Breaking News

ಮಹೇಶ್​ ಜೋಷಿ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ; ನ. 24ರಂದು ಅಧಿಕೃತ ಘೋಷಣೆ

Spread the love

ಬೆಂಗಳೂರು: ಶತಮಾನ ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ 26ನೇ ಅಧ್ಯಕ್ಷರಾಗಿ ನಾಡೋಜ ಡಾ. ಮಹೇಶ ಜೋಷಿ ಆಯ್ಕೆಯಾಗಿದ್ದಾರೆ. ರಾಜ್ಯದ ಒಟ್ಟು 420 ಮತಕೇಂದ್ರಗಳಲ್ಲಿ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಮತದಾನದಲ್ಲಿ 1.59 ಲಕ್ಷ ಮತದಾರರು ಭಾಗವಹಿಸಿದ್ದರು. ರಾತ್ರಿ ವೇಳೆಗೆ 5 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ಫಲಿತಾಂಶ ಪ್ರಕಟವಾಗಿತ್ತು.

ಈ ಪೈಕಿ ಮಹೇಶ ಜೋಷಿ ಅವರಿಗೆ 51,169 ಮತಗಳು ಲಭಿಸಿದ್ದು, ಎರಡನೇ ಸ್ಥಾನದಲ್ಲಿರುವ ಡಾ. ಶೇಖರಗೌಡ ಮಾಲಿಪಾಟೀಲ ಅವರಿಗೆ 17,656 ಮತಗಳು ಲಭಿಸಿವೆ.

ಅಂಚೆ ಮೂಲಕ ರವಾನೆಯಾಗುವ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ಹೊರರಾಜ್ಯದ ಒಟ್ಟು ಮತಗಳ ಸಂಖ್ಯೆ 4479 ಇದ್ದು, ವಿಳಾಸದಲ್ಲಿ ಮತದಾರ ಇಲ್ಲದ ಕಾರಣಕ್ಕೆ ಈಗಾಗಲೆ 1343 ಮತಗಳು ವಾಪಸಾಗಿವೆ. ಈ ಮತಗಳ ಎಣಿಕೆ ಬುಧವಾರ ಮಧ್ಯಾಹ್ನ ನಡೆಯಲಿದೆ‌. ಆದರೆ ಸದ್ಯ ಪ್ರಥಮ ಹಾಗೂ ದ್ವಿತೀಯ ಅಭ್ಯರ್ಥಿಗಳ ನಡುವಿನ ಅಂತರ ಅಗಾಧವಾಗಿರುವ ಕಾರಣ ಈ ಮತಗಳ ಎಣಿಕೆ ಔಪಚಾರಿಕತೆಗಷ್ಟೆ ಮೀಸಲಾಗಿದೆ. ನ.24ರ ಬುಧವಾರ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಧಿಕೃತವಾಗಿ ಫಲಿತಾಂಶ ಘೋಷಿಸಲಿದ್ದಾರೆ.

ದೂರದರ್ಶನ ಚಂದನ ವಾಹಿನಿಯಲ್ಲಿ ಅಧಿಕಾರಿಯಾಗಿ ‘ಮಧುರಮಧುರವೀ ಮಂಜುಳಗಾನ’ ಕಾರ್ಯಕ್ರಮದ ಮೂಲಕ ಚಂದನ ವಾಹಿನಿ ಹಾಗೂ ಸ್ವತಃ ತಮ್ಮನ್ನು ರಾಜ್ಯದ ಮನೆಮನೆಗೆ ಪರಿಚಯಿಸಿಕೊಂಡ ಹೆಗ್ಗಳಿಕೆ ಜೋಷಿ ಅವರದ್ದು. ಚುನಾವಣೆಯಲ್ಲಿ ಜೋಷಿ ಅವರಿಗೆ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಜತೆಗಿದ್ದರೆ, ಚುನಾವಣೆಗೆ ಮುನ್ನ ಮಂತ್ರಾಲಯ ಶ್ರೀಗಳು ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಬೆಂಬಲ ವ್ಯಕ್ತಪಡಿಸಿದ್ದರು.

ಜಿಲ್ಲಾವಾರು ಮತಹಂಚಿಕೆ

ಜಿಲ್ಲೆ: ಮಹೇಶ್ ಜೋಷಿ * ಶೇಖರಗೌಡ ಮಾಲಿಪಾಟೀಲ * ಸಿ.ಕೆ. ರಾಮೇಗೌಡ

  • ಬೆಂಗಳೂರು ನಗರ: *1044*
  • ಬೆಂ.ಗ್ರಾಮಾಂತರ: *121*
  • ಕೋಲಾರ:
  • ಚಿಕ್ಕಬಳ್ಳಾಪುರ: *55*
  • ರಾಮನಗರ:*86*
  • ತುಮಕೂರು:*1342*
  • ಚಿತ್ರದುರ್ಗ:
  • ದಾವಣಗೆರೆ:
  • ಶಿವಮೊಗ್ಗ: *408*
  • ಮೈಸೂರು: *610*
  • ಚಾಮರಾಜನಗರ: *835*
  • ಮಂಡ್ಯ: *205*
  • ಹಾಸನ: *735*
  • ಚಿಕ್ಕಮಗಳೂರು:
  • ಕೊಡಗು: *289*
  • ದಕ್ಷಿಣ ಕನ್ನಡ: *270*
  • ಉಡುಪಿ: *14*
  • ಬೆಳಗಾವಿ: *1419*
  • ಉತ್ತರ ಕನ್ನಡ: *601*
  • ಗದಗ: *766*
  • ಧಾರವಾಡ: *273*
  • ಹಾವೇರಿ: *455*
  • ವಿಜಯಪುರ: *566*
  • ಬಾಗಲಕೋಟೆ: *1955*
  • ಕಲಬುರಗಿ:
  • ಯಾದಗಿರಿ: *323*
  • ರಾಯಚೂರು: *1385*
  • ಬಳ್ಳಾರಿ: *913*
  • ಬೀದರ್:

Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ