Breaking News

ರೇಪ್ ಆದಾಗ ತಡೆಯಲು ಸಾಧ್ಯವಾಗದಿದ್ರೆ ಮಲಗಿ ಎಂಜಾಯ್ ಮಾಡಿಬಿಡಬೇಕು ಎಂದರಮೇಶ್ ಕುಮಾರ್ ಇಂದು ಸದನದಲ್ಲಿ ಹೇಳಿದ್ದೇನು?

Spread the love

ಬೆಳಗಾವಿ: ರೇಪ್ ಆಸ್ವಾದಿಸಿ ಎಂಬ ಹೇಳಿಕೆಗೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ (KR Ramesh Kumar) ಕ್ಷಮೆಯಾಚಿಸಿದ್ದಾರೆ. ಟ್ವೀಟ್ ಮೂಲಕ ಕ್ಷಮೆಯಾಚಿಸಿದ ಕೆ.ಆರ್.ರಮೇಶ್‌ ಕುಮಾರ್ (KR Ramesh Kumar) ಇನ್ನು ಮುಂದೆ ಇಂತಹ ಪದ ಬಳಸದಂತೆ ಎಚ್ಚರ ವಹಿಸುತ್ತೇನೆ ಎಂದು ಹೇಳಿದ್ದಾರೆ. ಅತಿವೃಷ್ಟಿ ಬಗ್ಗೆ ಸದನದಲ್ಲಿ ನಿಯಮ 69ರಡಿ ಚರ್ಚೆ ನಡೆಯುತ್ತಿದ್ದ ವೇಳೆ, ಅತ್ಯಾಚಾರ ಆದಾಗ ತಡೆಯಲು ಸಾಧ್ಯವಾಗದಿದ್ದರೆ ಮಲಗಿ ಎಂಜಾಯ್ ಮಾಡಿಬಿಡಬೇಕು ಎಂದು ರಮೇಶ್ ಕುಮಾರ್‌ (KR Ramesh Kumar) ಹೇಳಿಕೆ ನೀಡಿದ್ದರು. ಸದ್ಯ ಈ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.

ಲಘುವಾಗಿ ವರ್ತಿಸಬೇಕೆಂಬ ಉದ್ದೇಶ ನಮಗೆ ಇರಲಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರು ನೋವಾಗಿದ್ದರೆ ವಿಷಾದಿಸುವೆ. ದೇಶದ ಮಹಿಳೆಯರ ಭಾವನೆಗಳಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ. ಮುಕ್ತ ಮನಸ್ಸಿನಿಂದ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ವಿಧಾನಸಭೆಯಲ್ಲಿ ಕೆ.ಆರ್.ರಮೇಶ್‌ ಕುಮಾರ್ ಕ್ಷಮೆಯಾಚಿಸಿದ್ದಾರೆ.

ಕಲಾಪ ಆರಂಭವಾಗುತ್ತಿದ್ದಂತೆಯೇ  ರಮೇಶ್ ಕುಮಾರ್​ಗೆ ಮಾತನಾಡಲು ಸೂಚಿಸಿದ ಸ್ಪೀಕರ್
ಹೆಣ್ಣಿಗೆ ಅಪಮಾನಿಸುವ, ಲಘುವಾಗಿ ಮಾತಾಡುವ ಉದ್ದೇಶ ಇಲ್ಲ. ವಿಷಾದ ವ್ಯಕ್ತಪಡಿಸಲು ನನಗೆ ಯಾವುದೇ ರೀತಿಯ ಪ್ರತಿಷ್ಠೆ ಇಲ್ಲ. ಗ್ರಹಚಾರಕ್ಕೆ ಸ್ಪೀಕರ್ ನನ್ನ ಹೆಸರು ಹೇಳಿದಾಗ ಪ್ರತಿಕ್ರಿಯಿಸಿದ್ದೆ. ಹೆಸರಾಂತ ಇಂಗ್ಲಿಷ್ ಚಿಂತಕರ ಹೇಳಿಕೆಯನ್ನು ಉಲ್ಲೇಖಿಸಿದ್ದೆ ಅಷ್ಟೇ. ಈ ವಿಚಾರಕ್ಕೆ ಇಲ್ಲಿಗೇ ಅಂತ್ಯ ಹಾಡಿ ಕಲಾಪ ಮುಂದುವರಿಸೋಣ. ಇನ್ನು ಈ ವಿಚಾರವಾಗಿ ಕಲಾಪ ಹಾಳು ಮಾಡುವುದು ಬೇಡ. ಹೀಗಾಗಿ ನನ್ನ ಹೇಳಿಕೆಗೆ ಕ್ಷಮೆಯಾಚಿಸುತ್ತಿದ್ದೇನೆ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.

 

ಗುರುವಾರ ಸದನದಲ್ಲಿ ಹೇಳಿದ್ದೇನು?
ಅತ್ಯಾಚಾರ ಆಗುವಾಗ ತಡೆಯಲು ಸಾಧ್ಯವಾಗದಿದ್ದರೆ ಮಲಗಿ ಎಂಜಾಯ್ ಮಾಡಿಬಿಡಬೇಕು ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್​ ಕುಮಾರ್ ಹೇಳಿದರು. ಈ ಹೇಳಿಕೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಕ್ಕರು. ಸದನದಲ್ಲಿದ್ದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಈ ಹೇಳಿಕೆ ಸಹಜ ವಿದ್ಯಮಾನ ಎನ್ನುವಂತೆ ವರ್ತಿಸಿದರು. ಸದನದಲ್ಲಿ ಅತಿವೃಷ್ಟಿ ಕುರಿತು ನಿಯಮ 69ರ ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಜೆ 5ರ ವೇಳೆ ಚರ್ಚೆಗೆ ಹೆಚ್ಚಿನ ಸಮಯಬೇಕು ಎಂದು ಸದಸ್ಯರು ವಿನಂತಿಸಿದ್ದರು. ಆಗ ಸಂಜೆ 6 ಗಂಟೆಯವರೆಗೆ ಸಮಯ ಕೊಡುತ್ತೇನೆ ಎಂದು ಸ್ಪೀಕರ್‌ ಹೇಳಿದ್ದರು.

‘ಎಲ್ಲರೂ ಮಾತನಾಡಬೇಕು ಎನ್ನುತ್ತಾರೆ. ನನಗೆ ಸದನದ ಬ್ಯುಸಿನೆಸ್ ನಡೆಯುವುದು ಮುಖ್ಯ. ಇದು ನಿಮ್ಮದೇ ಸದನ, ಈಗ ನನ್ನ ಪರಿಸ್ಥಿತಿ ಹೇಗಾಗಿದೆ ಅಂದರೆ ಲೆಟ್ಸ್ ಎಂಜಾಯ್​ದ ಸಿಚುಯೇಷನ್ ಅನ್ನೋ ರೀತಿ ಆಗಿದೆ ರಮೇಶ್ ಕುಮಾರ್ ಅವರೇ’ ಎಂದು ಹೇಳಿದರು. ತಮ್ಮ ಹೆಸರು ಪ್ರಸ್ತಾಪವಾಗಿದ್ದಕ್ಕೆ ಎದ್ದುನಿಂತು ಪ್ರತಿಕ್ರಿಯಿಸಿದ ರಮೇಶ್​ಕುಮಾರ್, ರೇಪ್ ಆದಾಗ ತಡೆಯಲು ಸಾಧ್ಯವಾಗದಿದ್ರೆ ಮಲಗಿ ಎಂಜಾಯ್ ಮಾಡಿಬಿಡಬೇಕು ಎಂದರು. ಶಾಸಕ ರಮೇಶ್ ಕುಮಾರ್ ಮಾತಿಗೆ ಸ್ಪೀಕರ್ ಕಾಗೇರಿ ನಕ್ಕರು.


Spread the love

About Laxminews 24x7

Check Also

ಪ್ರಿಯಕರನ ಜೊತೆ ಸೇರಿ ತಾಯಿಯಿಂದಲೇ ಮಗಳ ಕೊಲೆ: ಕಠಿಣ ಶಿಕ್ಷೆಗೆ ಸಂಬಂಧಿಕರ ಆಗ್ರಹ

Spread the love ಹಾವೇರಿ: ಪ್ರಪಂಚದಲ್ಲಿ ಕೆಟ್ಟ ತಂದೆ ಇರಬಹುದು. ಆದ್ರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ