Breaking News

ಟಾಪ್​ 10 ಭಾರತೀಯ ಸಿನಿಮಾಗಳ ಪಟ್ಟಿ ರಿಲೀಸ್.!‌ ಅಗ್ರಸ್ಥಾನದಲ್ಲಿ ‌ʼಜೈ ಭೀಮ್ʼ

Spread the love

ಸಿನಿಮಾಗಳು, ಟಿವಿ ಶೋ ಹಾಗೂ ಸೆಲೆಬ್ರಿಟಿಗಳ ಕುರಿತು ಮಾಹಿತಿ ನೀಡುವ ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಅಧಿಕೃತ ಮೂಲಕ ಐಎಂಡಿಬಿ ಈ ಬಾರಿ ಭಾರತದಲ್ಲಿ ಅತೀ ಹೆಚ್ಚು ಜನಪ್ರಿಯವಾದ ಟಾಪ್​ 10 ಸಿನೆಮಾ ಹಾಗೂ ಟಿವಿ ಶೋಗಳ ಹೆಸರನ್ನು ಬಿಡುಗಡೆ ಮಾಡಿದೆ. ಅಮೆಜಾನ್​ ಪ್ರೈಮ್​​ನಲ್ಲಿ ಬಿಡುಗಡೆಗೊಂಡ ಜೈ ಭೀಮ್​ ಹಾಗೂ ಶೇರ್​​ ಷಾ ಸಿನೆಮಾ ಈ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ.

 

ಜನವರಿ 1ರಿಂದ ನವೆಂಬರ್​ 29ರವರೆಗೆ ದೇಶದಲ್ಲಿ ಸಿನಿಮಾ ಮಂದಿರ ಹಾಗೂ ಡಿಜಿಟಲ್​ ವೇದಿಕೆಗಳಲ್ಲಿ ರಿಲೀಸ್​ ಆದ ಎಲ್ಲಾ ಚಲನಚಿತ್ರಗಳಲ್ಲಿ ಮತ್ತು ಸರಾಸರಿ ಐಎಂಡಿಬಿ ಬಳಕೆದಾರರ ರೇಟಿಂಗ್​ 6.5 ಅಥವಾ ಅದಕ್ಕಿಂತ ಹೆಚ್ಚಿನದಾಗಿದೆ.

ಐಎಂಡಿಬಿ 2021ನೇ ಸಾಲಿನ ಟಾಪ್​ 10 ಭಾರತೀಯ ಸಿನಿಮಾಗಳು:

ಜೈ ಭೀಮ್​
ಶೇರ್​ಷಾ
ಸೂರ್ಯವಂಶಿ
ಮಾಸ್ಟರ್​
ಸರ್ದಾರ್​ ಉದ್ಧಮ್​​
ಮಿಮಿ
ಕರ್ಣನ್​
ಶಿದ್ಧತ್​​
ದೃಶ್ಯಂ 2
ಹಸೀನ್​ ದಿಲ್​ರುಬಾ

ಐಎಂಡಿಬಿಯ 2021ನೇ ಟಾಪ್​ 10 ಇಂಡಿಯನ್ ವೆಬ್​ ಸಿರೀಸ್​​

ಆಸ್ಪಿರಂಟ್ಸ್​​
ಧಿಂಡೋರಾ
ದಿ ಫ್ಯಾಮಿಲಿ ಮ್ಯಾನ್​
ದಿ ಲಾಸ್ಟ್​ ಅವರ್​
ಸನ್​ಫ್ಲವರ್​
ಕ್ಯಾಂಡಿ
ರೇ
ಗ್ರಹಣ್​
ನವೆಂಬರ್​ ಸ್ಟೋರಿ
ಮುಂಬೈ ಡೈರೀಸ್​​ 26/11

ಯಾವೆಲ್ಲ ಸಿನಿಮಾ ಹಾಗೂ ವೆಬ್​ಸಿರೀಸ್​ಗಳು ಟ್ರೆಂಡಿಂಗ್​ ಆಗಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಪಂಚಾದ್ಯಂತ ಅನೇಕರು ಐಎಂಡಿಬಿ ಅವಲಂಬಿಸಿದ್ದಾರೆ. ಹೊಸ ವಿಷಯಗಳನ್ನು ಅನ್ವೇಷಿಸಿ ಮತ್ತು ಏನು ಹಾಗೂ ಎಲ್ಲಿ ವೀಕ್ಷಿಸಬೇಕೆಂದು ನಿರ್ಧರಿಸುತ್ತಾರೆ ಎಂದು ಐಎಂಡಿಬಿಯ ಭಾರತದ ಮುಖ್ಯಸ್ಥೆ ಯಾಮಿನಿ ಪಟೋಡಿಯಾ ಹೇಳಿದ್ದಾರೆ.


Spread the love

About Laxminews 24x7

Check Also

ಮೊಹರಂ ನೃತ್ಯದಲ್ಲೂ ಕಂಡು ಬಂದ ಆರ್.ಸಿ.ಬಿ ಅಭಿಮಾನ

Spread the love ಮೊಹರಂ ನೃತ್ಯದಲ್ಲೂ ಕಂಡು ಬಂದ ಆರ್.ಸಿ.ಬಿ ಅಭಿಮಾನ ಉಗರಗೋಳ, ಚಿಕ್ಕುಂಬಿಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸವದತ್ತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ