Breaking News

ಅಭಿಮಾನಿಗಳು ದುಡುಕಿನ ನಿರ್ಧಾರ ಮಾಡಬೆಡಿ: ನೊಂದಿರುವ ಪುನೀತ್ ಕುಟುಂಬ

Spread the love

ಬೆಂಗಳೂರು: ಹೃದಯಾಘಾತದಿಂದ ವಿಧಿವಶರಾಗಿರುವ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ದು:ಖ ಬರಿಸಲಾಗದೇ ಅವರ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದರಿಂದ ಇನ್ನಷ್ಟು ನೊಂದಿರುವ ಪುನೀತ್ ಕುಟುಂಬ ಅಭಿಮಾನಿಗಳು ದುಡುಕಿನ ನಿರ್ಧಾರ ಮಾಡಬೆಡಿ ಎಂದು ಮನವಿ ಮಾಡಿದೆ.

ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾದಿರುವ ಪುನೀತ್ ರಾಜ್ ಕುಮಾರ್ ಸಹೋದರ ನಟ ರಾಘವೇದ್ರ ರಾಜ್ ಕುಮಾರ್, ಈಗಾಗಲೇ ನಾವೆಲ್ಲರೂ ಪುನೀತ್ ಅವರನ್ನು ಕಳೆದುಕೊಂಡು ತುಂಬಾ ನೋವಿನಲ್ಲಿದ್ದೇವೆ. ಅಭಿಮಾನಿಗಳು ಒಬ್ಬರಹಿಂದೊಬ್ಬರಂತೆ ಆತ್ಮಹತ್ಯೆಗೆ ಶರಣಾಗುತ್ತಿದ್ದರೆ ನಿಮ್ಮ ಕುಟುಂಬದ ಗತಿಯೇನು? ದಯವಿಟ್ಟು ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ನಮ್ಮ ನೋವನ್ನು ನಿಮ್ಮ ಕುಟುಂಬಕ್ಕೆ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.

ಹಲವು ಅಭಿಮಾನಿಗಳು ಸಾವಿಗೆ ಶರಣಾಗುತ್ತಿದ್ದಾರೆ ಎಂಬ ಮಾಹಿತಿ ಇದೆ. ನಾಳೆ ಈ ಘಟನೆಗೆ ಪುನೀತ್ ರಾಜ್ ಕುಮಾರ್ ಕಾರಣ ಎನ್ನುವಂತಾಗುತ್ತೆ. ಆತ್ಮಹತ್ಯೆಯಂತಹ ನಿರ್ಧಾರ ಮಾಡಿಕೊಂಡು ಕೆಟ್ಟ ಹೆಸರು ತರಬೇಡಿ. ನಮ್ಮ ಕುಟುಂಬ ಮಾತ್ರವಲ್ಲ ನಿಮ್ಮ ಕುಟುಂಬದ ಬಗ್ಗೆಯೂ ಯೋಚನೆ ಮಾಡಿ. ಪುನೀತ್ ಕಳೆದುಕೊಡು ಅವರ ಪತ್ನಿ ಅಶ್ವಿನಿ, ಮಕ್ಕಳು ನೋವಲ್ಲಿದ್ದಾರೆ. ಅಭಿಮಾನಿಗಳು ಆತ್ಮಹತ್ಯೆಯಂತಹ ನಿರ್ಧಾರ ಮಾಡುವ ಮೂಲಕ ಮತ್ತೆ ಮತ್ತೆ ನೋವು ಕೊಡಬೇಡಿ. ಇದರಿಂದ ನಮಗೂ ಒಳ್ಳೆಯದಲ್ಲ, ಪುನೀತ್ ಅಗಲಿಕೆಗೆ ಅಭಿಮಾನಿಗಳ ಆತ್ಮಹತ್ಯೆ ಪರಿಹಾರವಲ್ಲ, ಇದು ಅವರಿಗೆ ಗೌರವವನ್ನೂ ತರಲ್ಲ. ಅಭಿಮಾನಿಗಳ ಪಾದಕ್ಕೆ ನಮಸ್ಕಾರ ಮಾಡುತ್ತೇನೆ ಆತ್ಮಹತ್ಯೆ ನಿರ್ಧಾರ ಮಾಡಬೇಡಿ ಎಂದು ಕಳಕಳಿಯಿಂದ ಕೆಳಿಕೊಂಡಿದ್ದಾರೆ.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ