Breaking News

ಇಬ್ಬರ ಹೆಂಡಿರ ಮುದ್ದಿನ ಗಂಡನ ಮೋಸದಾಟ ಬಯಲು

Spread the love

ಬಳ್ಳಾರಿ: ಮೊದಲ ಪತ್ನಿಗೆ ಹೇಳದೇ ಎರಡನೇ ಮದುವೆಯಾದ ಭೂಪ ಈಗ ಎರಡನೇ ಪತ್ನಿ ಜೊತೆಗೂ ಕಳ್ಳಾಟ ಆಡುತ್ತಿದ್ದಾನೆ. ಇದೀಗ ಈ ಚಾಲಾಕಿ ಸಬ್​ ರಿಜಿಸ್ಟ್ರಾರ್ ಮದುವೆ ಮಹಾಭಾರತ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಉಮೇಶ್ ಎಂಬಾತನೇ ಎರಡು ಮದುವೆಯಾಗಿ ಮಾಸದಾಟವಾಡುತ್ತಿರುವ ಸಬ್ ರಿಜಿಸ್ಟ್ರಾರ್.

ಈತ ಬಳ್ಳಾರಿಯಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕೆಲಸ ಮಾಡುತ್ತಿದ್ದನೆ. ಮೊದಲ ಮದುವೆಯನ್ನು ಮುಚ್ಚಿಟ್ಟು ನಜ್ಮೀರ್ ಖಾನ್ ಎಂಬ ಮಹಿಳೆಯನ್ನು ಎರಡನೇ ಮದುವೆಯಾಗಿದ್ದು, ಇದೀಗ ವಿಚಾರ ತಿಳಿದು ದೂರು ನೀಡಿದ್ದಾಳೆ.

ದೆಹಲಿ ಮೂಲದ ನಜ್ಮೀನ್​ ಬೆಂಗಳೂರಲ್ಲಿ ಉಮೇಶ್​ ಗೆ ಪರಿಚಯವಾಗಿದ್ದಾಳೆ. ನಜ್ಮೀನ್​ ಗಾಗಿ ಉಮೇಶ್, ರೆಹಾನ್​ ಅಹಮ್ಮದ್ ಎಂದು ಹೆಸರು ಬದಲಾಯಿಸಿಕೊಳ್ಳುತ್ತಾನೆ. ಸದ್ಯ ಉಮೇಶ್ ವಿರುದ್ಧ ನಜ್ಮೀನ್ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದು, ಬಳ್ಳಾರಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಅವರು ಈಗ ಎಲ್ಲಿದ್ದಾರೆ ಅಂತಾ ಗೊತ್ತಿಲ್ಲ. ನಿನ್ನೆ ರಿಜಿಸ್ಟ್ರಾರ್​ ಕಚೇರಿಯಲ್ಲಿ ಹೋಗಿ ನೋಡಿದ್ರೂ ಅವರು ಸಿಗಲಿಲ್ಲ. ಸದ್ಯ ನಾನು ಬಳ್ಳಾರಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ನಜ್ಮೀನ್ ಹೇಳಿದ್ದಾರೆ.

ಉಮೇಶ್​ ನ ಮೊಬೈಲಲ್ಲಿದ್ದ ಮೊದಲ ಪತ್ನಿ ಹಾಗೂ ಅವಳ ಮಕ್ಕಳ ಫೋಟೋಗಳನ್ನು ನೋಡಿದಾಗ ನಜ್ಮೀನ್​ ಗೆ ಅನುಮಾನ ಬಂದಿದ್ದು, ಬಳ್ಳಾರಿಗೆ ಬಂದು ವಿಚಾರಿಸಿದಾಗ ಉಮೇಶನ ರಂಗಿನಾಟ ಗೊತ್ತಾಗಿದೆ. ಇನ್ನು ಉಮೇಶ್ ಕೂಡ ನಜ್ಮೀನ್ ವಿರುದ್ಧ ತನಗೆ ಬ್ಲ್ಯಾಕ್​ಮೇಲ್ ಮಾಡ್ತಿರೋದಾಗಿ ಆರೋಪಿಸಿ ದೂರು ನೀಡಿದ್ದಾರೆ.

ಉಮೇಶ್ ವಿರುದ್ಧ ನಜ್ಮೀನ್ ದೂರು ದಾಖಲಿಸುತ್ತಿದ್ದಂತೆ ಆತ ಬಳ್ಳಾರಿಯಿಂದ ಎಸ್ಕೇಪ್ ಆಗಿದ್ದಾನೆ. ನಜ್ಮೀನ್ ಉಮೇಶನ ವಿರುದ್ಧ ದೂರು ನೀಡಿದ್ರೆ, ಉಮೇಶ, ನಜ್ಮೀನ್ ವಿರುದ್ಧವೇ ದೂರು ನೀಡಿದ್ದಾನೆ. ಈ ಪ್ರಕರಣ ಸಧ್ಯ ಗೊಂದಲದಲ್ಲದ್ದು, ಪೊಲೀಸರ ತನಿಖೆಯಿಂದಲೇ ಸತ್ಯ ಹೊರಬರಬೇಕಿದೆ.


Spread the love

About Laxminews 24x7

Check Also

ಬಿಎಂಐಸಿ ಯೋಜನೆಯನ್ನು ಮರುಪರಿಶೀಲಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್

Spread the loveಬೆಂಗಳೂರು: ಕಳೆದ 25 ವರ್ಷಗಳಲ್ಲಿ ಕೇವಲ ಒಂದು ಕಿಲೋ ಮೀಟರ್‌ ಮಾತ್ರ ನಿರ್ಮಾಣಗೊಂಡಿರುವ ಬೆಂಗಳೂರು ಮೈಸೂರು ಮೂಲ ಸೌಕರ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ