ಬಾಲಿವುಡ್ ನಟಿ ದಿಶಾ ಪಟಾನಿಯ ಬೆರಗುಗೊಳಿಸುವ ನೋಟ ಹಾಗೂ ಆಕರ್ಷಕ ನೃತ್ಯ ಕೌಶಲ್ಯಗಳನ್ನು ಹೊರತುಪಡಿಸಿ, ಅವರು ಅದ್ಭುತ ಫಿಟ್ನೆಸ್ ಅನ್ನು ಕೂಡ ಹೊಂದಿದ್ದಾರೆ.
ದಿಶಾ ಪಟಾನಿ ಆಗಾಗ್ಗೆ ತಮ್ಮ ವರ್ಕೌಟ್‌ಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಸೋಮವಾರದಂದು, ನಟಿ ಟೇಕ್ವಾಂಡೋದಲ್ಲಿ ಅಭ್ಯಾಸ ಮಾಡುವ ಕಿಕ್‌ನ ಒಂದು ರೂಪವಾದ 720 ಕಿಕ್ ಅನ್ನು ಪ್ರದರ್ಶಿಸಿದ್ದು, ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ದಿಶಾ ಪಟಾನಿ ಮೊದಲಿಗೆ ಜಿಗಿದು, ನಂತರ ಕಿಕ್ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ದೀಪಾವಳಿ ಹಬ್ಬ ವೇಳೆ ದಿಶಾ ಪಟಾನಿ ಅವರು ತಮ್ಮ ಕಿಕ್ ಪ್ರದರ್ಶಿಸುವ ವಿಡಿಯೋದೊಂದಿಗೆ ತಮ್ಮ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ. ವಿಡಿಯೋ ಹಂಚಿಕೊಂಡ ನಟಿ ಹಬ್ಬದ ಶುಭಾಶಯ ಕೋರುತ್ತಾ, ಪ್ರಾಣಿಗಳಿಗೆ ದಯೆ ತೋರಿ ಎಂದು ಬರೆದಿದ್ದಾರೆ.
ಇನ್ನು ದಿಶಾ ಪೋಸ್ಟ್‌ಗೆ ಆಯೇಶಾ ಶ್ರಾಫ್ ಅವರು ಕೂಡ ಪ್ರತಿಕ್ರಿಯಿಸಿದ್ದಾರೆ. ಆಯೇಷಾ ಶ್ರಾಫ್, ಟೈಗರ್ ಶ್ರಾಫ್ ಅವರ ತಾಯಿ, ಅವರು ದಿಶಾ ಪಟಾನಿ, ಟೈಗರ್ ಶ್ರಾಫ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ.
ಕೆಲವು ತಿಂಗಳ ಹಿಂದೆ ತನ್ನ ಗೆಳೆಯ ಟೈಗರ್ ಶ್ರಾಫ್ ಜೊತೆಗೆ ದಿಶಾ ಪಟಾನಿ ಮಾಲ್ಡೀವ್ಸ್ ಹೋಗಿದ್ದರು ಎನ್ನಲಾಗಿತ್ತು. ಈ ವೇಳೆ ಅಲ್ಲಿ ತೆಗೆದಿದ್ದ ಬಿಕಿನಿಯಲ್ಲಿನ ಫೋಟೋಗಳನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.