ಗದಗ: ಅದು ಇಂದೋ ನಾಳೆ ಬಿದ್ದೋಗೋ ಜೀವ. ಇಳಿ ವಯಸ್ಸಿನಲ್ಲಿ ನೆಮ್ಮದಿಯಿಂದ ಇರಬೇಕಾದ ಜೀವಕ್ಕೆ ಸೊಸೆ ಕಾಟ ವಿಪರೀತವಾಗಿದೆ. ಹೀಗಾಗಿ ಆ ಅಜ್ಜಿ ಈ ಲೋಕದ ಜೀವನವೇ ಬೇಡ ಅಂತ ಕೆರೆಗೆ ಹಾರಿದ್ಲು. ಆದ್ರೆ ಅಜ್ಜಿಯ ಅದೃಷ್ಟ ಗಟ್ಟಿ ಇತ್ತೂ ಅಂತ ಕಾಣಿಸುತ್ತೆ. ಅದೇ ಸಮಯಕ್ಕೆ ಬಂದ ಬೋಟಿಂಗ್ ಸಿಬ್ಬಂದಿ ಆಪತ್ಬಾಂಧವರಾಗಿದ್ದಾರೆ. ಮುಳುಗುತ್ತಿದ್ದ ಅಜ್ಜಿಯನ್ನ ರಕ್ಷಿಸಿ ದಡಸೇರಿಸಿದ್ದಾರೆ. ಆದ್ರೆ ಬದುಕುಳಿದ ಆ ಅಜ್ಜಿ ಬಿಚ್ಚಿಟ್ಟ ತನ್ನ ಆತ್ಮಹತ್ಯೆಯ ಯತ್ನದ ರಹಸ್ಯ ಮಾತ್ರ ಎಲ್ಲರ ಮನಕಲುಕುವಂತಿತ್ತು..
ಸೊಸೆ ಕಾಟಕ್ಕೆ ಬೇಸತ್ತು ಕೆರೆಗೆ ಹಾರಿದ್ದ ಅತ್ತೆ ಅದೃಷ್ಟವಷಾತ್ ಬಚಾವ್…! ಪೊಲೀಸರ ಮುಂದೆ ಸೊಸೆಯ ಕಾಟದ ಬಗ್ಗೆ ಹೇಳಿ ಅಜ್ಜಿ ಕಣ್ಣೀರು..! ಸೊಸೆಯ ಕಾಟಕ್ಕೆ ಕೆರೆಗೆ ಹಾರಿದ್ದ ಬಚಾವ್ ಮಾಡಿದ ಬೋಟಿಂಗ್ ಸಿಬ್ಬಂದಿ…! ನಾನೆನೂ ಕಾಟ ಕೊಟ್ಟಿಲ್ಲ ಅತ್ತೆಯೇ ಕಾಟ ಕೊಟ್ಟಿದ್ದಾಳಂತೆ ಸೊಸೆಯ ವಾದ…!
: ಹೌದು.. ಗದಗ ನಗರದ ಐತಿಹಾಸಿಕ ಭೀಷ್ಮ ಕೆರೆಯಲ್ಲಿ ಓರ್ವ ವೃದ್ಧೆ ಆತ್ಮಹತ್ಯೆಗೆ ಯತ್ನಿಸಿದ ಕಥೆಯೊಂದು ಅತ್ತೆ ಸೊಸೆಯ ಜಗಳದ ರಹಸ್ಯವನ್ನ ಬಯಲಿಗೆ ತಂದು ನಿಲ್ಲಿಸಿದೆ. ನಿನ್ನೆ ರಾತ್ರಿ ವೇಳೆ ಸೊಸೆ ಕಾಟ ತಾಳಲಾರದೆ ವೃದ್ಧೆಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ಲು. ಆದ್ರೆ, ಅದೃಷ್ಟವಷಾತ್ ಬಚಾವ್ ಆಗಿದ್ದಾಳೆ. ವೃದ್ಧೆ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಗ ಕೆರೆಯ ಆವರಣದಲ್ಲಿರೋ ಬಸವೇಶ್ವರ ಮೂರ್ತಿಯ ಗಾರ್ಡನ್ ಸಿಬ್ಬಂದಿಗಳು ಮತ್ತು ಕೆರೆಯ ಬೋಟಿಂಗ್ ಸಿಬ್ಬಂದಿಗಳು ನೋಡಿ ಕೆರೆಯಲ್ಲಿ ಮುಳುಗುತ್ತಿದ್ದ ವೃದ್ಧೆಯನ್ನ ರಕ್ಷಣೆ ಮಾಡಿದ್ದಾರೆ. ಶಾಂತಕ್ಕ ಹಿರೇಮಠ ಎಂಬ ಸುಮಾರು 70 ವರ್ಷದ ವೃದ್ಧೆ ಆತ್ಮಹತ್ಯೆಗೆ ಯತ್ನಿಸಿದಾಕೆ. ಗದಗ ನಗರದ ಟ್ಯಾಗೋರ್ ರಸ್ತೆಯ ನಿವಾಸಿ. ತನ್ನ ಹಿರಿಯ ಸೊಸೆ ವಿಜಯಲಕ್ಷ್ಮಿ ಎಂಬಾಕೆ ಅತ್ತೆಗೆ ನಿರಂತರವಾಗಿ ಕಿರುಕುಳ ನೀಡ್ತಿದ್ದಾಳೆ ಅಂತ ಆರೋಪಿಸಿದ್ದಾಳೆ. ಸರಿಯಾಗಿ ಊಟ ಕೊಡೋದಿಲ್ಲ. ಊಟ ಮಾಡಿದ್ರೆ ತಟ್ಟೆ ಕಸಿದುಕೊಂಡು ಬಾಯಿಗೆ ಬಂದಂತೆ ಬೈತಾಳೆ. ಕೆಟ್ಟ ಕೆಟ್ಟ ಬೈಗಳದಿಂದ ನನ್ನ ಜರೀತಾಳೆ. ದಿನ ಬೆಳಗಾದರೆ ಸಾಕು ನನ್ನ ಬೈಯುದರಲ್ಲೇ ಆಕೆಯ ದಿನ ಆರಂಭವಾಗ್ತದೆ ಅಂತ ಆರೋಪ ಮಾಡ್ತಿದ್ದಾಳೆ. ನನ್ನ ಮನೆ ಬಿಟ್ಟು ಎಲ್ಲಿಗಾದರೂ ಹೋಗು ಅಂತ ದೂಡ್ತಿದ್ದಳು. ಮಗ ಹೇಳಿದ್ರೆ ನನ್ನ ಮಗನಿಗೆ ಹೊಡೆಯುತ್ತಾಳೆ. ಅವನು ಮನೆಗೆ ಬಂದರೆ ಸಾಕು ನನಗೆ ಮತ್ತಷ್ಟು ಕಿರುಕುಳ ನೀಡಿ ಬೈದಾಡಿ ಈಕೆನ ಎಲ್ಲಿಗಾದರು ಬಿಟ್ಟುಬನ್ನಿ ಅಂತ ಜರಿತಿರ್ತಾಳೆ. ಹೀಗಾಗಿ ಸಾಕಾಗಿ ಜೀವ ಕಳೆದುಕೊಳ್ಳಲು ನಿರ್ಧರಿಸಿದ್ದೆ ಅಂತ ವೃದ್ಧೆ ಗೋಳಾಡ್ತಿದ್ದಾಳೆ.