Breaking News

ಹಾ.. ಹಾ.. ಹೋ ಶಬ್ದಗಳಿದ್ದ ವಿಡಿಯೋಗಳಿಗೆ ಸ್ಟೇ ತಂದ 12 ಪತಿವ್ರತರು.. ಬಿಜೆಪಿ ಸುಮ್ಮನ್ಯಾಕಿದೆ?.. ಇಬ್ರಾಹಿಂ

Spread the love

ಬೆಳಗಾವಿ : ಮಾಜಿ ಸ್ಪೀಕರ್ ಅವರ ಆ ವಿವಾದಾತ್ಮಕ ಪದವನ್ನು ಕಡತದಿಂದ ತೆಗೆದು ಹಾಕಬೇಕಿತ್ತು ಎಂದು ಕಾಂಗ್ರೆಸ್​​ ನಾಯಕ ಸಿ ಎಂ ಇಬ್ರಾಹಿಂ ಹೇಳಿದರು.

ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಸ್ಪೀಕರ್ ಕಾಗೇರಿ ಆ ಸ್ಥಾನದಲ್ಲಿ ಕುಳಿತಾಗ ರಮೇಶ್ ಕುಮಾರ್ ಅವರ ಆ ಪದವನ್ನು ಕಡತದಿಂದ ತೆಗೆದು ಹಾಕಬೇಕಿತ್ತು. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಇಬ್ಬರು ಒಂದೇ ಅರ್ಥದಲ್ಲಿ ಹೇಳಿದ್ದಾರೆ ಎಂದು ಸ್ಪೀಕರ್ ನಡೆಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು.

ರ್ಕಾರಕ್ಕೆ ಯಾವ ಭಾಷೆಯಲ್ಲಿ ಹೇಳಬೇಕು ಅಂತಾ ಗೊತ್ತಾಗಲ್ಲ. ಕನ್ನಡ ಮತ್ತು ಇಂಗ್ಲಿಷ್​​ನಲ್ಲಿ ಹೇಳಿದ್ರೆ ಅರ್ಥವಾಗಲ್ಲ. ಹಾಗಾಗಿ, ಅವರದ್ದೇ ಭಾಷೆಯಲ್ಲಿ ರಮೇಶ್ ಕುಮಾರ್ ಹೇಳಿದ್ದಾರೆ‌. ತಮ್ಮ ವಿಡಿಯೋಗೆ ಕೋರ್ಟ್​ಗೆ ಹೋಗಿ ತಡೆಯಾಜ್ಞೆ ತಂದ 12 ಮಂದಿ ಪತಿವ್ರತರು ಪಕ್ಕದಲ್ಲಿ ಕುಳಿತಿದ್ದಾರೆ‌. ಹಾ…ಹಾ..ಹೋ…ಎನ್ನುವ ಶಬ್ದಗಳಿದ್ದವು. ಶಿಸ್ತಿನ ಕೇಸರಿ ನಾಯಕರು ಯಾಕೆ? ಸುಮ್ಮಿನಿದ್ದಾರೆ ಎಂದು ಇಬ್ರಾಹಿಂ ಪ್ರಶ್ನಿಸಿದರು.

ಸದಾನಂದಗೌಡ ಅವರ ವಿಡಿಯೋ ಇದೆ. ಅವರು ಸದಾ ನಗ್ತಾ ಇರ್ತಾರೆ. ಯಾಕೆ ಕೋರ್ಟ್ ಹೋಗಿ ತಡೆಯಾಜ್ಞೆ ತಂದಿದ್ದರು ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು. ಬಿಜೆಪಿ‌ ಮತ್ತು ಕೇಶವಕೃಪದವರು ಸುಮ್ಮನೆ ಇದ್ದಾರೆ. ರಮೇಶ್ ಕುಮಾರ್‌ ಬ್ರಾಹ್ಮಣರು. ಆದ್ರೆ, ಅವರು ಕೇಶವ ಕೃಪ ಮತ್ತು ಬಸವಾದಿ ಶರಣರ ನಡುವೆ ಇದ್ದಾರೆ ಎಂದು ಸೂಚ್ಯವಾಗಿ ತಿಳಿಸಿದರು.

ರಮೇಶ್ ಕುಮಾರ್ ಹೇಳಿಕೆ ಸರಿಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ, ನನಗೂ 8 ಜನ ಹೆಣ್ಣು ಮಕ್ಕಳಿದ್ದಾರೆ‌. ರಮೇಶ್ ಕುಮಾರ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಅಂತಾ ಗೊತ್ತಿಲ್ಲ ಎಂದರು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ