ನವದೆಹಲಿ: ರಾಜಸ್ಥಾನದಲ್ಲಿ ದೃಢಪಟ್ಟಿರುವ ಒಂಭತ್ತು ಪ್ರಕರಣಗಳಲ್ಲಿ ಅಲ್ಪ ತೀವ್ರತೆಯ ಒಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ. ಈ ಬಗ್ಗೆ 9 ಮಂದಿಗೆ ಚಿಕಿತ್ಸೆ ನೀಡುತ್ತಿರುವ ಜೈಪುರದ ಸವಾಯ್ ಮಾನ್ ಸಿಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಮಂಗಳವಾರ ತಿಳಿಸಿದ್ದಾರೆ.
ಕೊರೊನಾ ರೂಪಾಂತರಿ ಒಮಿಕ್ರಾನ್ ಗೆ ಆತಂಕಪಡುವ ಅಗತ್ಯವಿಲ್ಲ ಎಂಬ ಅಂಶ ಮತ್ತೂಮ್ಮೆ ಸಾಬೀತಾಗಿದೆ. ಇದರ ಜತೆಗೆ ಸೋಂಕಿನ ಮೊದಲ ಮತ್ತು ಎರಡನೇ ಅಲೆಯ ಅವಧಿಯಲ್ಲಿದ್ದಂತೆ ವಾಸನೆ ಗುರುತಿಸಲು ಅಸಾಧ್ಯವಾಗುವ ಮತ್ತು ರುಚಿವನ್ನು ಗ್ರಹಿಸಲು ಅಸಾಧ್ಯವಾಗುವ ಲಕ್ಷಣಗಳು ಅವರಲ್ಲಿ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಇದೇ ವೇಳೆ, ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಕೊರೊನಾ ಪತ್ತೆ ಹೆಚ್ಚಿನ ಸಂಖ್ಯೆಯಲ್ಲಿ ನಡೆಸುತ್ತಿರುವುದರಿಂದಲೇ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಯಾರೂ ಆತಂಕ ಪಡಬೇಕಾಗಿಲ್ಲ ಮತ್ತು ಮೂರನೇ ಅಲೆ ಶುರುವಾಗಿಲ್ಲ ಎಂದು ಆರೋಗ್ಯ ಕ್ಷೇತ್ರದ ತಜ್ಞರಾಗಿರುವ ರಿಜೋ ಎಂ.ಜಾನ್ ಮತ್ತು ಡಾ.ಚಂದ್ರಕಾಂತ್ ಲಹಾರಿಯಾ ಹೇಳಿದ್ದಾರೆ.