-ಗುಣಮುಖ ಪ್ರಮಾಣ ಶೇ.73.90ಕ್ಕೆ ಏರಿಕೆ
ನವದೆಹಲಿ: ದೇಶದಲ್ಲಿಂದು ಮಹಾಮಾರಿ ಕೊರೊನಾ ವೈರಸ್ ದಾಖಲೆ ಬರೆದಿದೆ. ಕಳೆದ 24 ಗಂಟೆಯಲ್ಲಿ 69,952 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 28,36,926ಕ್ಕೆ ಏರಿಕೆಯಾಗಿದೆ. ಜೊತೆ ಕೊರೊನಾದಿಂದ ಗುಣಮುಖರಾಗುತ್ತಿರುವ ಪ್ರಮಾಣ ಶೇ.73.90ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಇದುವರೆಗೂ 20.96 ಲಕ್ಷ ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ಕೊರೊನಾಗೆ 977 ಸಾವಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 53,866ಕ್ಕೆ ಏರಿಕೆ ಕಂಡಿದೆ.ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ನಿನ್ನೆ ಅತಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರ (6,28,642) ಕೊರೊನಾ ಪೀಡಿತ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಉಳಿದಂತೆ ತಮಿಳುನಾಡು (3,55,449), ಆಂಧ್ರ ಪ್ರದೇಶ (3,16,003), ಕರ್ನಾಟಕ (2,49,590) ಉತ್ತರ ಪ್ರದೇಶ (1,67,510) ಮತ್ತು ದೆಹಲಿ (1,56,139) ಕ್ರಮವಾಗಿ ಮೊದಲ ಆರು ಸ್ಥಾನಗಳಲ್ಲಿವೆ. ವಿಶ್ವದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.