ಪಶ್ಚಿಮ ಗೋದಾವರಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ಬಸ್ ಹೊಳೆಗೆ ಬಿದ್ದು ಕನಿಷ್ಠ 9 ಮಂದಿ ಸಾವನ್ನಪ್ಪಿದ ಭೀಕರ ಅವಘಡ ಮಂಗಳವಾರ ನಡೆದಿದೆ.
ಜಂಗರೆಡ್ಡಿ ಎಂಬಲ್ಲಿ ಸೇತುವೆಯ ಮೇಲೆ ಎಪಿಎಸ್ ಆರ್‌ಟಿ ಯ ಬಸ್ ಅಪಘಾತಕ್ಕೆ ಗುರಿಯಾಗಿದ್ದು, ಹೊಳೆಗೆ ಬಿದ್ದು ದುರಂತ ಸಂಭವಿಸಿದೆ.
ಅವಘಡಕ್ಕೆ ಗುರಿಯಾಗುವ ಮೊದಲು ಬಸ್ಸಿನಲ್ಲಿ 26 ಮಂದಿ ಪ್ರಯಾಣಿಕರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಸ್ಥಳೀಯರು ತುರ್ತು ಕಾರ್ಯಾಚರಣೆ ನಡೆಸಿ ಬಸ್ಸಿನಲ್ಲಿ ಸಿಕ್ಕ ಪ್ರಯಾಣಿಕರನ್ನು ಹೊರಗೆ ತೆಗೆದಿದ್ದಾರೆ. ಪೊಲೀಸರು, ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಕ್ಕೆ ಕ್ರಮಕೈಗೊಂಡಿದ್ದಾರೆ.
ಅವಘಡಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ.
ಹೆಚ್ಚಿನ ವಿವರ ನೀರಿಕ್ಷಿಸಲಾಗುತ್ತಿದೆ.
Laxmi News 24×7