ಚಂಡೀಗಢ : ಪಂಜಾಬ್ ನಲ್ಲಿ ಪೆಟ್ರೋಲ್ ಮೇಲಿನ ಮಾರಟ ತೆರಿಗೆಯನ್ನು ಲೀಟರ್ ಗೆ ರೂ. 11.27 ರೂ. ಕಡಿತಗೊಳಿಸಿದ ನಂತರ ಪೆಟ್ರೋಲ್ ಬೆಲೆ ದೇಶದಲ್ಲಿಯೇ ಅತಿ ಹೆಚ್ಚು ಇಳಿಕೆ ಕಂಡ ರಾಜ್ಯವಾಗಿದೆ.
ಕೇಂದ್ರ ಸರ್ಕಾರ ಅಬಕಾರಿ ತೆರಿಗೆಯನ್ನು ಲೀಟರ್ ಗೆ ರೂ.
5 ರೂಪಾಯಿ ಮತ್ತು ಡೀಸೆಲ್ ಮೇಲೆ ರೂ. 10 ಕಡಿಮೆ ಮಾಡಿದ ನಂತರ, ಕೆಲವು ರಾಜ್ಯಗಳು ಸಹ ತೆರಿಗೆ ಕಡಿಮೆ ಮಾಡಿವೆ.
ಸದ್ಯ ಚರಣ್ ಜಿತ್ ಸಿಂಗ್ ಛನ್ನಿ ನೇತೃತ್ವದ ಪಂಜಾಬ್ ಸರ್ಕಾರ ಅಬಕಾರಿ ತೆರಿಗೆ ಮತ್ತು ವ್ಯಾಟ್ ನ್ನು ಕಡಿತಗೊಳಿಸಿದ ಪರಿಣಾಮವಾಗಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ.. 16.02 ಮತ್ತು ಡೀಸೆಲ್ ಬೆಲೆ ರೂ. 19.61 ರೂಪಾಯಿ ಕಡಿಮೆಯಾಗಿದೆ.