ಬೆಂಗಳೂರು: ನಿನ್ನೆ ರಾಜ್ಯ ಸಚಿವ ಸಂಪುಟದಲ್ಲಿ ವಿಧಾನಸಭೆಯಲ್ಲಿ ಮಂಡಿಸಲು ಒಪ್ಪಿಗೆ ಸೂಚಿಸಲಾಗಿದ್ದಂತ ಮತಾಂತರ ವಿಧೇಯಕ ಮಸೂಧೆಯನ್ನು ಅಂತೂ ಇಂತೂ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಇದೀಗ ಮಂಡಿಸಿದೆ.
ಇಂದು ವಿಧಾನಸಭೆಯ ಕಲಾಪದ ಪಟ್ಟಿಯಲ್ಲಿ ಮತಾಂತರ ನಿಷೇಧ ವಿಧೇಯಕದ ಮಂಡನೆಯನ್ನು ಸೇರಿಸಿರಲಿಲ್ಲ.
ಇದರ ನಡುವೆಯೂ ಮಧ್ಯಾಹ್ನದ ಭೋಜನದ ವಿರಾಮದ ನಂತ್ರ ಕಲಾಪ ಆರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರವು ಮತಾಂತರ ನಿಷೇಧದ ವಿಧೇಯಕವನ್ನು ಮಂಡನೆ ಮಾಡಲಾಯಿತು.
ಇದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದಂತ ವಿಪಕ್ಷ ನಾಯಕ ಸಿದ್ಧರಾಮಯ್ಯ, ಇಂದು ಸದನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ಮಾಡೋ ಬಗ್ಗೆ ಯಾವುದೇ ಮಾಹಿತಿ ನೀಡದಂತೆ ಮಂಡಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂಬುದಾಗಿ ಕಿಡಿಕಾರಿದರು.
ಈ ವೇಳೆ ಸಚಿವ ಮಾಧುಸ್ವಾಮಿ ಮಾತನಾಡಿ ನಾವು ಹೇಳಿದಂತೆ ಮತಾಂತರ ನಿಷೇಧ ವಿಧೇಯಕವನ್ನು ಮಂಡಿಸಲಾಗುತ್ತಿದೆ. ಅದರ ಹೊರತಾಗಿ ಯಾವುದೆ ಮುಚ್ಚು ಮರೆಯಿಂದ ಮಸೂದೆ ಮಂಡಿಸ್ತಾ ಇಲ್ಲ ಎಂಬುದಾಗಿ ಹೇಳಿದರು.