Breaking News

ಕೊಲ್ಹಾಪುರ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ಕಿರಣೋತ್ಸವ !

Spread the love

ಕೊಲ್ಹಾಪುರ – ಮೂರುವರೆ ಶಕ್ತಿಪೀಠಗಳ ಪೈಕಿ ಒಂದಾಗಿರುವ ಕರವೀರ ನಿವಾಸಿನೀ ಶ್ರೀ ಮಹಾಲಕ್ಷ್ಮೀದೇವಿಯ ಕಿರಣೋತ್ಸವವು ನವೆಂಬರ್ ೯ರಿಂದ ಪ್ರಾರಂಭವಾಯಿತು.

ಸಾಯಂಕಾಲ ೫ ಗಂಟೆಗೆ ಸೂರ್ಯಕಿರಣಗಳು ಮಹಾದ್ವಾರದ ಬಳಿಯಿತ್ತು. ಅನಂತರ ೫ ಗಂಟೆ ೨೫ ನಿಮಿಷಕ್ಕೆ ಗಣಪತಿ ಮಂದಿರ, ೫ ಗಂಟೆ ೩೫ ನಿಮಿಷಕ್ಕೆ ಸೂರ್ಯಕಿರಣಗಳು ಹೊಸ್ತಿಲಿನ ಒಳಗೆ ತಲುಪಿತು ಮತ್ತು ೫ ಗಂಟೆ ೪೬ ನಿಮಿಷಕ್ಕೆ ಸೂರ್ಯಕಿರಣಗಳು ದೇವಿಯ ಚರಣಗಳನ್ನು ಸ್ಪರ್ಶಿಸಿತು.

ಈ ಸಂದರ್ಭದಲ್ಲಿ ಹೆಚ್ಚು ಮಾಹಿತಿ ನೀಡಿದ ಪಶ್ಚಿಮ ಮಹಾರಾಷ್ಟ್ರ ದೇವಸ್ಥಾನ ಆಡಳಿತ ಸಮಿತಿಯ ಸಚಿವರಾದ ಶಿವರಾಜ ನಾಯಿಕವಡೆಯವರು, “ಕಿರಣೋತ್ಸವವು ಚೆನ್ನಾಗಿ ನಡೆಯಲು ಸಮಿತಿಯ ವತಿಯಿಂದ ಮಾರ್ಗದಲ್ಲಿರುವ ಎಲ್ಲಾ ಅಡಚಣೆಗಳನ್ನು ತೆಗೆದುಹಾಕಲಾಯಿತು. ಇನ್ನು ಉಳಿದಿರುವ ಅಡಚಣೆಗಳನ್ನು ತೆಗೆದುಹಾಕಲಾಗುವುದು. ಭಾವಿಕರಿಗೆ ಕಿರಣೋತ್ಸವವು ಚೆನ್ನಾಗಿ ನೋಡಲು ಆಗಲಿ ಎಂಬುದಕ್ಕಾಗಿ ದೇವಾಲಯದ ದಕ್ಷಿಣ ದ್ವಾರದಲ್ಲಿ ಈಗ ಒಂದು ‘ಡಿಜಿಟಲ್ ಸ್ಕ್ರೀನ್’ (ವಿಡಿಯೋ ನೋಡುವಂತಹ, ಒಂದು ದೊಡ್ಡ ಪರದೆ)ಅನ್ನು ಹಾಕಲಾಗಿದ್ದು ನಾಳೆಯಿಂದ ಮಿರಜಕರ ತಿಕಟೀ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ಬಳಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ಬಳಿ ಕೂಡ ‘ಡಿಜಿಟಲ್ ಸ್ಕ್ರೀನ್’ ಅಳವಡಿಸಲಾಗುವುದು” ಎಂದರು.


Spread the love

About Laxminews 24x7

Check Also

ಜಿಎಸ್​ಟಿ ಸರಳೀಕರಣದಿಂದ ಆದಾಯ ನಷ್ಟದ ಭೀತಿ: ಸಂದಿಗ್ಧತೆಯಲ್ಲಿ ಸಿಲುಕಿರುವ ರಾಜ್ಯ ಸರ್ಕಾರದ ಮುಂದೆ ಸೀಮಿತ ಆಯ್ಕೆ

Spread the loveಬೆಂಗಳೂರು: ಜಿಎಸ್​ಟಿ (Goods and Services Tax) ತೆರಿಗೆ ಸರಳೀಕರಣ ಮಾಡುವ ಮೂಲಕ ಜನರಿಗೆ ಕೇಂದ್ರ ಸರ್ಕಾರ ಸಿಹಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ