Breaking News

ಬೆಳಗಾವಿಯಲ್ಲಿ ಮತ್ತೆ `MES’ ಪುಂಡಾಟ : ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ!

Spread the love

ಬೆಳಗಾವಿ : ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಆರೋಪ ಕೇಳಿಬಂದಿತ್ತು. ಈ ಘಟನೆ ಖಂಡಿಸಿ ಹಿಂದೂಪರ ಸಂಘಟನೆಳು ಪ್ರತಿಭಟನೆ ನಡೆಸಿದ್ದು. ಈ ವೇಳೆ ಎಂಇಎಸ್ ಪುಂಡಾಟ ನಡೆಸಿದ್ದು, ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.

 

 

ಬೆಂಗಳೂರಿನ ಶಿವಾಜಿನಗರದಲ್ಲಿರುವ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಬಳಿದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಬೆಳಗಾವಿಯಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಡುವೆ ಸರ್ಕಾರಿ ಬಸ್ ಮೇಲೆ ಕಲ್ಲೂತೂರಾಟ ನಡೆಸಲಾಗಿದೆ. ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿರುವ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಶುಭಂ ಶಳಕೆ, ಮಾಜಿ ಮೇಯರ್ ಸರಿತಾ ಪಾಟೀಲ ಸೇರಿ ಎಂಇಎಸ್ ಪುಂಡರು ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.

 

ಪ್ರತಿಭಟನೆ ವೇಳೆ ಎಂಇಎಸ್ ಪೊಲೀಸರ ಜೀಪ್, ಬಸ್ ಸೇರಿದಂತೆ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಡಿಸಿಪಿ ವಿಕ್ರಂ ಆಮಟೆ ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರತಿಭಟನಾಕಾರರಿಂದ ಪೊಲೀಸರ ಮೇಲೆ‌ ಕೂಡ ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗುತ್ತಿದೆ. ಸದ್ಯ ಪ್ರತಿಭಟನಾ ಸ್ಥಳದಲ್ಲಿ 400 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.


Spread the love

About Laxminews 24x7

Check Also

ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿರುವ ವಿಜಯೇಂದ್ರ ವಿರುದ್ಧವೂ ನೋಟೀಸ್ ಜಾರಿಯಾಗಬೇಕು: ರಮೇಶ್ ಜಾರಕಿಹೊಳಿ

Spread the loveದೆಹಲಿ: ಪ್ರಸ್ತುತವಾಗಿ ನಾವು ವಕ್ಫ್ ವಿರುದ್ಧ ಮಾಡಿದ ಹೋರಾಟದ ವರದಿಯನ್ನು ಜೆಪಿಸಿಗೆ ನೀಡಲು ಬಂದಿದ್ದೇವೆ, ಮುಂದಿನ ಸಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ