ಗೋಕಾಕ : ಪ್ರವಚನ ಮಾಡುತ್ತಲೇ ಓರ್ವ ಸ್ವಾಮೀಜಿ, ಪರಮಾತ್ಮನ ಪಾದ ಸೇರಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ತೀವೃ ಹೃದಯಾಘಾತದಿಂದ ಸ್ವಾಮೀಜಿಯವರು ಲಿಂಗೈಕ್ಯರಾಗಿರುವ ಬಗ್ಗೆ ವರದಿಯಾಗಿದ್ದು, ಹೃದಯಾಘಾತದಿಂದ ಲಿಂಗೈಕ್ಯರಾಗಿರುವ ಸ್ವಾಮಿಜಿಯವರನ್ನು ಬಸವಯೋಗ ಮಂಟಪ ಟ್ರಸ್ಟ್ ಸಂಗನಬಸವ ಮಹಾಸ್ವಾಮೀಜಿ (53) ಎಂದು ಹೇಳಲಾಗುತ್ತಿದೆ.
ಈ ಘಟನೆ ನವೆಂಬರ್ 6ನೇ ತಾರೀಕೂ ನಡೆದಿದ್ದರೂ ಸಹ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ವಾಮಿಜಿ ನವೆಂಬರ್ 6 ರಂದು ತಮ್ಮದೇ ಹುಟ್ಟು ಹಬ್ಬ ಆಚರಿಸಿಕೊಂಡು ಆಶೀರ್ವಚನ ನೀಡುತ್ತಿದ್ದ ವೇಳೆ ಒಮ್ಮೇಲೆ ತೀವೃ ಹೃದಯಾಘಾತಕ್ಕೊಳಗಾಗಿ ಸ್ವಾಮಿಜಿ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ.
ಹುಟ್ಟು ಹಬ್ಬದ ನಿಮಿತ್ಯ ಆಶೀರ್ವಚನ ನೀಡುತ್ತಿದ್ದ ವೇಳೆ ಹೃದಯಾಘಾತದಿಂದ ಸ್ವಾಮೀಜಿ ಲಿಂಗೈಕ್ಯರಾಗಿರುವ ಘಟನೆ ಮಠದ ಭಕ್ತರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ.