Breaking News

ಐಎಂಡಿಬಿ ಪಟ್ಟಿಯಲ್ಲಿ ‘ಶಾವ್ಶಾಂಕ್ ರಿಡೆಂಪ್ಶನ್’ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ‘ಜೈಭೀಮ್ ‘

Spread the love

ಚೆನ್ನೈ: ನಟ ಸೂರ್ಯ, ಲಿಜೋ ಮೋಲ್ ಜೋಸ್ ಮತ್ತು ಮಣಿಕಂದನ್ ಅವರನ್ನೊಳಗೊಂಡ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ‘ಜೈ ಭೀಮ್’ ಸಿನಿಮಾ ಹಾಲಿವುಡ್ ನ ಕಲ್ಟ್ ಕ್ಲಾಸಿಕ್ ದಿ ರಿಡೆಂಪ್ಶನ್’ ಅನ್ನು ಹಿಂದಿಕ್ಕಿದ್ದು, 250ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

 

ಜ್ಞಾನವೇಲ್ ನಿರ್ದೇಶನದ ಸೂರ್ಯ ಅವರ 2 ಡಿ ಎಂಟರ್ ಟೈನ್ ಮೆಂಟ್ ನಿರ್ಮಾಣದ ಜೈ ಭೀಮ್ ಚಿತ್ರ 9.6 ರೇಟಿಂಗ್ ನೆರವಿನೊಂದಿಗೆ ಅಗ್ರಸ್ಥಾನದಲ್ಲಿದೆ.

ಶಾವ್ಶಾಂಕ್ ರಿಡೆಂಪ್ಶನ್’ 9.3 ರೇಟಿಂಗ್ ನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಫ್ರಾನ್ಸಿಸ್ ಫೋರ್ಡ್ ಕೊಪ್ಪೊಲಾ ಅವರ ಶ್ರೇಷ್ಠ ‘ದಿ ಗಾಡ್‌ಫಾದರ್’ 9.2 ರೇಟಿಂಗ್ ನೊಂದಿಗೆ ಮೂರನೇ ಸ್ಥಾನದಲ್ಲಿದೆ.

ಸ್ಟೀವನ್ ಸ್ಪೀಲ್‌ಬರ್ಗ್‌ನ ‘ಶಿಂಡ್ಲರ್ಸ್ ಲಿಸ್ಟ್’, ಪೀಟರ್ ಜಾಕ್ಸನ್‌ರ ‘ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಟರ್ನ್ ಆಫ್ ದಿ ಕಿಂಗ್’, ಕ್ವೆಂಟಿನ್ ಟ್ಯಾರಂಟಿನೋ ಅವರ ‘ಪಲ್ಪ್ ಫಿಕ್ಷನ್’ ಮತ್ತು ಕ್ರಿಸ್ಟೋಫರ್ ನೋಲನ್ ಅವರ ‘ಇನ್‌ಸೆಪ್ಶನ್’ ಮೊದಲ 10 ಸ್ಥಾನದಲ್ಲಿರುವ ಇತರ ಚಿತ್ರಗಳಾಗಿವೆ.

ತೊಂಬತ್ತರ ದಶಕದಲ್ಲಿ ತಮಿಳುನಾಡಿನಲ್ಲಿ ಸಂಭವಿಸಿದ ನೈಜ ಘಟನೆಗಳಿಂದ ಪ್ರೇರಿತವಾದ ‘ಜೈ ಭೀಮ್’ ಇರುಲರ್ ಸಮುದಾಯದ ಅಸಹಾಯಕತೆಯನ್ನು ಬಳಸಿಕೊಳ್ಳಲು ಯತ್ನಿಸುವ ಅಮಾನವೀಯ ಪೊಲೀಸ್ ಪಡೆ ಹಾಗೂ ಅವರ ನೆರವಿಗೆ ಬರುವ ವಕೀಲರ ಕಥೆಯನ್ನು ಹೇಳುತ್ತದೆ.


Spread the love

About Laxminews 24x7

Check Also

ಯುಪಿಎಸ್​​ಸಿ ಪರೀಕ್ಷೆಯಲ್ಲಿ ಹಾಸನದ ಕೆ.ಎಸ್. ಧನ್ಯಗೆ 982ನೇ ರ‍್ಯಾಂಕ್

Spread the loveಹಾಸನ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್​​ಸಿ) ಈ ಸಾಲಿನ ಪರೀಕ್ಷೆಯಲ್ಲಿ ಸಕಲೇಶಪುರ ಪಟ್ಟಣದ ಮಲ್ಲಿಕಾರ್ಜುನನಗರದ ನಿವಾಸಿ ಕೆ.ಎಸ್.ಧನ್ಯ 982ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ