ಚಿತ್ರದುರ್ಗ: ಅವರಿಬ್ಬರು ಪ್ರೀತಿಸಿ 6 ತಿಂಗಳ ಹಿಂದಷ್ಟೇ ಮದ್ವೆ ಆಗಿದ್ರು. ಆಕೆ ಮೂರು ತಿಂಗಳ ತುಂಬು ಗರ್ಭಿಣಿ. ಬಡವನಾದರೆ ಏನು ಪ್ರೀಯೆ, ಕೈತುತ್ತು ತಿನಿಸುವೆ ಅಂತ ಪುಟ್ಟ ಗುಡಿಸಲಿಗೆ ಪತ್ನಿಯನ್ನ ಪಟ್ಟದರಸಿ ಮಾಡಿದ್ದ. ಕನಸಿನ ಕೂಸಿನ ಬಗ್ಗೆ ಕನಸು ಕಾಣುತ್ತ ಮಲಗಿದ್ದ ನವ ವಿವಾಹಿತರು ಅಲ್ಲದೇ ಜೀವಂತ ಸಮಾಧಿ ಆಗಿದ್ದಾರೆ.
ವಿರೋಧದ ನಡುವೆಯೂ ಮದುವೆ
ನಿನ್ನೆ ರಾತ್ರಿ ಚಿತ್ರದುರ್ಗದ ಹಿರಿಯೂರು ತಾಲೂಕಿನ ಹೋ.ಚಿ.ಬೋರಯ್ಯನ ಹಟ್ಟಿಯಲ್ಲಿ ಇಂತಹದೊಂದು ದುರಂತ ಸಂಭವಿಸಿದೆ. ಮೇಲಿನ ಪೋಟೋದಲ್ಲಿರೋ ದಂಪತಿ ಹೆಸರು ಚನ್ನಕೇಶವ, ಸೌಮ್ಯ ಎಂದು ಹೆಸರು. ಇವರಿಬ್ಬರು ಪರಸ್ಪರ ಪ್ರೀತಿಸಿ 6 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ರು. ಮನೆಯಲ್ಲಿ ಕಿತ್ತು ತಿನ್ನೋ ಬಡತನ ಇದ್ರೂ ಇವರಿಬ್ಬರ ನಡುವಿನ ಪ್ರೀತಿಗೆ ಕೊರತೆ ಇರಲಿಲ್ಲ.
. ತಂದೆ ಮನೆಯ ಗೋಡೆಯೇ ‘ಯಮ ಕಿಂಕರ’
ಮನೆಯಲ್ಲಿ ಮದ್ವೆಗೆ ಒಪ್ಪಿರಲಿಲ್ಲ ಅಂತ ತಂದೆ ಮನೆಯ ಪಕ್ಕದಲ್ಲೇ ಗುಡಿಸಲು ಹಾಕಿಕೊಂಡು ಕೂಲಿ-ನಾಲಿ ಮಾಡಿ ಜೀವನ ನಡೆಸುತ್ತಿದ್ದರು. ಸೌಮ್ಯ 3 ತಿಂಗಳ ತುಂಬು ಗರ್ಭಿಣಿಯಾಗಿದ್ದು, ಹುಟ್ಟುವ ಕೂಸಿನ ಬಗ್ಗೆ ಕನಸು ಕಟ್ಟಿಕೊಂಡಿದ್ರು. ಆದರೆ, ತಂದೆ ಮನೆಯ ಗೋಡೆಯೇ ವಿಧಿಯಂತೆ ಬಂದು ಮುಗ್ಧ ಮನಸ್ಸುಗಳನ್ನ ಬಲಿ ತಗೆದುಕೊಂಡಿದೆ. ಆಚೆ ಮನೆಯಲ್ಲಿದ್ದ ತಂದೆ ಕ್ಯಾಸಣ್ಣನೂ ಗೋಡೆ ಕುಸಿತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಸಾವನ್ನಪಿದ್ದಾರೆ.
: ಇಲ್ಲಿ ಜನರ ಗೋಳು ಕೇಳೋರೇ ಇಲ್ಲ
ಬುರುಜಿನರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋ.ಚಿ.ಬೋರಯ್ಯನಹಟ್ಟಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು 50 ವರ್ಷಗಳಿಂದಲೂ ಜೀವನ ನಡೆಸುತ್ತಿದ್ದಾರೆ. ಆದರೆ, ಇಲ್ಲಿನ ಯಾವ ಮನೆಗಳಿಗೂ ಹಕ್ಕು ಪತ್ರವಿಲ್ಲ. ಅತ್ತ ಕಂದಾಯ ಗ್ರಾಮವೂ ಅಲ್ಲ. ಯಾವುದೇ ಸೌಲಭ್ಯವೂ ಇಲ್ಲದ ಗ್ರಾಮದಲ್ಲಿ ನಿತ್ಯ ನರಕಯಾತನೆ ಅನುಭವಿಸ್ತಿದ್ದಾರೆ.