ಎತ್ತರವಿದ್ದ ಮಕ್ಕಳಿಗೆ ಟಿಕೆಟ್
30ನೇ ಅಕ್ಟೋಬರ್ 2004ರ ಹಿಂದಿನ ಸುತ್ತೋಲೆಯ ಪ್ರಕಾರ ಮಕ್ಕಳು ಕನಿಷ್ಠ ಪಕ್ಷ 140 ಸೆಂ.ಮೀ ಉದ್ದ ಇದ್ದರೆ ಪೂರ್ಣ ಪ್ರಮಾಣದ ಟಿಕೆಟ್ ಹಾಗೂ 117 ಸೆಂ.ಮೀ ಉದ್ದವಿರುವ ಮಕ್ಕಳಿಗೆ ಅರ್ಧ ಟಿಕೆಟ್ ನೀಡಬೇಕಾಗಿ ಕಂಡಕ್ಟರ್‌ಗಳಿಗೆ (ನಿರ್ವಾಹಕರಿಗೆ) ತಿಳಿಸಲಾಗಿತ್ತು. ಇನ್ನು 117 ಸೆಂ.ಮೀ ಇರುವ ಹುಡುಗ ಹಾಗೂ ಹುಡುಗಿ 6 ವರ್ಷಗಳನ್ನು ಪೂರ್ಣಗೊಳಿಸಿರಬೇಕು. ಅಂತೆಯೇ 140 ಸೆಂ.ಮೀ ಉದ್ದವಿರುವ ಮಕ್ಕಳು 12 ವರ್ಷಗಳನ್ನು ಪೂರೈಸಿರಬೇಕು ಎಂಬುದಾಗಿ ಸುತ್ತೋಲೆ ನಿರ್ವಾಹಕರಿಗೆ ಮಾಹಿತಿ ನೀಡಿತ್ತು. ಸುತ್ತೋಲೆಯ ಪ್ರಕಾರ ಮಕ್ಕಳ ವಯಸ್ಸಿನ ಕುರಿತು ಏನಾದರೂ ಸಂಶಯಗಳಿದ್ದಲ್ಲಿ ಬಸ್‌ನೊಳಗೆಯೇ ಗೇಜ್‌ಗಳನ್ನು ಬಳಸಿ ಮಕ್ಕಳ ಎತ್ತರವನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರು.
ವಯಸ್ಸಿನ ದಾಖಲೆ ಇದ್ರೆ ಎತ್ತರದ ಅವಶ್ಯಕತೆ ಇಲ್ಲ
ಇತ್ತೀಚೆಗೆ ಬಿಡುಗಡೆ ಮಾಡಿರುವ ಸುತ್ತೋಲೆಯ ಪ್ರಕಾರ ಕೆಎಸ್‌ಆರ್‌ಟಿಸಿಯ ಮುಖ್ಯ ಟ್ರಾಫಿಕ್ ನಿರ್ವಾಹಕರು (ಕಾರ್ಯಾಚಣೆಗಳು) ನಿರ್ವಾಹಕರಿಗೆ ಸೂಚನೆ ನೀಡಿದ್ದು ಮಕ್ಕಳು ತಮ್ಮ ವಯಸ್ಸಿನ ಪುರಾವೆಯ ದಾಖಲೆಯನ್ನು ಹೊಂದಿದ್ದರೆ ಎತ್ತರವನ್ನು ಪರಿಶೀಲಿಸುವ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ. ವಯಸ್ಸನ್ನು ದೃಢೀಕರಿಸಿದ ನಂತರ ಇನ್ನಾವುದೇ ಮಾನದಂಡಗಳನ್ನು ಬಳಸುವ ಅಗತ್ಯವಿಲ್ಲವೆಂದು ಸುತ್ತೋಲೆಯಲ್ಲಿ ಕೂಡ ತಿಳಿಸಲಾಗಿದೆ.
ಇದನ್ನು : MLA Roja: ವಾಲಿಬಾಲ್ ಆಡಿ ಗಮನಸೆಳೆದ ರೋಜಾ
ಇದೇ ಸುತ್ತೋಲೆಯನ್ನು ಕೆಕೆಆರ್‌ಟಿಸಿ (ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ) ಹೊರಡಿಸಿದ್ದು, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ನೂ ಈ ಸುತ್ತೋಲೆಯನ್ನು ಪರಿಗಣಿಸಬೇಕಾಗಿದೆ. ಈ ಕುರಿತು ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿರುವ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಮುಖ್ಯ ಟ್ರಾಫಿಕ್ ನಿರ್ವಾಹಕರಾದ ರಾಜೇಶ್ ಹುದ್ದಾರ್, 2-3 ದಿನಗಳೊಳಗಾಗಿ ಹೇಳಿಕೆಯನ್ನು ಪ್ರಕಟಿಸುವುದಾಗಿ ಮಾಹಿತಿ ನೀಡಿದ್ದಾರೆ.
ಇದನ್ನು : ಹಬೀಬ್‌ಗಂಜ್ ನಿಲ್ದಾಣ ಈಗ ರಾಣಿ ಕಮಲಾಪತಿ; ಹೆಸರು ಬದಲಾವಣೆ ಹಿಂದಿದೆ ಕಾರಣ
ವ್ಯವಸ್ಥಿತ ಕ್ರಮ
ಸುತ್ತೋಲೆಯನ್ನು ಸ್ವಾಗತಿಸಿರುವ ಜಿಲ್ಲಾ ಮಕ್ಕಳ ಸಹಾಯವಾಣಿ ಸಂಯೋಜಕರಾದ ರವಿ ಭಂಡಾರಿ, ಕೆಲವು ಮಕ್ಕಳು ಎತ್ತರವನ್ನು ಅಳೆಯುವ ಸಮಸ್ಯೆಯ ಕುರಿತು ದೂರು ನೀಡಿದ್ದರು ಎಂದು ತಿಳಿಸಿದ್ದಾರೆ. ಬಸ್‌ನೊಳಗೆ ಮಕ್ಕಳ ಎತ್ತರವನ್ನು ಅಳೆದು ನಂತರ ಅವರಿಗೆ ಅರ್ಧ ಟಿಕೆಟ್ ಇಲ್ಲವೇ ಪೂರ್ಣ ಟಿಕೆಟ್ ಅನ್ನು ನೀಡಲಾಗುತ್ತಿತ್ತು. ಇದು ಕೆಲವೊಂದು ಮಕ್ಕಳಿಗೆ ಕಸಿವಿಸಿಯನ್ನುಂಟು ಮಾಡುತ್ತಿತ್ತು ಎಂದು ರವಿ ಭಂಡಾರಿ ತಿಳಿಸಿದ್ದಾರೆ.
ಮಕ್ಕಳ ಎತ್ತರ ಅಳೆಯುವುದು ಅವೈಜ್ಞಾನಿಕವಾದ ವಿಧಾನವಾಗಿದೆ. ಮಕ್ಕಳ ವಯಸ್ಸನ್ನು ದಾಖಲೆಯ ಮೂಲಕ ದೃಢೀಕರಿಸುವುದು ವ್ಯವಸ್ಥಿತವಾದ ಕ್ರಮವಾಗಿದೆ ಹಾಗೂ ಈ ಕ್ರಮ ಅನುಮೋದಿಸಬಹುದಾದುದು. ವಯಸ್ಸಿನ ಪುರಾವೆ ಇಲ್ಲದೇ ಹೋದಲ್ಲಿ ಪ್ರಕರಣವನ್ನು ಆಧರಿಸಿ ಅನಿಶ್ಚತತೆಯ ಪ್ರಯೋಜನವನ್ನು ಒದಗಿಸಬೇಕಾಗುತ್ತದೆ ಎಂದು ಬೆಂಗಳೂರಿನ ನಗರ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಅಂಜಲಿ ರಾಮಣ್ಣ ತಿಳಿಸಿದ್ದಾರೆ.