Breaking News

ಮದುವೆ ಆದಮೇಲೆ ಫಸ್ಟ್‌ನೈಟ್‌ನಲ್ಲಿ ಏನು ಮಾಡ್ತಾರೆ?ರಚಿತಾ ರಾಮ್

Spread the love

ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಸಿಕ್ಕಾ ಪಟ್ಟೆ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಚಿತಾ ಕೈಯಲ್ಲೀಗ ಕಮ್ಮಿ ಅಂದರೂ 10 ರಿಂದ 12 ಸಿನಿಮಾಗಳಿವೆ. ಇಷ್ಟೊಂದು ಬ್ಯುಸಿಯಾಗಿದ್ದರೂ ಯಾವುದೇ ಕಾರ್ಯಕ್ರಮವನ್ನು ಮಿಸ್ ಮಾಡುವುದಿಲ್ಲ.

ಎಷ್ಟೇ ಆಯಾಸ ಆಗಿದ್ದರೂ ಅದನ್ನು ತೋರಿಸಿಕೊಳ್ಳುವುದಿಲ್ಲ. ಮುಖ ಗಂಟು ಮಾಡಿಕೊಂಡು ಮಾತಾಡಿದ್ದು ತೀರಾ ವಿರಳ. ಆದರೆ, ಆಗಾಗ ಆಡಿದ ಕೆಲವು ಮಾತು ವಿವಾದಕ್ಕೀಡಾಗಿದ್ದು ಇದೆ.

ಸದಾ ಸ್ಮೈಲಿಂಗ್ ಫೇಸ್ ಇಟ್ಟುಕೊಂಡು ಓಡಾಡುವ ರಚಿತಾ ರಾಮ್ ನಿನ್ನೆ ( ನವೆಂಬರ್ 9) ನಡೆದ ಲವ್ ಯು ರಚ್ಚು ಪ್ರೆಸ್ ಮೀಟ್‌ನಲ್ಲಿ ರಾಂಗ್ ಆದಂತಿತ್ತು. ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಡಿಂಪಲ್ ಕ್ವೀನ್ ಫೇಸ್‌ನಲ್ಲಿ ಡಿಂಪಲ್ ಮಾಯವಾಗಿತ್ತು. ಒಳಗೊಳಗೆ ಕೋಪ ಉಕ್ಕಿ ಬರುತ್ತಿದೆಯೇನೋ ಅನ್ನುವಂತಿತ್ತು. ಆದರೂ ಕೋಪವನ್ನು ನುಂಗಿಕೊಂಡು ಮಾತಾಡುತ್ತಿದ್ದಾರೆನೋ ಅನ್ನುವಂತಿತ್ತು. ಅಷ್ಟಕ್ಕೂ ಮಾಧ್ಯಮಗಳು ಕೇಳಿದ ಪ್ರಶ್ನೆ ಏನು? ರಚಿತಾ ರಾಮ್ ರಾಂಗ್ ಆಗಿದ್ದು ಯಾಕೆ? ಇವೆಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.

ರಚಿತಾ ರಾಮ್‌ರಿಂದ ಫಸ್ಟ್‌ನೈಟ್ ಪಾಠ

ರಚಿತಾ ರಾಮ್ ಸ್ಯಾಂಡಲ್‌ವುಡ್‌ನ ಬ್ಯೂಟಿಫುಲ್ ನಟಿ. ಸೂಪರ್‌ಸ್ಟಾರ್ ನಟರಿಂದ ಹಿಡಿದು ಯುವಪ್ರತಿಭೆಗಳೊಂದಿಗೆ ನಟಿಸುತ್ತಿರುವ ಏಕೈಕ ನಟಿ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ನಂಬರ್ ಒನ್ ಪಟ್ಟದಲ್ಲಿ ಇರುವ ಬ್ಯೂಟಿ ಕ್ವೀನ್. ಸದ್ಯ ಅಜೇಯ್ ರಾವ್ ಜೊತೆ ಲವ್ ಯು ರಚ್ಚು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಒಂದು ರೊಮ್ಯಾಂಟಿಕ್ ಸಾಂಗ್ ಇದೆ. ಮಣಿಕಾಂತ್ ಕದ್ರಿ ರಾಗ ಸಂಯೋಜಿಸಿದ್ದ ಈ ಹಾಡನ್ನು ನಿನ್ನೆ (ನವೆಂಬರ್ 9) ಪ್ರೆಸ್ ಮೀಟ್ ಮಾಡಿ ಬಿಡುಗಡೆ ಮಾಡಲಾಗಿತ್ತು. ಈ ಹಾಡಿನ ಒಂದು ದೃಶ್ಯದಲ್ಲಿ ರಚಿತಾ ರಾಮ್ ಬೋಲ್ಡ್ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಚಿತಾಗೆ ಪ್ರಶ್ನೆ ಮಾಡಲಾಗಿತ್ತು. ಆ ಪ್ರಶ್ನೆಗೆ ಡಿಂಪಲ್ ಕ್ವೀನ್ ಫಸ್ಟ್ ನೈಟ್ ಪಾಠ ಮಾಡಿದ್ದಾರೆ.

ಮದುವೆ ಆದಮೇಲೆ ಫಸ್ಟ್‌ನೈಟ್‌ನಲ್ಲಿ ಏನು ಮಾಡ್ತಾರೆ?

ರಚಿತಾ ರಾಮ್ ಈ ಹಿಂದೆ ಬೋಲ್ಡ್ ಸೀನ್‌ಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದೇ ವಿಚಾರಕ್ಕೆ ಸಂಬಂಧಿದಂತೆ ಪತ್ರಕರ್ತರು ಪ್ರಶ್ನೆ ಮಾಡಿದ್ದರು. ” ಹೌದು.. ಬೋಲ್ಡ್ ಸೀನ್ ಮಾಡಲ್ಲ ಅಂತ ಹೇಳಿದ್ದೆ. ಆದರೆ, ಬೋಲ್ಡ್ ಸೀನ್ ಮಾಡಿದ್ದೇನೆ ಅಂದರೆ ಅದರಲ್ಲಿ ಏನೋ ಒಂದು ವಿಷಯ ಇರುತ್ತೆ ಅಂತ ಅಲ್ವಾ? ಮದ್ವೆ ಆದ್ಮೇಲೆ ಫಸ್ಟ್ ನೈಟ್‌ನಲ್ಲಿ ಏನ್ ಮಾಡ್ತೀರಾ? ಮದುವೆ ಆದ್ಮೇಲೆ ಫಸ್ಟ್‌ನೈಟ್‌ನಲ್ಲಿ ಸಾಮಾನ್ಯವಾಗಿ ಏನ್ ಮಾಡ್ತಾರೆ? ರೊಮ್ಯಾನ್ಸ್ ಮಾಡ್ತಾರೆ ಅಲ್ವಾ? ಅದನ್ನೇ ಈ ಹಾಡಿನಲ್ಲೂ ಮಾಡಿದ್ದೇವೆ. ಡಿಟೈಲ್ ಆಗಿ ಹೋಗಿಲ್ಲ ಬೇಸಿಕ್ ಏನಿದೆಯೋ ಅದನ್ನೇ ಮಾಡಿದ್ದೇವೆ.” ಎಂದು ಉತ್ತರ ಕೊಟ್ಟಿದ್ದಾರೆ.

ಐ ಲವ್ ಯು ಸಿನಿಮಾ ಒಪ್ಪಿ ತಪ್ಪು ಮಾಡಿಬಿಟ್ಟೆ ಎಂದು ಕಣ್ಣೀರಿಟ್ಟಿದ ರಚಿತಾ

ರಚಿತಾ ರಾಮ್‌ ಉಪೇಂದ್ರ ಜೊತೆ ನಟಿಸಿದ ಐ ಲವ್ ಯು ಸಿನಿಮಾದ ಹಾಡೊಂದರಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಮಾತಾನಾಡಿ ಮಾಯವಾದೆ ಹಾಡಿನಲ್ಲಿ ರಚಿತಾ ಬೋಲ್ಡ್ ಅವತಾರ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಈ ವೇಳೆ ರಚಿತಾ ರಾಮ್ ಇನ್ನು ಇಂತಹ ಬೋಲ್ಡ್ ಪಾತ್ರಗಳಲ್ಲಿ ನಟಿಸುವುದಿಲ್ಲವೆಂದು ಕಣ್ಣೀರು ಹಾಕಿದ್ದರು. ” ಮನೆಯಲ್ಲಿ ಐ ಲವ್ ಯು ಚಿತ್ರದ ಹಾಡನ್ನು ನೋಡಿ ಬೇಸರ ಪಟ್ಟುಕೊಂಡಿದ್ದಾರೆ. ಅಮ್ಮ-ಅಮ್ಮ ಇಬ್ಬರೂ ಸಿನಿಮಾ ನೋಡುವುದಿಲ್ಲವೆಂದು ಹೇಳಿದ್ದಾರೆ. ತಂದೆ-ತಾಯಿ ಮನಸ್ಸಿಗೆ ತುಂಬಾ ಬೇಸರ ಮಾಡಿದ್ದೇನೆ. ಅಮ್ಮ ನಾಯಕಿಯಾಗಿ ಇಂತಹ ಪಾತ್ರ ಓಕೆ. ಆದರೆ ಮಗಳಾಗಿ ನಿನ್ನನ್ನು ಹೀಗೆ ನೋಡಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಐ ಲವ್ ಯು ಸಿನಿಮಾ ಒಪ್ಪಿಕೊಂಡು ತಪ್ಪು ಮಾಡಿಬಿಟ್ಟೆ.” ಎಂದು ಅತ್ತಿದ್ದರು.

ಈ ವಿಚಾರವಾಗಿ ರಚಿತಾ ರಾಮ್‌ಗೆ ಬೋಲ್ಡ್ ಸಿನಿಮಾ ನಟಿಸುವುದಿಲ್ಲವೆಂದು ಹೇಳಿ ಮತ್ತೆ ನಟಿಸಿದ್ದು ಏಕೆ ಎಂದು ಪ್ರಶ್ನೆ ಹಾಕಲಾಗಿತ್ತು. ಆಗ ಕಸಿವಿಸಿ ಮಾಡಿಕೊಂಡ ರಚಿತಾ ಹೊಸದಾಗಿ ಮದುವೆ ಆದ ಜೋಡಿ ಫಸ್ಟ್‌ನೈಟ್‌ನಲ್ಲಿ ಏನು ಮಾಡುತ್ತಾರೆ ಅನ್ನುವ ಪಾಠ ಮಾಡಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ