Breaking News

ಸಿಎಂಗೆ ‘ಹೈಕಮಾಂಡ್’ ಟೆನ್ಷನ್? ಬರೋಬ್ಬರಿ 1 ತಿಂಗಳ ಬಳಿಕ ದೆಹಲಿಗೆ ಸಿಎಂ ದೌಡು

Spread the love

ಬೆಂಗಳೂರು: ಬೈಎಲೆಕ್ಷನ್ ರಿಸಲ್ಟ್ ಹೊರಬಿದ್ದಿದ್ದೇ ಬಿದ್ದಿದ್ದು, ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವೇ ಸಂಭವಿಸ್ತಿದೆ. ಅದ್ರಲ್ಲೂ ಬಿಜೆಪಿ ನಾಯಕರು ಬೈಎಲೆಕ್ಷನ್ ಫಲಿತಾಂಶದಿಂದ ಚಿಂತೆಗೀಡಾಗಿದ್ದಾರೆ. ಇಷ್ಟೆಲ್ಲದರ ಮಧ್ಯೆ ಜನರ ವಿಶ್ವಾಸ ಗೆಲ್ಲಲು ಬೃಹತ್ ಯಾತ್ರೆಗೂ ಪ್ಲ್ಯಾನ್ ಆಗಿದೆ. ಆದ್ರೆ ಈ ನಡುವೆ ಸಿಎಂ ಬೊಮ್ಮಾಯಿ ದಿಢೀರ್ ದೆಹಲಿಗೆ ತೆರಳ್ತಿದ್ದಾರೆ.

ಬರೋಬ್ಬರಿ 1 ತಿಂಗಳ ಬಳಿಕ ದೆಹಲಿಗೆ ಸಿಎಂ ದೌಡು
ಸಿಎಂ ತವರು ಜಿಲ್ಲೆಯಲ್ಲೇ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಇದು ಸಿಎಂ ಸೇರಿದಂತೆ ರಾಜ್ಯ ನಾಯಕರ ಮೇಲೆ ಹೈಕಮಾಂಡ್ ಒತ್ತಡ ಹೆಚ್ಚಾಗುವಂತೆ ಮಾಡಿದೆ. ಈ ನಡುವೆ ದಿಢೀರ್ ಸಿಎಂ ದೆಹಲಿಗೆ ಪ್ರಯಾಣ ಬೆಳೆಸಿರೋದು ಭಾರಿ ಕುತೂಹಲ ಕೆರಳಿಸಿದೆ. ಇವತ್ತು ಬೆಳಗ್ಗೆ 9.45ಕ್ಕೆ ಕೆಐಎಬಿಯಿಂದ ತೆರಳಲಿರುವ ಸಿಎಂ, ಕೇಂದ್ರ ಸಚಿವರನ್ನ ಭೇಟಿಯಾಗಲಿದ್ದಾರೆ. ಹಾಗೆ ಸಂಜೆ ದೆಹಲಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಆದ್ರೆ ಬರೋಬ್ಬರಿ 1 ತಿಂಗಳ ಬಳಿಕ ದೆಹಲಿಗೆ ಸಿಎಂ ದೌಡಾಯಿಸಿದ್ದು ಯಾಕೆ ಅನ್ನೋದೆ ಪ್ರಶ್ನೆಯಾಗಿದೆ.


Spread the love

About Laxminews 24x7

Check Also

ನಟ ವಿಷ್ಣುವರ್ಧನ್, ನಟಿ ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸಚಿವ ಸಂಪುಟ ಸಭೆ ತೀರ್ಮಾನ

Spread the loveಬೆಂಗಳೂರು: ನಟ ವಿಷ್ಣುವರ್ಧನ್ ಹಾಗೂ ನಟಿ ಬಿ.ಸರೋಜಾದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ