ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ (Actor Puneet Rajkumar ) ಸಮಾಧಿ ಮುಂದೆ ನಾವು ವಿವಾಹವಾಗುವುದಾಗಿ ಒಂದು ಜೋಡಿ ಬಂದಿತ್ತು. ಆದ್ರೇ ನಾವು ನಿಮ್ಮ ತಂದೆ-ತಾಯಿಗಳೊಂದಿಗೆ ಬಂದ್ರೆ ಮಾತ್ರ ವಿವಾಹಕ್ಕೆ ಒಪ್ಪಿಗೆ ಸೂಚಿಸೋದಾಗಿ ತಿಳಿಸಿದ್ದೇನೆ.
ಅಪ್ಪುವಿಗೆ ಕೆಟ್ಟ ಹೆಸರು ಬರಬಾರದು ಎಂದು ನಟ ರಾಘವೇಂದ್ರ ರಾಜ್ ಕುಮಾರ್ ( Actor Raghavendra Rajkumar ) ತಿಳಿಸಿದ್ದಾರೆ.
ಈ ಕುರಿತಂತೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಟ ಪುನೀತ್ ರಾಜ್ ಕುಮಾರ್ ಸಮಾಧಿ ಸ್ಥಳವನ್ನು ನೋಡೋದಕ್ಕೆ, ಅಪ್ಪುವಿಗೆ ನಮಿಸೋದಕ್ಕೆ ಸಾವಿರಾರು ಸಂಖ್ಯೆ ಜನರು ಸಮಾಧಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಅಪ್ಪು ಮೇಲಿನ ಅವರ ಪ್ರೀತಿಗೆ ನಾ ಚಿರಋಣಿ. ಅಪ್ಪು ಎಲ್ಲೂ ಹೋಗಿಲ್ಲ. ನಮ್ಮಲ್ಲೇ, ಅಭಿಮಾನಿಗಳ ಮನದಲ್ಲೇ ನೆಲೆಸಿದ್ದಾರೆ ಎಂದರು.
ಪುನೀತ್ ಸಮಾಧಿ ಮುಂದೆ ವಿವಾಹ ಸಂಬಂಧ ಕೇಳಿದಂತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪುನೀತ್ ರಾಜ್ ಕುಮಾರ್ ಸಮಾಧಿ ಮುಂದೆ ವಿವಾಹ ಆಗೋದಾಗಿ ಒಂದು ಜೋಡಿ ಬಂದಿತ್ತು. ನಿಮ್ಮ ತಂದೆ-ತಾಯಿಗಳೊಂದಿಗೆ ಬಂದ್ರೆ ಮದುವೆಗೆ ಅನುಮತಿಸೋದಾಗಿ ಹೇಳಿ ಕಳುಹಿಸಿದ್ದೇನೆ. ಇವತ್ತು ಇವರು ಬರ್ತಾರೆ, ನಾಳೆ ಬೇರೆಯವರು ಬರ್ತಾರೆ. ಇದರಿಂದ ಅಪ್ಪುವಿಗೆ ಕೆಟ್ಟ ಹೆಸರು ಬರಬಾರದು ಎಂದರು.