ದೇಶದ ಜನರ ಸುರಕ್ಷೆ, ಕೋವಿಡ್ ತಡೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ದೇಶದ ಜನರಿಗೆ ಉಚಿತವಾಗಿ ಕೈಬಿಟ್ಟು ಲಸಿಕೆಯನ್ನು ಕೊಡುತ್ತಿದೆ.ಆದ್ರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಕೊರೊನಾ ಲಸಿಕೆಗಳನ್ನು ಕೊಡದೇ ಇದ್ದರೂ ಕೋವಿಡ್ ಪ್ರಮಾಣ ಪತ್ರಗಳನ್ನು ಕೊಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.
ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಕಳೆದ ಎರಡು ತಿಂಗಳಿನಿಂದ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡದ್ದಿದ್ದರೂ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಚೆನ್ನಮ್ಮ ಕೊಳಚಿ ಎಂಬುವವರು ಮೊದಲ ಮತ್ತು ಎರಡನೇ ಡೋಸ್ ಲಸಿಕೆ ತೆಗೆದುಕೊಳ್ಳಲಾಗಿದೆ ಎಂದು ಜನರಿಗೆ ಕೇಂದ್ರ ಸರ್ಕಾರದಿಂದ ಪ್ರಮಾಣೀಕೃತ ಸರ್ಟಿಫಿಕೇಟ್ ಗಳನ್ನು ನೀಡುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಲಸಿಕೆ ಪಡೆದುಕೊಂಡಿರುವ ಸುಳ್ಳು ಸರ್ಟಿಫಿಕೇಟ್ ಕೊಡುತ್ತಿರುವ ಆಸ್ಪತ್ರೆ ಸಿಬ್ಬಂದಿಗಳು:
ಚಿಕ್ಕೋಡಿ ತಾಲೂಕಿನ ಹಿರೇಕೊಡಿ ಗ್ರಾಮದ ಸುರೇಶ ಗುಡಿಮನಿ ಎಂಬುವವರು ಲಸಿಕೆ ಹಾಕಿಸಿಕೊಳ್ಳಲು ಜಿಲ್ಲಾಸ್ಪತ್ರೆ ತೆರಳಿದ್ದಾರೆ.ಆದ್ರೆ,ಆಸ್ಪತ್ರೆಯ ವೈದ್ಯಾಧಿಕಾರಿ ಚೆನ್ನಮ್ಮ ಕೊಳೆಚೆ ಮತ್ತು ಅವರ ಸಿಬ್ಬಂದಿಗಳು ನೀವು ಲಸಿಕೆ ತೆಗೆದುಕೊಂಡಿದ್ದೀರಿ ಎಂಬ ಹೇಳಿಕೆ ಕೇಳಿ ದಂಗಾಗಿದ್ದಾರೆ. ಕಳೆದ ನವೆಂಬರ್ 09ರಂದು ಮೊದಲ ಡೋಸ್ ಪಡೆದಿರುವುದಾಗಿದೆ ಹೇಳಿದ್ದಾರೆ. ನಾನು ವ್ಯಾಕ್ಸಿನೇಷನ್ ಮಾಡಿಸಿಕೊಂಡಿಲ್ಲದಿದ್ದರೂ ಅದ್ಹೇಗೆ ಲಸಿಕೆ ಪ್ರಮಾಣ ಪತ್ರವನ್ನ ಕೊಡ್ತೇರಿ ಎಂಬ ಪ್ರಶ್ನೆಗೆ ಈಗ ಮತ್ತೆ ಲಸಿಕೆ ಮಾಡಿಸಿಕೋ ಬಾ ಎಂದು ಉಡಾಪೆ ಉತ್ತರ ಕೊಡ್ತಿದ್ದಾರಂತೆ. ಈ ಬಗ್ಗೆ ಪ್ರಶ್ನಿಸಲು ಆಸ್ಪತ್ರೆಗೆ ತೆರಳಿದ್ರೆ ಸುರೇಶನಿಗೆ ಆಸ್ಪತ್ರೆ ಸಿಬ್ಬಂದಿ ಕಡೆಯ ಗೊಂಡಾಗಳು ಕೊಲೆ ಬೆದರಿಕೆ ಹಾಕುತ್ತಿದ್ದಲ್ಲದೇ ಪೋನ್ ಕರೆ ಮಾಡಿ ಅವಾಚ್ಚ ಶಬ್ದಗಳಿಂದ ನಿಂಧಿಸುತ್ತಿದ್ದಾರೆ. ಆದ್ರೆ, ಕೊರೊನಾ ವೈರಸ್ ಬಂದ್ಮೇಲೆ ಜಗತ್ತೇ ಅಲ್ಲೋಲ ಕಲ್ಲೋಲ ಆಗಿದೆ. ಇದೀಗ ಒಮಿಕ್ರಾನ್ ಸೋಂಕಿತ ಪ್ರಕರಣಗಳು ರಾಜ್ಯದಲ್ಲಿ ಕಾಣಿಸಿಕಳ್ಳುತ್ತಿವೆ.ಹೀಗಾಗಿ ಬಡವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಭಾರತ ಸರ್ಕಾರ ದೇಶದ ಎಲ್ಲ ನಾಗರಿಕರಿಗೆ ಉಚಿತವಾಗಿ ವ್ಯಾಕ್ಸಿನೇಷನ್ ಮಾಡುತ್ತಿದೆ.ಆದ್ರೆ, ಲಸಿಕೆ ಕೊಡದಿದ್ದರೂ ಅವರ ಆಧಾರ ಕಾರ್ಡ್‌ಗಳನ್ನು ಪಡೆದುಕೊಂಡು ಯಾರದೋ ಮೊಬೈಲ್ ಸಂಖ್ಯೆ ನಮೂದಿಸಿ ಫಸ್ಟ್ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಸರ್ಕಾರದ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿರವವರ ಮೇಲೆ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಮುಂದೆ ಈರೀತಿಯ ಘಟನೆಗಳು ಆಗದಂತೆ ನೋಡಿಕೊಳ್ಳಬೇಕು. ಬೋಗಸ್ ಲಸಿಕೆ ಪ್ರಮಾಣ ಪತ್ರ ನೀಡುವ ಜಾಲ ಕಳೆದ ಎರಡು ತಿಂಗಳಿನಿಂದ ಅಕ್ರಮದಲ್ಲಿ ಪಾಲ್ಗೊಂಡಿರುವ ಬಗ್ಗೆ ಮಾಹಿತಿ ಇದೆ.ಹೀಗಾಗಿ ಆರೋಗ್ಯ ಇಲಾಖೆ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.