ಡಿಸೆಂಬರ್ 10ನೇ ತಾರೀಖು ಪ್ರೀಲಿಮನರಿ ಮ್ಯಾಚ್ ಇದೆ. 14ರಂದು ಅಂತಿಮ ಮ್ಯಾಚ್ ಇದೆ. ಯಾರು ಯಾರಿಗೂ ಪ್ರತಿಸ್ಪರ್ಧೆ ಅಲ್ಲ. ಒಂದು ಸ್ಥಾನಕ್ಕಾಗಿ ನಾನು ಸ್ಪರ್ಧೆ ಮಾಡಿದ್ದೇನೆ. ಬಿಜೆಪಿ ಗೆಲ್ಲುತ್ತದೆ ಎಂಬ ವಿಶ್ವಾಸ ನನಗಿದೆ. ನಮ್ಮ ಜಿಲ್ಲೆಯ ಎಲ್ಲ ನಾಯಕರು ಸೇರಿ ಇಡೀ ಪಕ್ಷ ನನ್ನ ಜೊತೆಗಿದೆ ಎಂದು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಹಾಂತೇಶ ಕವಟಗಿಮಠ ಅವರು ಸಿಎಂ ಬೊಮ್ಮಾಯಿ ಅವರು ನಮ್ಮ ಜಿಲ್ಲೆಯ ಎಲ್ಲ ನಾಯಕರು, ಶಾಸಕರು, ಸಚಿವರು, ಪಕ್ಷದ ಪ್ರಮುಖರ ಜೊತೆಗೆ ಒಂದು ಸಭೆ ಮಾಡಿದ್ದಾರೆ. ಒಟ್ಟಾರೆ ಬಿಜೆಪಿ ಅಭ್ಯರ್ಥಿಯಾಗಿರುವ ನನ್ನನ್ನು ಗೆಲ್ಲಿಸಬೇಕು ಎಂಬ ಬಗ್ಗೆ ಚರ್ಚೆಯಾಗಿದೆ. ನಾಳೆ ನಡೆಯಲಿರುವ ಮತದಾನ ವೇಳೆ ಹೆಚ್ಚು ಮತಗಳನ್ನು ಬಿಜೆಪಿಗೆ ಹಾಕಿಸಲು ನಿರ್ಧರಿಸಲಾಗಿದೆ.
Laxmi News 24×7