Breaking News

Madhagaja title song: ‘ಅಪ್ಪು ಮಾಮನನ್ನು ನಾವು ಯಾರೂ ಮರೆಯೋಕೆ ಆಗಲ್ಲ. ಈ ಹಾಡನ್ನು ನಾನು ಅವರಿಗಾಗಿ ಡೆಡಿಕೇಟ್​ ಮಾಡುತ್ತೇನೆ’ ಎಂದು ಶ್ರೀಮುರಳಿ ಹೇಳಿದ್ದಾರೆ.

Spread the love

ಅಯೋಗ್ಯ’ ಸಿನಿಮಾ ಖ್ಯಾತಿಯ ಮಹೇಶ್​ ನಿರ್ದೇಶನ ಮಾಡಿರುವ ‘ಮದಗಜ’ ಚಿತ್ರದ ಟೈಟಲ್​ ಸಾಂಗ್​ ಬಿಡುಗಡೆ ಆಗಿದೆ. ಈ ಸಲುವಾಗಿ ಗುರುವಾರ (ನ.11) ಸುದ್ದಿಗೋಷ್ಠಿ ನಡೆಸಲಾಯಿತು. ಶ್ರೀಮರಳಿ, ಆಶಿಕಾ ರಂಗನಾಥ್​ ಸೇರಿದಂತೆ ಇಡೀ ಚಿತ್ರತಂಡದವರು ಪುನೀತ್​ ರಾಜ್​ಕುಮಾರ್​ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ‘ಮದಗಜ ಚಿತ್ರದ ಮೊದಲ​ ಪ್ರೆಸ್​ ಮೀಟ್​ ಇದು. ಅಪ್ಪು ಮಾಮನಿಗೆ ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಹಾಡು ರಿಲೀಸ್​ ಮಾಡಿದ್ದೇವೆ. ಅವರ ನೆನಪಿನಲ್ಲಿ ಪೂಜೆ ಸಲ್ಲಿಸಿದ್ದೇವೆ. ಅಪ್ಪು ಮಾಮನನ್ನು ನಾವು ಯಾರೂ ಮರೆಯೋಕೆ ಆಗಲ್ಲ. ಈ ಹಾಡನ್ನು ನಾನು ಅವರಿಗಾಗಿ ಡೆಡಿಕೇಟ್​ ಮಾಡುತ್ತೇನೆ. ಅತ್ಯುತ್ತಮ ಗುಣಮಟ್ಟದಲ್ಲಿ ಮೂಡಿಬಂದಿರುವ ಈ ಹಾಡನ್ನು ಅವರು ನೋಡಿದ್ದರು’ ಎಂದು ಶ್ರೀಮುರಳಿ.

ಟೈಟಲ್​ ಸಾಂಗ್​ ನೋಡಿದ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ‘ಈ ಹಾಡನ್ನು ದೊಡ್ಡ ಪರದೆ ಮೇಲೆ ನೋಡಲು ಕಾಯುತ್ತಿದ್ದೇವೆ. ರವಿ ಬಸ್ರೂರು ಸಂಗೀತ ಸೂಪರ್​ ಆಗಿದೆ’ ಎಂಬಿತ್ಯಾದಿ ಕಮೆಂಟ್​ಗಳ ಮೂಲಕ ಫ್ಯಾನ್ಸ್​ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬೃಹತ್​ ಸೆಟ್​ಗಳು ಮತ್ತು ಅದ್ದೂರಿ ಮೇಕಿಂಗ್​ನಿಂದಾಗಿ ಈ ಹಾಡು ಗಮನ ಸೆಳೆಯುತ್ತಿದೆ. ಶ್ರೀಮುರಳಿ ಡ್ಯಾನ್ಸ್​ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಾಡಿಗೆ ಸಂತೋಷ್​ ವೆಂಕಿ ಧ್ವನಿ ನೀಡಿದ್ದಾರೆ. ನವೀನ್​ ಕುಮಾರ್​ ಛಾಯಾಗ್ರಹಣ, ಹರೀಶ್​ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ