Breaking News

ಸಿದ್ದರಾಮಯ್ಯ ಅವರ ಕಾಲನ್ನ ಗಟ್ಟಿಯಾಗಿ ಹಿಡಿದು, ಮಗಳಿಗೆ ಕೆಲಸ ಕೊಡಿಸಿ ಅಂದಿದ್ದಾಳೆ ಮಹಿಳೆ.

Spread the love

ಬೆಂಗಳೂರು: ರಾಜಕಾರಣಿಗಳು ಹೋಗಿದ ಕಡೆ ಕೆಲವೊಬ್ಬರು ತಮ್ಮ ಮನವಿ ಸಲ್ಲಿಸೋದು ಸಹಜ. ನಮಸ್ಕರಿಸಿನೋ, ಪತ್ರದ ಮೂಲಕವೋ ಮನವಿ ಸಲ್ಲಿಸುತ್ತಾರೆ.

ಆದ್ರೆ ಇಲ್ಲೊಬ್ಬಳು ಮಹಿಳೆ ಮಾತ್ರ ವಿಭಿನ್ನ. ಸಿದ್ದರಾಮಯ್ಯ ಅವರ ಕಾಲನ್ನ ಗಟ್ಟಿಯಾಗಿ ಹಿಡಿದು, ಮಗಳಿಗೆ ಕೆಲಸ ಕೊಡಿಸಿ ಅಂದಿದ್ದಾಳೆ.

ನನ್ನ ಗಂಡ ನಿಮ್ಮ ಸಪೋರ್ಟರ್. ಈಗ ಅವರಿಲ್ಲ. ನಿಧನರಾಗಿದ್ದಾರೆ. ಮನೆ ನಡೆಯೋದು ಕಷ್ಟವಾಗಿದೆ. ದಯವಿಟ್ಟು ನನ್ನ ಮಗಳಿಗೆ ಕೆಲಸ ಕೊಡಿಸಿ ಎಂದು ಸಿದ್ದರಾಮಯ್ಯ ಅವರ ಕಾಲನ್ನ ಹಿಡಿದು ಆ ಮಹಿಳೆ ಗೋಗರೆದಿದ್ದಾಳೆ. ಈ ರೀತಿ ಕಾಲು ಹಿಡಿಯೋದು ಸಿದ್ದರಾಮಯ್ಯ ಅವರಿಗೆ ಸುತರಾಮ್ ಇಷ್ಟವಾಗೋಲ್ಲ. ಸಹಜವಾಗಿಯೇ ಕಾಲನ್ನು ಬಿಡಮ್ಮ, ಈ ರೀತಿಯೆಲ್ಲಾ ಮಾಡಬಾರದು ಎಂದಿದ್ದಾರೆ. ಅಷ್ಟಕ್ಕೂ ಬಿಡದೆ ಇದ್ದಾಗ ಸಿದ್ದರಾಮಯ್ಯ ಅವರೇ ಗದರಿದ್ದಾರೆ.

ಎಷ್ಟೇ ಸಾಫ್ಟ್ ಆಗಿ ಹೇಳಿದ್ರು, ಗದರಿ ಹೇಳಿದ್ರು ಮಹಿಳೆ ಕಾಲು ಬಿಡದೆ ಇದ್ದಾಗ, ಆಕೆಯ ಕಣ್ಣೀರು ನೋಡಿ ಸಿದ್ದರಾಮಯ್ಯ ಅವರು ಕರಗಿದ್ದಾರೆ. ಕೊನೆಗೂ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಆಗ ಆ ಮಹಿಳೆ ಸಿದ್ದರಾಮಯ್ಯ ಕಾಲು ಬಿಟ್ಟಿದ್ದಾರೆ.


Spread the love

About Laxminews 24x7

Check Also

ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ

Spread the loveಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ