ಬಾದಾಮಿ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ವಿರೋಧ ಪಕ್ಷದ ನಾಯಕ ಬಾದಾಮಿ ಶಾಸಕರು ಸಿದ್ದರಾಮಯ್ಯನವರು ಇಂದು ಶುಕ್ರವಾರ ಬಾದಾಮಿಯಲ್ಲಿ ಮತ ಚಲಾಯಿಸಲು ಬಂದ ಸಂದರ್ಭದಲ್ಲಿ ಅಭಿಮಾನಿಗಳು ಜೆ.ಸಿ.ಬಿ ಮೂಲಕ ಹೂ ಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿದರು.
ಮುಖಂಡರಾದ ಹೊಳಬಸು ಶೆಟ್ಟರ್, ಪಿ ಆರ್ ಗೌಡರ, ಎಂ ಬಿ ಹಂಗರಗಿ, ಭೀಮಸೇನ ಚಿಮ್ಮನಕಟ್ಟಿ, ಮಹೇಶ ಹೊಸಗೌಡ್ರ, ನಾಗಪ್ಪ ಅಡಪಟ್ಟಿ, ಶಶಿ ಉದಗಟ್ಟಿ, ಎಚ್ ಬಿ ಯಕ್ಕಪ್ಪನವರ, ಬಸು ಕಟ್ಟಿಕಾರ, ವೆಂಕಣ್ಣ ಹೊರಕೇರಿ, ಹನುಮಂತ ನರಗುಂದ, ಶೇಖಪ್ಪ ಪವಾಡಿನಾಯ್ಕರ, ಲಕ್ಷ್ಮಣ್ ದಾದನಟ್ಟಿ, ಸಣ್ಣಬೀರಪ್ಪ ದ್ಯಾವನಗೌಡ್ರ, ಪಾಂಡು ಗಂಜೆಪ್ಪನವರ, ಮೈಬೂಬ ಬಹದ್ದೂರಖಾನ, ಕರಿಗೌಡ ಮುಷ್ಟಿಗೇರಿ ಸೇರಿದಂತೆ ಕಾರ್ಯಕರ್ತರು ಸಿದ್ದರಾಮಯ್ಯನವರನ್ನು ಅದ್ದೂರಿಯಾಗಿ ಸ್ವಾಗತ ಮಾಡಿದರು.
ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸಾಹೇಬರು ಮತ್ತೆ ಬಾದಾಮಿಯಿಂದ ಸ್ಪರ್ಧೆ ಮಾಡಬೇಕೆಂದು ಘೋಷಣೆಗಳನ್ನು ಕೂಗಿದರು, ಜನರ ಕೂಗು ಮುಗಿಲು ಮುಟ್ಟಿತ್ತು.
ಮಾಜಿ ಶಾಸಕ ಬಿ. ಬಿ. ಚಿಮ್ಮನಕಟ್ಟಿ ಅವರು ಪಕ್ಷದ ಪ್ರಚಾರ ವೇದಿಕೆಯಲ್ಲೇ ಬಹಿರಂಗ ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರಿಗೆ ಈ ಭರ್ಜರಿ ಸ್ವಾಗತ ದೊರಕಿದೆ.