಸೋತಿದ್ದಾರೆ. ಅಶೋಕ ಪೂಜಾರಿ ತಂದೆ ಎರಡು ಬಾರಿ, ಅಶೋಕ ಪೂಜಾರಿ ನಾಲ್ಕು ಬಾರಿ ಸೋತಿದ್ದಾರೆ ಎಂದು ನೆನಪಿಸಿಕೊಂಡರು. ಮುಂದಿನ ದಿನಗಳಲ್ಲಿ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಇನ್ನೊಂದು ದಿನ ನಾವು ಗೋಕಾಕ ಬರ್ತಿವಿ ಸತೀಶ್ ಜಾರಕಿಹೊಳಿ ಯಾವಾಗ ದಿನಾಂಕ ನಿಗದಿ ಮಾಡ್ತಾರೋ, ಅವತ್ತ ಗೋಕಾಕ ಬಂದು ಉಳಿದೆಲ್ಲ ಕಾರ್ಯಕರ್ತರನ್ನ ಕಾಂಗ್ರೆಸ ಸೇರ್ಪಡೆ ಮಾಡ್ಕೊತ್ತಿವಿ. ಗೋಕಾಕನಲ್ಲಿ ಕಾಂಗ್ರೆಸ ಪಕ್ಷಕ್ಕೆ ಇನ್ನಷ್ಟು ಶಕ್ತಿ ತಂದುಕೊಡುವ ಕೆಲಸ ಮಾಡಬೇಕು. ಬೆಳಗಾವಿ ಜಿಲ್ಲೆ ಹಾಲಿ ಮಾಜಿ ಶಾಸಕರು ಒಮ್ಮತದಿಂದ ಅಶೋಕ ಪೂಜಾರಿ ಕಾಂಗ್ರೆಸ ಸೇರ್ಪಡೆ ಮಾಡ್ಕೊಂಡಿದ್ದೇವೆ ಎಂದರು.