Breaking News
Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ / 2020-21 ರಲ್ಲಿ ನಡೆಯುವ ಪಂಚಾಯತಿ ಚುನಾವಣೆ ವಾರ್ಡಗಳ ಮೀಸಲಾತಿ ಪಟ್ಟಿ

2020-21 ರಲ್ಲಿ ನಡೆಯುವ ಪಂಚಾಯತಿ ಚುನಾವಣೆ ವಾರ್ಡಗಳ ಮೀಸಲಾತಿ ಪಟ್ಟಿ

Spread the love

ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ಗ್ರಾಮ ಪಂಚಾಯತಿಗೆ 2020-21 ರಲ್ಲಿ ನಡೆಯುವ ಪಂಚಾಯತಿ ಚುನಾವಣೆ ವಾರ್ಡಗಳ ಮೀಸಲಾತಿ ಪಟ್ಟಿ ಯಾದಿಯ ಸರ್ಕಾರ ಅಧಿಕೃತ ಪ್ರಕಟಿಸುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಗ್ರಾ. ಪಂ. ಮಾಜಿ ಸದಸ್ಯ ವಿಕ್ರಮ ಬಣಗೆ ಆರೋಪಿಸಿದ್ದಾರೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಪಟ್ಟಿ  ಸರ್ಕಾರ ಪ್ರಕಟಿಸುವ 20 ದಿನಗಳ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಹರದಾಡಿರುವ ಪಟ್ಟಿ ಹಾಗೂ ಇದೀಗ ಪ್ರಕಟಿಸಿರುವ ಪಟ್ಟಿ ಒಂದೇ ಆಗಿರುವದರಿಂದ ಸಂಶಯಕ್ಕೆ ಕಾರಣವಾಗಿದೆ. ಇದೀಗ ಸರಕಾರ ಮೀಸಲಾತಿ ಪಟ್ಟಿ ಪ್ರಕಟಿಸಿದ ನಂತರ ಗ್ರಾಮಸ್ಥರಿಗೆ ಆಕ್ಷಪಣೆ ಸಲ್ಲಿಸಲು ಯಾವುದೆ ಕಾಲಾವಕಾಶ ನೀಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಮೀಸಲಾತಿ ಪ್ರಕಟಿಸುವ ಮೊದಲು ಅಧಿಕಾರಿಗಳು ಇಲ್ಲಿನ ರಾಜಕಾರಣಿಗಳ ಒತ್ತಡಕ್ಕೆ ಮಣಿದು ವಾರ್ಡ ಮೀಸಲಾತಿ ತಮ್ಮ ಮನಸಿಗೆ ಬಂದತೆ ಮೀಸಲಾತಿ ಯಾದಿ ಪ್ರಕಟಿಸಿದ್ದಾರೆ ಎಂದರು.

ಗ್ರಾಮದಲ್ಲಿ ಇರುವ ಮತದಾರರ ಪಟ್ಟಿಯಲ್ಲಿ ಇರುವ ಜಾತಿ ಸಮುದಾಯಗಳನ್ನು ಬಿಟ್ಟು ಗ್ರಾಮದಲ್ಲಿ ಇರದೆ ಇರುವ ಸಮುದಾಯಗಳಿಗೆ ಮೀಸಲಾತಿ ನೀಡಲಾಗಿದೆ. ಇದರಿಂದಾಗಿ ಬಹಳಷ್ಟು ಜನರಿಗೆ ತಮ್ಮ ಜಾತಿಯಲ್ಲಿ ಮೀಸಲಾತಿಯಡಿಯಲ್ಲಿ ಸ್ಪರ್ಧೆ ಮಾಡಲು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಎಸ್.ಟಿ ಸಮಯದಾಯಕ್ಕೆ ಮೀಸಲಾತಿ ನೀಡಲಾಗಿದೆ. ನಮ್ಮ ಗ್ರಾಮದಲ್ಲಿ ಯಾವುದೇ ಎಸ್.ಟಿ ಸಮುದಾಯದವರು ಇಲ್ಲ. ಆದರೆ ಎಸ್‍ಟಿ ಸಮುದಾಯದವರಿಗೆ ಮೀಸಲಾತಿ ನೀಡಲಾಗಿದೆ. ಅದರ ಬದಲಿಗೆ ಎಸ್.ಸಿ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿದರು.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸದೆ ಹೋದರೆ ಕಾನೂನು ಹೋರಾಟ ಮಾಡುವದಾಗಿ ಅವರು ಎಚ್ಚರಿಸಿದ್ದಾರೆ. ಪ್ರಕಾಶ ಮಗದುಮ್ಮ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಮತ್ತೆ ಗರಿಗೆದರಿದ ಮೀನುಗಾರಿಕೆ

Spread the love ಚಿಕ್ಕೋಡಿ: ಬೇಸಿಗೆಯಲ್ಲಿ ಹನಿ ನೀರಿಲ್ಲದೆ ಬರಡು ಭೂಮಿಯಂತಾಗಿದ್ದ ಕೃಷ್ಣಾ ನದಿಗೆ ಈಗ ಮತ್ತೆ ಜೀವ ಕಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ